ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಸಂಪಾದಕೀಯ
ಮತ್ತೆ ಬಂದಿದೆ ಯುಗಾದಿ...ಕಹಿ ನೆನಪ ಮರೆಯೋಣ...ಸಿಹಿ ಮೆದ್ದು ಸಾಗೋಣ...ಹೊಸ ದಿನದ ಹೊಸಘಳಿಗೆ ಸದ್ ವಿಚಾರದಿ ಪ್ರಾರಂಭಿಸೋಣ...


ಹೌದು...ಅತ್ಯಂತ ಕಹಿ ನೆನಪುಗಳ ಸರಮಾಲೆ...ದಿನಬೆಳಗಾದರೆ ರಕ್ತ...ಕಣ್ಣೀರು... ಕೊಲೆ,ಸುಲಿಗೆ,ದೊಂಬಿ...ಪ್ರಕೃತಿಯ ಮೇಲಣ ಅತ್ಯಾಚಾರ, ಅನಾಚಾರ...ಮುನಿದ ಪ್ರಕೃತಿ, ಛೇ...ಹೀಗೂ ಉಂಟೆ...ಅನ್ನಿಸೋರೀತಿಯ ಅಹಿತಕರ ಘಟನೆಗಳೊಂದಿಗೆ ದಿನಬೆಳಗಾಗುತ್ತಿರುವುದು ನೋಡುತ್ತಿರುವಾಗ ಮನದಲ್ಲದೇನೋ ವೇದನೆ...ಯಾತನೆ...ಯಾಕೆ ಹೀಗಾಗುತ್ತಿದೆ ಎಂಬ ಪ್ರಶ್ನೆಯ ಮೇಲಣ ಪ್ರಶ್ನೆ...!

ಮನದತುಂಬೆಲ್ಲಾ ಕಹಿನೆನಪುಗಳ ಸರಮಾಲೆ...ಸಿಹಿ ನೆನಪುಗಳ ಮೆರವಣಿಗೆ ಎಂದೋ ಮಾಯ...ಅವರಸರದ ಯುಗದಲ್ಲಿ ಎಲ್ಲರ ಮನೆ ಮನದಲ್ಲೂ ಇದೇ ಮಾತು...ಕಥೆ...ಈ ರೀತಿ ಕಳೆದು ಹೋಗಿದೆ ದಿನಗಳು...

ಇಂದು ಪರಕೀಯ ಸಂಸ್ಕೃತಿಯ ದಾಸ್ಯದೊಳಗೆ ಸಿಕ್ಕು ಉದಾತ್ತವಾದ ಸಂಸ್ಕೃತಿಯುಳ್ಳ ಭಾರತ ದೇಶದ ಪ್ರಜೆಗಳು ಮೋಜಿನ ಮಂದ ಬೆಳಕಿನಲ್ಲಿ ತೂರಾಡುತ್ತಿದ್ದಾರೆ. ಪರಕೀಯರ ಆ ವಿಕೃತ ಸಂಸ್ಕೃತಿಯನ್ನು ಪ್ರೀತಿಸುವುದರೊಂದಿಗೆ ಭಾಷಾ ಅಂಧಾಭಿಮಾನವನ್ನು ಅನುಸರಿಸುತ್ತಾ ಅದೇ ಮದದಲ್ಲಿ ತೇಲಿಹೋಗುತ್ತಿದ್ದಾರೆ... ಭಾರತೀಯ ಸಂಸ್ಕೃತಿ, ಸದ್ ವಿಚಾರಗಳ ಬಗ್ಗೆ ಈಗಿನ ತಲೆಮಾರಿನ ಮಂದಿಗೆ ಯಾವೊಂದು ಭಾವನೆಗಳೂ ಇಲ್ಲವೇನೋ ಎಂಬಷ್ಟರ ಮಟ್ಟಿಗೆ ಬದಲಾವಣೆಯ ಗಾಳಿ ಬೀಸಿಹೋಗಿದೆ...

ಇರಲಿ...
ಹಳೆತಲೆಮಾರಿನ ಸಾಕ್ಷಿಕಲ್ಲುಗಳಂತಿರುವ ಕೆಲ ಕೊಂಡಿಗಳು ಇನ್ನೂ ಉಳಿದುಕೊಂಡಿವೆ. ಇನ್ನಾದರೂ ದಾಸ್ಯದ ಜಡದಿಂದ ಎದ್ದು ನಮ್ಮ ಸಂಸ್ಕೃತಿಯ ಆಳ ಅಗಲವನ್ನೊಮ್ಮೆ ಮೆಲ್ಲನೆ ನೋಡುವ ಪ್ರಯತ್ನಕ್ಕೆ ಭಾರತೀಯರಾದ ನಾವು ಆಸಕ್ತಿ ಮೂಡಿಸಬೇಕಾಗಿದೆ. ಹಾಯ್, ಹೌ ಆರ್ ಯೂ, ಲೌ ಯೂ, ಹ್ಯಾಪಿ ಬರ್ತಡೇ, ಹಾಯ್ ಮಾಮ್...ಡ್ಯಾಡ್...ಗಳೆಂಬ ಆಂಗ್ಲ ಪ್ರವೃತ್ತಿಯಿಂದ ಹೊರಬಂದು ನಮ್ಮ ಸಂಸ್ಕೃತಿ ಆಚರಣೆಗಳತ್ತ ಅವಲೋಕಿಸುವ ಪ್ರವೃತ್ತಿ ಮೂಡಬೇಕಾಗಿದೆ. ಇದಕ್ಕೆ ಪ್ರತಿಮನೆಯಲ್ಲಿರುವ ಹಿರಿಯರು, ಮಕ್ಕಳ ಹೆತ್ತವರು ಕಾರಣರಾಗಬೇಕಾಗಿದೆ. ಮೊದಲು ಪೋಷಕರು ಈ ಪ್ರವೃತ್ತಿ ರೂಢಿಸಿಕೊಳ್ಳಬೇಕು.ಆಗ ತನ್ನಿಂದ ತಾನಾಗಿ ಮಕ್ಕಳಲ್ಲಿ ಈ ಭಾವನೆ ಮೂಡಲು ಸಾಧ್ಯ.

ಹೋದ ಕಾಲ ಮತ್ತೆ ಬರದು...ಹೌದು...,
ವಿಕೃತಿ ಸಂವತ್ಸರ ಕಳೆದು ಖರ ಸಂವತ್ಸರದ ಹೊಸಬೆಳಕು ಮೂಡಲಿದೆ. ಕಳೆದುಹೋದ ಕೆಟ್ಟ ಘಳಿಗೆಗಳು ಅಲ್ಲೇ ಉಳಿದುಹೋಗಲಿ...ಆ ನೆನಪು ಅಲ್ಲೇ ಮರೆಯಾಗಲಿ...ವಿಕೃತಿಗೆ ದೊಡ್ಡ ವಿದಾಯ ಹೇಳಿ ಬರುವ ಸುಕೃತಿಗೆ ಸ್ವಾಗತ ಕೋರೋಣ...ಮಾವಿನೆಲೆಯ ತೋರಣದೊಂದಿಗೆ ಹೊಸ ಬೆಳಕ ಸ್ವಾಗತಿಸೋಣ.ಹೊಸ ವರ್ಷಾಚರಣೆಯ ಮಾಡೋಣ...ಹೊಸ ಚಿಂತನೆಗೆ ನಾಂದಿ ಹಾಡೋಣ...ಅಳಿಯುತ್ತಿರುವ ಸಂಸ್ಕೃತಿಯನ್ನು ಉಳಿಸುವತ್ತ ಚಿಂತಿಸೋಣ...ಸದ್ ವಿಚಾರ, ಸತ್ ಚಿಂತನೆಯೊಂದಿಗೆ ಮತ್ತೆ ಹೊಸಬಾಳು ಆರಂಭಿಸೋಣ...

ಕತ್ತಲ ಕೋಟೆಯನ್ನೊಡೆದು ಬೆಳಕ ಹಾದಿ ಹಾಸೋಣ... ಜ್ಞಾನದ ದೀವಿಗೆ ಹಚ್ಚೋಣ...ಹೊಸ ಜೀವನದ ಪಥವನ್ನಾರಂಭಿಸೋಣ...ಮನದ ಕಲ್ಮಶ ದೂರಮಾಡೋಣ...ಪ್ರೀತಿ ಹಂಚೋಣ...ಮನಸು ಕಟ್ಟೋಣ...ಈ ರೀತಿಯ ಚಿಂತನೆ ದೇಶದುದ್ದಗಲಕ್ಕೂ ಆಗಬೇಕಾಗಿದೆ. ಯುಗಾದಿ ಯುಗದ ಆದಿ...ಅರ್ಥಪೂರ್ಣವಾಗಿ ಯುಗಾದಿ ಆಚರಣೆಯಾಗಲಿ.

ಈ ಕನಸು ಓದುಗ ಮಿತ್ರರಿಗೆ, ಬರಹಗಾರರಿಗೆ, ಪ್ರೋತ್ಸಾಹಕರಿಗೆ ಯುಗಾದಿ ಶುಭ ತರಲಿ.ಎಲ್ಲರ ಬಾಳು ಬೆಳಗಲಿ, ಬಂಗಾರವಾಗಲಿ...ಸರ್ವೇ ಜನಾಃ ಸುಖಿನೋ ಭವಂತು...ಶುಭಮಸ್ತು.

- ಸಂಪಾದಕ.

2 comments:

Vineeth said...

For all the readers, and moderator wishes for Happy Yugadi..

Anonymous said...

Happy Ugadi My Dear Friend...

Post a Comment