ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಈ ಕನಸು ಅವಾರ್ಡ್

ಮೈಸೂರು:ಇಲ್ಲಿನ ದೇವರಾಜ ಮಾರುಕಟ್ಟೆಯಲ್ಲಿ ಮೂಲಭೂತ ಸೌಲಭ್ಯಗಳಿಲ್ಲ. ಕುಡಿಯುವ ನೀರಿನ ಸೌಲಭ್ಯವಾಗಲಿ, ಶೌಚಲಯದ ವ್ಯವಸ್ಥೆಯಾಗಲಿ ಸಮರ್ಪಕವಾಗಿಲ್ಲ. ಇದರಿಂದ ವ್ಯಾಪಾರಸ್ಥರಿಗೆ ಗ್ರಾಹಕರಿಗೆ ತೀವ್ರ ತೊಂದರೆಯಾಗುತ್ತಿದೆ. ಪ್ರಸ್ತುತ ದೇವರಾಜ ಮಾರುಕಟ್ಟೆಯು 882.5 ಅಡಿ ಉದ್ದ ಮತ್ತು 180 ಅಡಿ ಅಗಲವಿದೆ.ಈ ಮಾರುಕಟ್ಟೆ ಸಯ್ಯಾಜಿರಾವ್ ರಸ್ತೆ, ಧನ್ವಂತರಿ ರಸ್ತೆಗಳಿಗೆ ಒಳಗೊಂಡಂತೆ ಇದೆ. ಮಾರುಕಟ್ಟೆಯ ಒಳಗೆ ಪ್ರವೆಶಿಸಲು 7 ಮುಖ್ಯ ಧ್ವಾರಗಳಿವೆ. ಈ ಧ್ವಾರಗಳ ಮೂಲಕ ಮಾರುಕಟ್ಟೆ ಪ್ರವೇಶಿಸುವರ ಸಂಖ್ಯೆ ಸರಿಸುಮಾರು ದಿನಕ್ಕೆ ಏಳರಿಂದ ಎಂಟು ಸಾವಿರ ಮಂದಿ!. ಮಾರುಕಟ್ಟೆಯಲ್ಲಿ ತಿಂಗಳ ಬಾಡಿಗೆ ಮಳಿಗೆಗಳು 802. ಉಳಿದಂತೆ ದಿನದ ಬಾಡಿಗೆ ಕೊಡುವ ಮಳಿಗೆಗಳು 120 ಇವೆ. ದುಬಾರಿ ಬಾಡಿಗೆ ಪಡೆಯಲಾಗುತ್ತಿದೆಯಾದರೂ ಸರಿಯಾದ ಸೂರು ಕೊಡುವ ವ್ಯವಸ್ಥೆಯಿಲ್ಲ. ಮಳೆ ಬಂದರೆ ನೀರೆಲ್ಲಾ ಒಳಗೆ ಎಂಬಂತ ಸ್ಥಿತಿ...ಈ ರೀತಿ ನೋವು ತೋಡಿಕೊಳ್ಳುತ್ತಾರೆ ಮಾರುಕಟ್ಟೆ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಎಸ್.ಮಹಾದೇವ್.
- ಮಂಜುನಾಥ ಹೊಸಕೊಪ್ಪಲು
ಪ್ರಥಮ ಸಂವಹನ ಮತ್ತಿ ಪತ್ರಿಕೋದ್ಯಮ,ಮಾನಸ ಗಂಗೋತ್ರಿ, ಮೈಸೂರು

0 comments:

Post a Comment