ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
12:36 PM

ಅಜೀರ್ಣ ಜ್ಞಾನ

Posted by ekanasu

ವಿಚಾರ

ಓರ್ವ ವ್ಯಕ್ತಿ ಹಜ್ರತ್ ಬಹಾವುದ್ದೀನ್ ನಕ್ಷ್ ಬಂದಿ(ರ) ಅವರ ಬಳಿ ಬಂದು ಹೇಳಿದ - "ನಾನು ಹಲವಾರು ಗುರುಗಳ ಹತ್ತಿರ ಹೋಗಿ ಅನೇಕ ಸೂಫಿ ಪರಂಪರೆಗಳ ಬಗ್ಗೆ ಅಧ್ಯಯನ ನಡೆಸಿದ್ದೇನೆ. ಅವೆಲ್ಲಾ ನನಗೆ ಬಹಳ ಉತ್ತಮ ಲಾಭ ಮತ್ತು ಹಲವು ರೀತಿಯ ಉಪಯೋಗ ಕಲ್ಪಿಸಿವೆ. ಈಗ ನಾನು ನಿಮ್ಮ ಶಿಷ್ಯನಾಗಿ, ನಿಮ್ಮ ಜ್ಞಾನದ ಬಾವಿಯಿಂದ ಅತಿ ಹೆಚ್ಚಾದ ಆಧ್ಯಾತ್ಮಿಕ ಜ್ಞಾನದ ನೀರನ್ನು ಕುಡಿದು ನನ್ನ ದಾಹವನ್ನು ತೀರಿಸಿಕೊಳ್ಳಲು ಆಸೆ ಪಟ್ಟಿದ್ದೇನೆ".ಹ.ಬಹಾವುದ್ದೀನ್ ಅವನ ಪ್ರಶ್ನೆಗೆ ಏನು ಉತ್ತರಿಸದೆ, ರಾತ್ರಿಯ ಊಟಕ್ಕೆ ಆಹ್ವಾನಿಸಿದರು.ಆತನಿಗೆ ಅನ್ನ ಮತ್ತು ಮಾಂಸವನ್ನು ಹೊಟ್ಟೆ ತುಂಬಾ ಉಣಬಡಿಸಿದರು. ನಂತರ ಅವನಿಗೆ ಹಣ್ಣು ಹಂಪಲುಗಳನ್ನು ಉಣಬಡಿಸಿದರು, ವಿಧ ವಿಧವಾದ ತಿನಿಸುಗಳನ್ನು ಕೊಟ್ಟರು, ನಂತರ ತರಕಾರಿಯನ್ನು ತಿನ್ನಲು ಕೊಟ್ಟರು. ಆತ ಅತಿಯಾಗಿ ತಿಂದು ಸೋತು ಹೋದ.

ಆತನ ಪ್ರತಿ ತಿನ್ನುವಿಕೆಯಿಂದ ಹ.ಬಹಾವುದ್ದೀನ್ ಸಂತೋಷ ವ್ಯಕ್ತ ಪಡಿಸಿದರು.ಇನ್ನೂ ಎಷ್ಟು ತಿನ್ನಲು ಸಾಧ್ಯವೋ ತಿನ್ನಿ ಎಂದು ಬೇಡಿಕೊಂಡರು. ಅತಿಥಿ ಸತ್ಕಾರದಲ್ಲಿ ಏನನ್ನೂ ಕಡಿಮೆ ಮಾಡಲಿಲ್ಲ. ಆತನ ತಿನ್ನುವಿದೆ ನಿಧಾನವಾಯಿತು. ಆತ ಪುನಃ ಆಹಾರ ಸೇವಿಸಿದ. ಕೊನೆಗೆ ಏನೂ ತಿನ್ನಲು ಅಸಾಧ್ಯವೆನಿಸಿದಾಗ ಕೈತೊಳೆದು, ಮೆಲ್ಲನೆ ಹಾಸಿಗೆಯ ಮೇಲೆ ಬಿದ್ದು ಅಜೀರ್ಣದ ಕಾರಣ ಉರಳಾರಂಭಿಸಿದ. ಆಗ ಹ.ಬಹಾವುದ್ದೀನ್ ಈ ರೀತಿ ಹೇಳಿದರು - "ನೀನು ನನ್ನನು ನೋಡಲು ಬಂದಾಗ, ನೀನು ಅಧ್ಯಯನ ಮಾಡಿ ಕಲಿತ ಎಲ್ಲಾ ಜ್ಞಾನವು ನಿನ್ನಲ್ಲಿ ಜೀರ್ಣವಾಗದೆ, ನೀನು ತಿಂದ ಊಟದಂತೆ ಅಜೀರ್ಣವಾಗಿದೆ. ಅದರಿಂದ ನಿನಗೆ ಕಷ್ಟವಾಗುತ್ತಿದೆ. ನಿನಗೆ ಜ್ಞಾನ ಪಡೆದುಕೊಳ್ಳುವ ಹಸಿವು, ಆದರೆ ನಿನ್ನ ನಿಜವಾದ ಅವಸ್ಥೆ ಅಜೀರ್ಣಾವಸ್ಥೆ. ನಿನಗೆ ಜ್ಞಾನ ಧಾರೆ ಎರೆಯುತ್ತೇನೆ ಆದರೆ ನೀನು ನಾನು ಹೇಳಿದ ಹಾಗೆ ನಿಯಮಗಳನ್ನು ಪಾಲಿಸಬೇಕು. ಆಹಾರ ಜೀರ್ಣವಾಗಿ ನಿನಗೆ ಪುಷ್ಠಿದಾಯಕವಾಗಬೇಕೇ ಹೊರತು ನಿನ್ನ ತೂಕ ಹೆಚ್ಚಿಸಬಾರದು". ಆ ವ್ಯಕ್ತಿ ಇದನ್ನು ಒಪ್ಪಿಕೊಂಡ. ಹಲವಾರು ವರ್ಷಗಳ ನಂತರ ಒಬ್ಬ ಪ್ರಮುಖ ಸೂಫಿಯಾಗಿ ಈ ವಿಷಯವನ್ನು ಹೇಳಿದ ವ್ಯಕ್ತಿ ಬೇರಾರೂ ಅಲ್ಲ ಸೂಫಿ ಖಲೀಲ್ ಅಶ್ರಫ್ ಜಾದಾ.

ನಮ್ಮ ಜೀವನಗಳಲ್ಲೂ ಆ ರೀತಿಯ ಅಜೀರ್ಣಕ್ರಿಯೆ ನಡೆಯುತ್ತಿದ್ದರೆ ಅದನ್ನು ತಿದ್ದುಕೊಂಡು ಜೀವನ ಸಾಗಿಸುವುದು ಒಳಿತು. ಅಲ್ಲವೇ...?

- ಜಬೀವುಲ್ಲಾ ಖಾನ್

0 comments:

Post a Comment