ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
8:58 AM

ಭೂಮಿ ಹಬ್ಬ...!!!

Posted by ekanasu

ರಾಜ್ಯ - ರಾಷ್ಟ್ರ

ಬೆಂಗಳೂರು: ಮನುಷ್ಯ ಇಂದು ಹೆಚ್ಚು ಹೆಚ್ಚು ವಾಣಿಜ್ಯೀಕರಣಗೊಳ್ಳುತ್ತಿರುವುದರ ಪ್ರಭಾವದಿಂದ ಇಂದು ಭೂಮಿ ಭೋಗ ಲಾಲಸೆಯ ವಸ್ತುವಾಗಿ ನೋಡುತ್ತಿರುವುದು ವಾಸ್ತವ ಮತ್ತು ಇತ್ತೀಚಿಗಷ್ಟೇ ಸಂಭವಿಸಿದ 'ಜಪಾನ' ದುರಂತ ಒಂದು ಉದಾಹರಣೆ ಅಷ್ಟೆ. ಏಕ ಮುಖಿಯಾಗುತ್ತಿರುವ ಅಪಾಯಕಾರಿ ಜೀವನವನ್ನು ಮುರಿಯಲು ಬಹುಮುಖಿ ಜನ ಸಂಸ್ಕ್ರತಿಯ ಒಳಗಣ್ಣು ತೆರೆಯಬೇಕಿದೆ. ಅದಕ್ಕೆ ಭೂಮಿ ಹಬ್ಬ ಒಂದು ನೆಪವಾಗಬಹುದು.
ಅಂದಹಾಗೆ ಈ ಭೂಮಿ ಹಬ್ಬ ಅಂದರೇನು ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಿರ್ಬೇಕಲ್ವಾ... ಹಾಗಾದ್ರೆ ಏಪ್ರಿಲ್ 16ಕ್ಕೆ ನೀವು ಬಿಡುವುಮಾಡಿಕೊಳ್ಳಿ.
ಅದ್ದೆ ಗ್ರಾಮ ಬೆಂಗಳೂರಿನಿಂದ ದೊಡ್ಡಬಳ್ಳಾಪುರಕ್ಕೆ ಹೋಗುವ ದಾರಿಯಲ್ಲಿ ರಾಜಾನುಕುಂಟೆ ನಂತರ ಬರುತ್ತದೆ. ಅದ್ದೆ ಮತ್ತು ಸುರದೇನಪುರದ ಮಧ್ಯದಲ್ಲಿರುವ ಸೀರಮ್ಮನ ಹೊಲದಲ್ಲಿ ಕಾರ್ಯಕ್ರಮ ನಡೆಯಲಿದೆ.ಸಂಜೆ 6 ರಿಂದ ರಾತ್ರಿ 12.30 ರವರೆಗೆ ಒಂದಷ್ಟು ಹಾಡು.. ಕುಣಿತ.. ಮಾತು.. ಊಟ.. ಭೂಮಿ ಹಬ್ಬದಲ್ಲಿ ಭಾಗವಹಿಸೋಣ...

0 comments:

Post a Comment