ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಆಟ - ಅವಲೋಕನ
ಬೆಂಗಳೂರು: ಭಾರತ ಮುಗ್ಗರಿಸಿದೆ. ಕೈಗೆ ಬಂದ ತುತ್ತು ಬಾಯಿಗಿಲ್ಲ ಎಂಬಂತೆ ಮಾಡುತ್ತಿದೆ. ವಿಶ್ವಕಪ್ ಫೈನಲ್ ಪಂದ್ಯಕ್ಕೆ ಬಂದ ಭಾರತ ಆರಂಭದಲ್ಲೇ ಹೀನಾಯ ಪ್ರದರ್ಶನ ನೀಡುತ್ತಿದೆ.ತನ್ಮೂಲಕ ಭಾರತದ ವಿಶ್ವಕಪ್ ಕನಸು ನುಚ್ಚುನೂರಾಗುತ್ತಿದೆಯೋ ಎಂಬ ಆತಂಕ ಕ್ರಿಕೆಟ್ ಪ್ರಿಯರಲ್ಲಿ ಮನೆಮಾಡಿದೆ. ಭಾರತ ತಂಡದ ವೀರೇಂದ್ರ ಸೆಹವಾಗ್ ಆರಂಭದಲ್ಲೇ ಫೆವಿಲಿಯನ್ ಪೆರೇಡ್ ನಡೆಸಿದ್ದಾರೆ. ಸಚಿನ್ ತೆಂಡೂಲ್ಕರ್ ಹಾಗೂ ಗೌತಮ್ ಗಾಂಭೀರ್ ಇದೀಗ ಬ್ಯಾಟಿಂಗ್ ನಡೆಸುತ್ತಿದ್ದಾರೆ.
ಶ್ರೀಲಂಕಾ ತಂಡ ತನ್ನ ಜವಾಬ್ದಾರಿಯುತ ಕ್ಷೇತ್ರ ರಕ್ಷಣಾ ಕಾರ್ಯ ಪ್ರಾರಂಭಿಸಿದೆ. ಹೇಗಾದರೂ ಮಾಡಿ ವಿಶ್ವಕಪ್ ಬಗಲಿಗೆ ಸೇರಿಸಿಕೊಳ್ಳಬೇಕೆಂಬ ಛಲದ ಆಟವನ್ನು ಶ್ರೀಲಂಕಾ ತಂಡ ಪ್ರದರ್ಶಿಸುತ್ತಿದೆ. ಭಾರತ ಎರಡು ಓವರ್ ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 10ರನ್ ಕೂಡಿಸಿದೆ. ಪ್ರಸ್ತುತ 5.00ರನ್ ರೇಟ್ ಇದ್ದು, ಇನ್ನೂ ಜವಾಬ್ದಾರಿಯುತ ರೀತಿಯಲ್ಲಿ ಆಟ ಪ್ರದರ್ಶಿಸದಿದ್ದಲ್ಲಿ ಶ್ರೀಲಂಕಾದ ಗುರಿ ತಲುಪುವುದು ಭಾರತ ತಂಡಕ್ಕೆ ಕಷ್ಟವೇ ಸರಿ.

0 comments:

Post a Comment