ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಆಟ - ಅವಲೋಕನ
ಬೆಂಗಳೂರು: ಭಾರತಕ್ಕೆ ವಿಶ್ವಕಪ್ ಸಿಗಬಹುದೇ...ಈ ಪ್ರಶ್ನೆ ನಿಜಕ್ಕೂ ಪ್ರಶ್ನೆಯೇ...ಕಾರಣ ಶ್ರೀಲಂಕಾದ ಉತ್ತಮ ಬ್ಯಾಟಿಂಗ್ ಪ್ರದರ್ಶನ. ತನ್ನ ನಿಗಧಿತ 50ಓವರ್ ಗಳನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದ್ದು, ನಿರ್ವಹಿಸಿದ್ದು ಶ್ರೀಲಂಕ ತಂಡದ ಸಾಮರ್ಥ್ಯ ಎಂದರೆ ತಪ್ಪಾಗಲಾರದು. ಕಾರಣ ಇಷ್ಟೇ.ಆರಂಭದಲ್ಲಿ ಅತ್ಯಂತ ಜಾಗರೂಕತೆಯ ಆಟ ಪ್ರದರ್ಶಿಸಿದ ಶ್ರೀಲಂಕಾ ತಂಡ ಆರಂಭದ 10ಓವರ್ ಗಳಲ್ಲೇ ಒಂದು ವಿಕೆಟ್ ಕಳೆದುಕೊಂಡಿತಾದರೂ ಎದೆಗುಂದದೆ ಜಾಗರೂಕತೆಯ ಜವಾಬ್ದಾರಿಯುತ ಆಟ ಪ್ರದರ್ಶಿಸಿತು. 200 ರನ್ ಮೊತ್ತ ಪೂರೈಸಿದ ನಂತರ ವೇಗದ ಆಟ ಆರಂಭಿಸಿದ ಶ್ರೀಲಂಕಾ ತಂಡ , ಕೊನೆಯ ಐದು ಓವರ್ ಗಳಲ್ಲಿ ಮಿಂಚಿನ ಆಟ ನೀಡುವ ಮೂಲಕ ತನ್ನ ಶಿಸ್ತುಬದ್ಧ ಆಟದ ಶೈಲಿಯನ್ನು ತೋರ್ಪಡಿಸುವ ಮೂಲಕ "ಜವಾಬ್ದಾರಿ - ಹೊಣೆಗಾರಿಕೆ"ಯ ಮಹತ್ವವನ್ನು ತಿಳಿಹೇಳಿದಂತಿತ್ತು.


ಒಟ್ಟು 6 ವಿಕೆಟ್ ನಷ್ಟಕ್ಕೆ ಶ್ರೀಲಂಕಾ ತಂಡ 274ರನ್ ಕಲೆಹಾಕುವ ಮೂಲಕ ಭಾರತಕ್ಕೆ 275ರ ಗುರಿನೀಡಿತು. ಇದು ಸುಲಭದ ಗುರಿಯಲ್ಲ. ಭಾರತ ತಂಡ ವ್ಯವಸ್ಥಿತವಾಗಿ ಆಡಿದ್ದೇ ಆದಲ್ಲಿ ವಿಶ್ವಕಪ್ ತನ್ನದಾಗಿಸಿಕೊಳ್ಳಬಹುದಾಗಿದೆ. ಜಯವರ್ಧನ ಅವರ 103ರನ್ ಶ್ರೀಲಂಕವನ್ನು ಉತ್ತಮ ಮೊತ್ತದತ್ತ ಕೊಂಡೊಯ್ಯುವಲ್ಲಿ ಸಹಕಾರಿಯಾಯಿತು. ಕುಮಾರ್ ಸಂಗಕ್ಕರ 48, ದಿಲ್ಶ್ಯಾನ್ 33 ಸಾಮಾನ್ಯಮೊತ್ತ ಸೇರಿಸುವಲ್ಲಿ ಯಶಸ್ವಿಯಾದರು. ಜಯವರ್ಧನೆ ಹಾಗೂ ಪಿರೇರ ಅಂತಿಮ ಹಂತದ ಯಶಸ್ವೀ ಜೊತೆಯಾಟ ಶ್ರೀಲಂಕಾ ತಂಡವನ್ನು ಒಂದು ಉತ್ತಮ ಮೊತ್ತದತ್ತ ಕೊಂಡೊಯ್ಯುವಂತೆ ಮಾಡಿತು. ತನ್ಮೂಲಕ ಭಾರತ ತಂಡಕ್ಕೆ ದೊಡ್ಡ ಸವಾಲನ್ನೇ ನೀಡಿತು.ಶ್ರೀಲಂಕಾ ತಂಡ ಕ್ಷೇತ್ರ ರಕ್ಷಣೆ, ಬೌಲಿಂಗ್ ನಲ್ಲೂ ತನ್ನ ಕರಾಮತ್ತು ಮರೆಯುವುದರಲ್ಲಿ ಸಂದೇಹವಿಲ್ಲ.

0 comments:

Post a Comment