ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಆಟ - ಅವಲೋಕನ
ಶತಕ ವಂಚಿತ ಗೌತಮ್ ಗಾಂಭೀರ್

ಬೆಂಗಳೂರು: ವಿಶ್ವಕಪ್ ಕ್ರಿಕೆಟ್ ಪಂದ್ಯಾಟದಲ್ಲಿ ಶ್ರೀಲಂಕಾ 274ಗುರಿಯನ್ನು ಬೆನ್ನೆತ್ತಿದ ಭಾರತ ತಂಡಕ್ಕೆ ಆಸರೆನೀಡಿದ್ದು ಗೌತಮ್ ಗಾಂಭೀರ್ ಅವರ ಗಂಭೀರ ಆಟದ ಪ್ರದರ್ಶನ. ಆರಂಭದಲ್ಲಿ ಸೆಹ್ವಾಗ್, ತೆಂಡುಲ್ಕರ್ ಕಳಪೆ ಪ್ರದರ್ಶನ ನೀಡಿ ಫೆವಿಲಿಯನ್ ಗೆ ಮರಳಿದ ಸಂದರ್ಭದಲ್ಲಿ ಗಾಂಭೀರ್ ಅವರ ಅತ್ಯಂತ ಶಿಸ್ತುಬದ್ಧ ಆಟದ ಪ್ರದರ್ಶನವೇ ಭಾರತ ತಂಡಕ್ಕೆ ಮೂಲ ಆಸರೆಯಾಗುವಂತಾಯಿತು. ಇದೇ ಸಂದರ್ಭದಲ್ಲಿ ವಿರಾಟ್ ಖೋಲಿ ಅವರ ವಿಕೆಟ್ ಪಥನವಾಗುತ್ತಿದ್ದಂತೆಯೇ ಆಗಮಿಸಿದ ತಂಡದ ನಾಯಕ ಎಂ.ಎಸ್.ಧೋನಿ ಗೌತಮ್ ಗಾಂಭೀರ್ ಅವರಿಗೆ ಉತ್ತಮ ಸಾಥ್ ನೀಡಿದರು. ತನ್ಮೂಲಕ ನಾಯಕನ ಜವಾಬ್ದಾರಿಯುತ ಆಟ ಪ್ರದರ್ಶಿಸಿದರು. 34.1ಓವರ್ ಗಳ ಸಂದರ್ಭದಲ್ಲಿ ಗೌತಮ್ ಗಾಂಭೀರ್ 102ಬಾಲ್ ಗಳಿಗೆ 83ರನ್ ಕಲೆಹಾಕಿದ್ದರು, ಈ ಪೈಕಿ 8 ಫೋರ್ ಬಾರಿಸಿ ತಮ್ಮ ಬ್ಯಾಟಿಂಗ್ ಚಾಕಚಕ್ಯತೆ ಮೆರೆದರು.

ಫೋರ್ ...ಫೋರ್...
ಗೌತಮ್ ಗಾಂಭೀರ್ ಅತ್ಯಂಕ ಕಾಳಜಿಯ ಆಟವನ್ನು ಪ್ರದರ್ಶಿಸುತ್ತಾ ಸಾಗಿದರು. ತನ್ಮೂಲಕ ತಂಡವನ್ನು ಗೆಲುವಿನ ಬಾಗಿಲಿನತ್ತ ಕೊಂಡೊಯ್ಯುವಲ್ಲಿ ಗಾಂಭೀರ್ ಪ್ರಮುಖ ಕಾರಣರಾಗಿದ್ದಾರೆ. ಗೌತಮ್ ಗಾಂಭೀರ್ ಧೋನಿಗೆ ಸಾಥ್ ನೀಡುತ್ತಾ ಸಾಗಿದರು. 9ಫೋರ್ ಗಳನ್ನು ಬಾರಿಸುವ ಮೂಲಕ ತಮ್ಮ ವೈಯಕ್ತಿಕ ಮೊತ್ತ ಹೆಚ್ಚಳಕ್ಕೆ ಕಾರಣಾದರು.

ಗಾಂಭೀರ್ ಗಂಭೀರ ಪೆಟ್ಟು
ಗಾಂಭೀರ್ 91ರನ್ ಕಲೆಹಾಕಿದಾಕ್ಷಣ ಅವರ ಬ್ಯಾಟಿಂಗ್ ವೇಗಕ್ಕೋ ಅಥವಾ ಬೌಲಿಂಗ್ ಸ್ಪೀಡಿಗೋ ಗೊತ್ತಿಲ್ಲ ಬ್ಯಾಟ್ ನ ತುದಿಭಾಗ ತುಂಡಾಯಿತು. ಆದರೂ ಆಟದ ಹುಮ್ಮಸ್ಸು ಅವರಿಗೆ ಅದು ಗೋಚರವಾಗದಂತೆ ಮಾಡಿದ್ದು ವಿಶೇಷ. ಆ ಮಟ್ಟಿಗೆ ಅವರು ಆಟದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು. 122 ಎಸೆತಗಳಲ್ಲಿ ಗಂಭೀರ್ 97ರನ್ ಕಲೆಹಾಕುವ ಮೂಲಕ ಶತಕ ವಂಚಿತರಾದರು.ಧೋನಿ ವೇಗದ ಆಟ
ತಂಡದ ನಾಯಕ ಎಂ.ಎಸ್.ಧೋನಿ ಅವರ ವೇಗದ ಆಟವೂ ತಂಡವನ್ನು ಮುನ್ನಡೆಸುವಲ್ಲಿ ಯಶ ಕಂಡಿತು. 38ಓವರ್ ಅಂತ್ಯಗೊಳ್ಳುತ್ತಿದ್ದಂತೆಯೇ 52 ಎಸೆತಗಳಲ್ಲಿ 50ರನ್ ಕಲೆಹಾಕಿದರು ನಾಯಕ ಧೋನಿ.ಪ್ರೇಕ್ಷಕ ವೃಂದದ ನಿರಂತರ ಪ್ರೋತ್ಸಾಹ, ಭಾರತ ತಂಡ ಕಪ್ ಗೆಲ್ಲಬೇಕೆಂಬ ಆಸೆ...ಒಟ್ಟಿನಲ್ಲಿ ಧೋನಿ ಅವರ ಮನದಲ್ಲಿ ನಾಯಕತ್ವ ಗುಣವನ್ನು ಪ್ರೇರೇಪಿಸುತ್ತಿತ್ತು.ಧೋನಿ ಅವರ ಅರ್ಧ ಶತಕವೂ ಕೂಡಾ ಭಾರತ ತಂಡವನ್ನು 200ರ ಗಡಿ ದಾಟಿಸುವಲ್ಲಿ ಸಹಕಾರಿಯಾಯಿತು.

0 comments:

Post a Comment