ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಸಾಗರ: ಸಾಗರದ ನಿಧಿಪ್ರಕಾಶನ ನೀಡುವ 2011ರ ಕೆರೆಮನೆ ಶಂಭುಹೆಗಡೆಗ್ರಂಥ ಪ್ರಶಸ್ತಿ ಡಾ.ಕೆ.ಎಂ.ರಾಘವ ನಂಬಿಯಾರ್ರ 'ಯಕ್ಷಸೇಚನ' ಗ್ರಂಥಕ್ಕೆ ಲಭಿಸಿದೆ. ಡಾ.ನಂಬಿಯಾರ್ ಪತ್ರಕರ್ತರಾಗಿ, ಯಕ್ಷಗಾನ ಪ್ರಸಂಗಕಾರರಾಗಿ, ಜೀವನ ಕಥನ ನಿರೂಪಕರಾಗಿ, ಸಂಶೋಧಕ ಮತ್ತು ವಿಮರ್ಶಕರಾಗಿ ಹೆಸರು ಮಾಡಿದವರು.ಚಕ್ರೇಶ್ವರ ಪರೀಕ್ಷಿತ, ಅಮರೇಂದ್ರ ಪದವಿಜಯೀ, ರಘುವಂಶ ಮುಂತಾದ ಯಕ್ಷಗಾನ ಪ್ರಸಂಗಗಳನ್ನು ರಚಿಸಿದವರು.ಕರಾವಳಿ ಯಕ್ಷಗಾನದ ಹಿಮ್ಮೇಳದ ಕುರಿತ ಇವರ ಸಂಶೋಧನ ಮಹಾಪ್ರಬಂಧ 'ಹಿಮ್ಮೇಳ' 2007ರಲ್ಲಿ ಪ್ರಕಟವಾಗಿದೆ. ವಿಲೋಕನ, ತಿಳಿನೋಟ, ದೀವಟಿಗೆ, ಮುಂದಲೆ ಮುಂತಾದ ವಿಮರ್ಶಾಕೃತಿಗಳನ್ನು ರಚಿಸಿದ್ದಾರೆ. ಮದ್ದಳೆಯ ಮಯಾಲೋಕ, ಚಿನ್ನದ ತಾಳ, ಯಾಜಿ ಭಾಗವತರು ಕೃತಿಗಳ ಮೂಲಕ ಜೀವನ ಕಥನಗಳ ನಿರೂಪಕರಾಗಿ ಸಂದವರು.

ಪರಂಪರೆಯ ಯಕ್ಷಗಾನದ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ನಂಬಿಯಾರ್ 'ದೀವಟಿಗೆ ಆಟ' ದ ಪ್ರದರ್ಶನ ಸಂಘಟಿಸಿದವರು. ಉದಯವಾಣಿ ದಿನಪತ್ರಿಕೆಯಲ್ಲಿ ಉಪಸಂಪಾದಕರಾಗಿ ಸೇವೆಸಲ್ಲಿಸಿದವರು. ಕಾರ್ಕಳ ತಾಲೂಕು 11ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಗೌರವಕ್ಕೆ ಪಾತ್ರರಾದವರು. ಪ್ರಸಂಗಕರ್ತರಾಗಿ, ಕಲಾವಿದರಾಗಿ, ಒಳನೋಟಗಳ ಅಧ್ಯಯನಶೀಲ ವಿದ್ವಾಂಸರಾಗಿ ಮತ್ತು ಕಲಾವಿದರ ಜೀವನಕಥನಗಳ ದಾಖಲೆಗಾರರಾಗಿರುವ ನಂಬಿಯಾರ್ರ ನಿಡುಗಾಲದ ಬರವಣಿಗೆಗಳ ಗೌರವವಾಗಿ ಈ ಪ್ರಶಸ್ತಿ ಸಲ್ಲುತ್ತಲಿದೆ.

ಜೂನ್ ಇಪ್ಪತ್ತಾರರಂದು ಸಾಗರದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನಮಾಡಲಾಗುವುದು. ಡಾ.ಕೆ.ಎಂ.ರಾಘವ ನಂಬಿಯಾರ್ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಕತೆಗಾರ ಸಚ್ಚಿದಾನಂದ ಹೆಗಡೆ ಕೃತಿ ಪರಿಚಯ ಮಾಡಿಕೊಡಲಿದ್ದಾರೆ. ಮಲೆನಾಡಿನ ಸಂಸ್ಕೃತಿ ಚಿಂತಕ ಎಲ್.ಟಿ.ತಿಮ್ಮಪ್ಪ ಹೆಗಡೆ ಸಭಾಧ್ಯಕ್ಷತೆವಹಿಸಲಿದ್ದಾರೆ. ಈ ಪ್ರಶಸ್ತಿಯು ನಿರ್ದಿಷ್ಟ ಮಾನದಂಡವುಳ್ಳುದು; ಯಕ್ಷಗಾನ ನಟನೊಬ್ಬನ ಹೆಸರಿನಲ್ಲಿ ನೀಡುತ್ತಿರುವ ಮೊಟ್ಟಮೊದಲ ಗ್ರಂಥಪ್ರಶಸ್ತಿ ಇದಾಗಿದೆ. ಐದುಸಾವಿರ ರೂಪಾಯಿ ಮೊತ್ತ ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ.

0 comments:

Post a Comment