ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
10:27 PM

ಮಳೆಹಾಡು...

Posted by ekanasu

ಸಾಹಿತ್ಯ

ಮುಗಿಲ ಮೊದಲ ಮುತ್ತಿನ ಹನಿಯನು ಪಡೆಯುವ ತವಕ..
ಬೆಂದ ಒಡಲ ಕರೆಯಿದು ಕೇಳು ಓ ಜಲಕನಕ..
ನಿನ್ನನೆ ಕಾಯುತ ಕಾತರದಿಂದು
ಇಳೆಗೆ ನೀ ಬಾರೆ ಓ ಅಮೃತಬಿಂದು
ನಿನ್ನದೇ ಕನಸನು ಧರೆ ಕಾಣುತ್ತಿರುವಾಗ...//೧//


ಜಲಲ ಜಲ ಧಾರೆ
ಧುಮ್ಮಿಕ್ಕಿ ಬಾರೆ
ಅಳುವ ಮೊಗದ ನೋವು ಕೊಚ್ಚಿ ಹೋಗಲಿ
ನಲಿವು ನಗು ತಾರೆ
ಧಾವಂತ ನೀರೆ
ಅಳುಕು ಮರೆತು ಹಾಡು ಶುರುವಾಗಲಿ
ಸೋತು ಸುಣ್ಣಾಗಿದೆ
ಸಾಕು ಈ ಧಗೆ
ನಿನ್ನದೇ ಕನಸಲಿ ಧರೆ ನಿದ್ರಿಸುತಿರುವಾಗ...//೨//

ಹಸಿರು ಬಣ್ಣವನು
ಬೇಗ ಮರಳಿಸಿನ್ನು
ಹೊತ್ತಿದ ಮರದಿ ಚಿಗುರು ಒಡೆಯಲಿ
ತುಕ್ಕು ಹಿಡಿದ ಹಾಗೆ
ಅಂದವಿಲ್ಲದ ಬಗೆ
ಬತ್ತಿದ ಕೆರೆಲಿ ನೀರು ಹರಿಯಲಿ
ನಾಳೆಯ ಮಳೆಯಲಿ ನೆನೆದು
ಇಂದು ನಗುತಿರಲು
ನಿನ್ನದೇ ಕನಸನು ಧರೆ ಕಾಣುತ್ತಿರುವಾಗ...//೩//

- ಚಿನ್ಮಯ ಬಾಯಾರು.

0 comments:

Post a Comment