ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಚೆನ್ನೈ:ಚೆನ್ನೈನಿಂದ 90 ಕಿ. ಮೀ. ದೂರದಲ್ಲಿರುವ ಶ್ರೀ ಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಲ್ಲಿ ಸಂತಸದ ವಾತಾವರಣ.ಇಡೀ ದೇಶವೇ ಹೆಮ್ಮೆಪಡುವಂತಹ ಘಟನೆ. ಎಲ್ಲರ ನಿರೀಕ್ಷೆ ದಿಟವಾಯಿತು.ಭಾರತದೇಶ ಮತ್ತೊಂದು ಸಾಧನೆಯ ಗರಿಯನ್ನು ಸೇರಿಸಿಕೊಂಡಿತು.ತನ್ಮೂಲಕ ದೇಶದ ಅತ್ಯಾಧುನಿಕ ದೂರ ಸಂವೇದಿ ಉಪಗ್ರಹ ರಿಸೋರ್ಸ್‌ಸ್ಯಾಟ್‌-2 ಮತ್ತು ಎರಡು ಕಿರು ಉಪಗ್ರಹಗಳನ್ನು ಹೊತ್ತುಕೊಂಡು ಪಿಎಸ್‌ಎಲ್‌ವಿ -ಸಿ16 ಬುಧವಾರ ಬೆಳಗ್ಗೆ ಯಶಸ್ವೀ ಉಡ್ಡಯನಗೊಂಡಿತು. ಬಾಹ್ಯಾಕಾಶ ಕೇಂದ್ರದಲ್ಲಿದ್ದ ವಿಜ್ಞಾನಿಗಳೆಲ್ಲ ಸಂತಸ ಹಂಚಿಕೊಂಡರು.ದೇಶವೇ ಸಂತಸದ ವಾತಾವರಣವನ್ನು ಸಂಭ್ರಮಿಸಿತು.ಅತ್ಯಾಧುನಿಕ ದೂರಸಂವೇದೀ ಉಪಗ್ರಹ ಕಕ್ಷೆ ಸೇರಿದೆ. ಇದರಿಂದಾಗಿ ಅನೇಕ ಕ್ಷೇತ್ರಗಳ ಅಧ್ಯಯನಕ್ಕೆ ಈ ಉಪಗ್ರಹಗಳು ಸಹಕಾರಿಯಾಗಲಿವೆ.
ಇಸ್ರೊದ ಪಿಎಸ್‌ಎಲ್‌ವಿ 17 ಪ್ರಯತ್ನಗಳಲ್ಲಿ 16 ಸಫ‌ಲ ಉಡ್ಡಯನಗಳನ್ನು ನಡೆಸಿರುವ ಅತ್ಯುತ್ತಮ ದಾಖಲೆಯನ್ನು ಹೊಂದಿರುವದರೊಂದಿಗೆ ಇಂದಿನ ಈ ಉಡ್ಡಯನ ಯಶಸ್ವಿಯಾಗಿರುವುದು ಮತ್ತೊಂದು ದಾಖಲೆಯಾಗಿದೆ.ಪಿಎಸ್‌ಎಲ್‌ವಿ 1206 ಕಿ. ಗ್ರಾಂ ಭಾರವಿರುವ ರಿಸೋರ್ಸ್‌ಸ್ಯಾಟ್‌-2, 92 ಕಿ. ಗ್ರಾಂ ತೂಕದ ಯೂತ್‌ಸ್ಯಾಟ್‌ ಮತ್ತು 106 ಕಿ. ಗ್ರಾಂ ತೂಕದ ಎಕ್ಸ್‌-ಸ್ಯಾಟ್‌ ಉಪಗ್ರಹಗಳನ್ನು ಭೂಮಿಯಿಂದ 822 ಕಿ. ಮೀ. ಎತ್ತರದಲ್ಲಿ ಕಕ್ಷೆಗೆ ಸೇರಿಸುವಲ್ಲಿ ಯಶಸಾಧಿಸಲಾಗಿದೆ. ಸಂಪನ್ಮೂಲ ಅಧ್ಯಯನ ಮತ್ತು ನಿಭಾವಣೆಗಾಗಿ ತಯಾರಿಸಲಾಗಿರುವ ರಿಸೋರ್ಸ್‌ಸ್ಯಾಟ್‌-2 2003ರಲ್ಲಿ ಪಥಕ್ಕೆ ಸೇರಿರುವ ರಿಸೋರ್ಸ್‌ಸ್ಯಾಟ್‌-1ರ ಬದಲಾಗಿ ಕಾರ್ಯನಿರ್ವಹಿಸಲಿದೆ.


ಒಟ್ಟಿನಲ್ಲಿ ಭಾರತದ ವಿಜ್ಞಾನಿಗಳು ದೇಶಕ್ಕೆ ಉತ್ತಮಕೊಡುಗೆ ನೀಡಿದ್ದಾರೆ.

0 comments:

Post a Comment