ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
9:14 PM

ಮಸ್ತ್ ಮಜಾ ಮಾಡು...

Posted by ekanasu

ಈ ಕನಸು ಸ್ಪೆಷಲ್ ಸ್ಟೋರಿ

ಇದೀಗ ರಜೆಯ ಮಜಾ...
ಓಹ್ ಏನು ರಜಾ ಎಂಥಾ ಖುಷಿ...
ಈಗ ಶಾಲೆಗಳಿಗೆಲ್ಲಾ ರಜೆ...ಮಕ್ಕಳಿಗೆ ರಜೆಯ ಮಜಾ... ಆದರೆ ಎಲ್ಲಡೆ ಈಗ ಮುಂಬರುವ ಶಾಲೆ, ಕಾಲೇಜುಗಳ ಕ್ಲಾಸ್ ಗಳ ಬಗ್ಗೆಯೇ ಪೂರ್ವ ತಯಾರಿಯೂ ಜೊತೆ ಜೊತೆಗೆ!. ಮಕ್ಕಳಿಗೆ ಅವರದ್ದೇ ಆದ ಯಾವುದೇ ಆಟಗಳಿಗೆ ಅಲ್ಲಿ ಅವಕಾಶವೇ ಇಲ್ಲ. ಇದ್ದರೂ ಇಂದಿನ ಅನೇಕ ಮಕ್ಕಳಿಗೆ ಮೊಬೈಲ್, ಕಂಪ್ಯೂಟರ್, ವಿಡಿಯೋ ಗೇಮ್ ಬಿಟ್ಟರೆ ಮತ್ಯಾವ ಸೊತ್ತುಗಳತ್ತವೂ ಗಮನವಿಲ್ಲ ಬಿಡಿ. ಸೃಜನ ಶೀಲ ಆಟಗಳು ಅವರ ಕಣ್ಣಿಗೆ ಬೀಳುವುದೇ ಇಲ್ಲ. ಇದಕ್ಕೆ ಹೆತ್ತವರೂ ಕಾರಣರಾಗುತ್ತಾರೆ ಎಂಬುದು ಗಮನಾರ್ಹ ಸಂಗತಿ. ಅಜ್ಜಿ ಮನೆ, ನೆಂಟರ ಮನೆ, ಆಪ್ತರ ಮನೆಗೆ ಹೋಗಲೂ ಇಂದಿನ ಮಕ್ಕಳಿಗೆ ಟೈಮಿಲ್ಲ! ಅಷ್ಟರ ಮಟ್ಟಿಗೆ ಬ್ಯುಸಿ!ಇಂತಹ ಪರಿಸ್ಥಿತಿಯಲ್ಲಿ ಒಮ್ಮೆ ನಮ್ಮ ಬಾಲ್ಯಗಳನ್ನು ನೆನಪಿಸಿದರೆ...ಖುಷಿಯಾಗುತ್ತದೆ...
ಆರ ರಜೆಯಲ್ಲಿ ನೆಂಟರ ಮನೆಗೆ ಪಯಣ. ಒಂದಿಷ್ಟು ಉಪಟಳ... ಇತರ ಮಕ್ಕಳೊಂದಿಗೆ ಹೊಳೆ, ನದಿಯಲ್ಲಿ ಆಟ, ಮರಳ ರಾಶಿಯಲ್ಲಿ ಕುಣಿದಾಟ, ಬೈಸಿಕಲ್ ಕಲಿಯುವ, ಕಲಿಸುವ ಮನಸ್ಸು... ಅತ್ತೆ ಮಗಳಿಗೊಮ್ಮೆ ಲೈನ್ ಹೊಡೆಯುವುದು... ಹೀಗೆ ಇದೆಲ್ಲಾ ಒಂದು ಸಿಹಿನೆನಪು...
ಆದರೆ ಈಗೆಲ್ಲಿದೆ ಆ ಸಂಭ್ರಮ... ಸಡಗರ...ಈಗೇನಿದ್ದರೂ ಮೊಬೈಲ್ ಇದ್ದರೆ ರಜಾ ಕಾಲವಿಡೀ ಮಜಾ... ಎಂಬಂತಾಗಿದೆ.ಒಮ್ಮೊಮ್ಮೆ ಅನಿಸುತ್ತದೆ ಮೊಬೈಲ್ ಮಕ್ಕಳ ಸೃಜನಶೀಲತೆಯನ್ನೇ ಕಸಿದುಕೊಂಡಿತೇ...

-ಮಹೇಶ್ ಪುಚ್ಚೆಪ್ಪಾಡಿ.

0 comments:

Post a Comment