ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ

ಮತ್ತೆ ಬಂದಿದೆ ನೋಡ ಹೊಸ ಯುಗಾದಿಯು...
ಇರುಳ ಕತ್ತಲೆಯ ಕಳೆದು ಹೊಸ ಬೆಳಕ ಹಾದಿಯಲಿ...
ಮತ್ತೆ ಬಂದಿದೆ ನೋಡ ಹೊಸ ಯುಗಾದಿಯು...'ಈ ರೀತಿಯಾಗಿ ಹೊಸ ವರ್ಷಕ್ಕೆ ಪಾದಾರ್ಪಣೆ.
ವರ್ಷದುದ್ದಕ್ಕೂ ಕಂಡುಂಡ ಬೇಸರಗಳಿಗೆ ಒಂದು ಪೂರ್ಣವಿರಾಮ. ಇರುಳು ಕಳೆದು ಬೆಳಕು ಹರಿಯುವ ವೇಳೆ ಹೊಸ ಆಸೆ...ಹೊಸ ಹುರುಪಿನೊಂದಿಗೆ...
ಮತ್ತೆ ಹಳೆಯ ಕಹಿ ನೆನಪುಗಳ ಕಳೆದು ಸಿಹಿಯುಂಬ ಆಸೆಯಲಿ....
ಅದೇ ಊರು, ಅದೇ ಗಾಳಿ, ಅದೇ ನೆಲ, ಅದೇ ಜಲ ಆದರೂ ಹೊಸ ತನದ ಹೊಸ ಹುರುಪು... ಇದು ಯುಗಾದಿಯ ಹೊಸತು.
ವಿವಾದ, ಗಲಭೆ, ಸೋಲು, ದೊಂಬಿ, ಕ್ಲೇಷ, ಕಷ್ಟ, ಹಾನಿ, ಒಡಕು ಇವೆಲ್ಲವುಗಳಿಗೆ ಒಂದು ಸಣ್ಣ ವಿದಾಯ ಹೇಳಿ ಮತ್ತೆ ಹೊಸ ಯೋಜನೆ, ಯೋಚನೆಗಳತ್ತ ಬೆಳಕು ಚೆಲ್ಲಲು ಮುಂದಡಿಯಿಡುವ ಶುಭದಿನವೇ ಈ ಯುಗಾದಿ!
ಅದಕ್ಕಾಗಿಯೇ ಬೆಳ್ಳಂ ಬೆಳಗ್ಗೆಯೇ ಕೋಗಿಲೆ ಮಧುರ ಧ್ವನಿಯಲ್ಲಿ ಕೂಗಿ ಕರೆದಿದೆ.... ಬಾನಾಡಿಗಳು ಆಗಸದಲ್ಲಿ ಚಿಲಿಪಿಲಿಗಾನ ಹಾಡುತ್ತಾ ಸಾಗಿವೆ. ಎಳೆಚಿಗುರ ಹಸಿರ ವರ್ಣರಾಶಿಯ ಮರ ಹಳದಿ ಹೂಗಳಿಂದ ಶೋಭಿಸುತ್ತಿವೆ... ಅದೇ ಆಗಸ ಎಂದಿಗಿಂತಲೂ ಶುಭ್ರವಾಗಿ ಕಂಗೊಳಿಸುತ್ತಿದೆ... ರವಿ ಹೊಸ ಹುರುಪಿನಿಂದ ಮೇಲೆದ್ದು ಬಂದಿದ್ದಾನೆ... ಇವೆಲ್ಲವೂ ಹೊಸ ವರ್ಷದಲ್ಲಿ ಹೊಸ ಆಸೆಗಳೊಂದಿಗೆ ಹೊಸ ತನದಿಂದ ಮೂಡಿಬರಲಾರಂಭಿಸಿವೆ... ಹೀಗೆ ಹೊಸಯುಗವೊಂದರ ಪ್ರಾರಂಭಕ್ಕೆ ನಾಂದಿಯಾಗಿದೆ.
ದ್ವೇಷ ಬೇಡ...ಬದಲಾಗಿ ಪ್ರೀತಿ ಬೇಕು. ಪರಸ್ಪರ ಪ್ರೀತಿ, ವಿಶ್ವಾಸಗಳಿಂದಷ್ಟೇ ಸುಖೀ ಸಮಾಜದ ನಿರ್ಮಾಣ ಸಾಧ್ಯ. ಈ ನಿಟ್ಟಿನಲ್ಲಿ ಹೊಸ ವರ್ಷ ಸಾಗಬೇಕು. ಇದಕ್ಕಾಗಿ ಜನತೆ ಸಿದ್ಧರಾಗಬೇಕು.
ವರ್ಷದುದ್ದಕ್ಕೂ ಕಹಿಯುಂಡು ಬೆಂದ ಜನ ಇನ್ನಾದರೂ ಸಿಹಿಯನುಭವಕ್ಕೆ ಕಾಲಿಡಬೇಕು. ಅದಕ್ಕಾಗಿ ಪ್ರತಿಯೊಬ್ಬರೂ ಮನಸ್ಸು ಮಾಡಬೇಕು. ತನ್ಮೂಲಕ ಸುಂದರ ಸಮಾಜದ ನಿರ್ಮಾಣಕ್ಕೆ ಕಾರಣರಾಗಬೇಕು. ಹೊಸ ವರ್ಷದಲ್ಲಿ ಸತ್ ಚಿಂತನೆ, ಸತ್ಪ್ರೇಮಗಳ ಮೂಲಕ ಸುಖೀ ಸಮಾಜದ ಕಲ್ಪನೆಗೆ ನಾವೆಲ್ಲ ಕಾರಣಿಗಳಾಗೋಣ... ಹೊಸ ನಾಡೊಂದರ ಉಗಮಕ್ಕೆ ನಾಂದಿ ಹಾಡೋಣ... ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ... ಹೊಸ ವರ್ಷಕೆ ಹೊಸ ಹರ್ಷವ ಹೊಸತು ಹೊಸತು ತರುತಿದೆ....
ರೂಪದರ್ಶಿ: ಕೃತಿಕಾ ಮಂಗಳೂರು.
ಚಿತ್ರ: ಪ್ರಸನ್ನ ಬಿ.ಪಿ.

0 comments:

Post a Comment