ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
10:58 PM

ಜಾನು ಶೀರ್ಷಾಸನ

Posted by ekanasu

ವೈವಿಧ್ಯ
ಜಾನು ಎಂದರೆ ಮೊಣಕಾಲು ಎಂದರ್ಥ. ಶೀರ್ಷವೆಂದರೆ ತಲೆ, ತಲೆಯನ್ನು ಬಗ್ಗಿಸಿ ಮೊಣಕಾಲಿನ ಮೇಲೆ ಇಡುವುದರಿಂದ ಈ ಆಸನಕ್ಕೆ ಜಾನು ಶೀರ್ಷಾಸನ ಎಂದು ಹೆಸರು ಬಂದಿದೆ.


ಅಭ್ಯಾಸ ಕ್ರಮ

ನೆಲದ ಮೇಲೆ ಕುಳಿತು ಎರಡು ಕಾಲುಗಳನ್ನೂ ಮುಂದಕ್ಕೆ ನೇರವಾಗಿ ಚಾಚಬೇಕು. ಎಡಕಾಲನ್ನು ಬಲತೊಡೆಯ ಮೂಲೆಗೆ (ಬುಡಕ್ಕೆ) ತಾಗುವಂತೆ ಮಡಿಸಬೇಕು. ಬಳಿಕ ಉಸಿರು ಬಿಟ್ಟು ಎರಡು ಕೈಗಳಿಂದಲೂ ಬಲಪಾದದ ಬೆರಳುಗಳನ್ನು ನಿಧಾನವಾಗಿ ಸೊಂಟದಿಂದ ಮುಂದೆ ಬಗ್ಗುತ್ತಾ ಹಿಡಿಯಬೇಕು. ಅನಂತರ ಇನ್ನೂ ಬಾಗುತ್ತಾ ಎರಡು ಕೈಗಳಿಂದ ಬಲಪಾದವನ್ನು ಹಿಡಿದು ಬಲಮಂಡಿಯ ಮೇಲೆ ಆರಂಭದಲ್ಲಿ ಹಣೆ, ಮೂಗು, ಕೊನೆಗೆ ಗದ್ದವನ್ನು ಇರಿಸಬೇಕು.

ಈ ಭಂಗಿಯಲ್ಲಿ ಆಳವಾಗಿ ಉಸಿರಾಟ ನಡೆಸುತ್ತಾ ಅರ್ಧ ನಿಮಿಷದಿಂದ ಒಂದು ನಿಮಿಷದವರೆಗೆ ಇರಬೇಕು. ಅನಂತರ ಮೇಲೆ ಹೇಳಿದ ಕ್ರಮದಂತೆ ಬಲ ಕಾಲನ್ನು ಮಡಿಸಿ ಅದೇ ರೀತಿ ಇನ್ನೊಂದು ಬದಿಯಲ್ಲಿ ಈ ಆಸನ ಅಭ್ಯಾಸ ಮಾಡಬೇಕು. ಅನಂತರ ತುಸು ವಿಶ್ರಾಂತಿ.

ಉಪಯೋಗಗಳು
ಈ ಆಸನದಿಂದ ಪಿತ್ತಕೋಶಕ್ಕೆ ಒಳ್ಳೆಯ ವ್ಯಾಯಾಮ ದೊರಕಿ ಜೀರ್ಣ ಶಕ್ತಿ ಹೆಚ್ಚುವುದು. ರಕ್ತ ಶುದ್ಧವಾಗುವುದು. ಮೂತ್ರಜನಕಾಂಗವು ಒಳ್ಳೆಯ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಬೆನ್ನು ಮತ್ತು ಸೊಂಟಕ್ಕೆ ಸಂಬಂಧಪಟ್ಟ ವ್ಯಾಯಾಮಗಳು ನಿವಾರಣೆಯಾಘಲು ತುಂಬಾ ಸಹಕಾರಿಯಾಗುತ್ತದೆ. ಈ ಆಸನವು ಕ್ರಮಬದ್ಧವಾಗಿ ಮಾಡುತ್ತಿದ್ದರೆ, ಹೆಚ್ಚಿನ ರಕ್ತದೊತ್ತಡ ಕಾಯಿಲೆ (ಬಿ.ಪಿ) ಬೇಗನೆ ನಿವಾರಣೆಯಾಗಲು ಸಹಕಾರಿಯಾಗುತ್ತದೆ ಹಾಗೂ ಮಧುಮೇಹ ಕಾಯಿಲೆ ತಡೆಗಟ್ಟಲು ತುಂಬಾ ಸಹಕಾರಿಯಾಗಿದೆ.


'ಯೋಗರತ್ನ' ಶ್ರೀ ಗೋಪಾಲಕೃಷ್ಣ ದೇಲಂಪಾಡಿ
ಅಂತರರಾಷ್ಟ್ರೀಯ ತೀರ್ಪುಗಾರರು.

0 comments:

Post a Comment