ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
10:31 PM

ಕೊನೆ ಮನೆ

Posted by ekanasu

ಸಾಹಿತ್ಯ

ಮನದ ಸುತ್ತಲೂ ದುಃಖದ ಗೋರಿ
ಕವಿದ ಕತ್ತಲು ಕಾಣದ ದಾರಿ
ನನ್ನ ನೆರಳು ನನ್ನೊಂದಿಗಿಲ್ಲ
ಬಾಳ ಬಿಸಿಲು ಸುಡುತ್ತಿದೆಯಲ್ಲ
ಕಾಣದ ಕಣ್ಣೀರ ಕೋಡಿ ಹರಿಯಿತು
ಸಮುದ್ರದಾಳದ ಮೌನ ಆವರಿಸಿತು


ಕಾಡುತಿದೆ ಕ್ಷಣ ಕ್ಷಣದ ನೆನಪು
ಆಸರೆಯಾಗಿವೆ ನಿನ್ನ ಸಿಹಿಕಹಿ ನೆನಪು
ದೂರವಾಯಿತು ನಿನ್ನ ಒಲವು
ಶೂನ್ಯವಾಯಿತು ಪ್ರತಿ ನಗುವು
ನನ್ನ ನೋಡಲು ಬಂದೆಯಾ ಬಾ
ಪ್ರೀತಿಯ ಎರಡು ಹೂವ ತಾ
ನನ್ನ ಗೋರಿಯೇ ನನಗಿಂತ ಮೇಲು
ಅದರ ಮೇಲೆ ಬಿದ್ದಿತು ನಿನ್ನ ಕಾಲು
ಅಳಬೇಡ, ಧೈರ್ಯದಿಂದ ಬಾಳು


- ಜಬೀವುಲ್ಲಾ ಖಾನ್

1 comments:

Anonymous said...

ಈಗ ಲೋಕದ ಸುತ್ತ ಕಣ್ಣು ಹಾಯಿಸಿದರೆ ಇವೇ ಅಲ್ಲವೇ ಕಾಣಸಿಗುವುದು ? ದುಃಖ ಅನಿವಾರ್ಯವಾಗಿದೆ. ಸುಖ ಮರೀಚಿಕೆಯಾಗಿದೆ.

Deepak

Post a Comment