ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಬ್ಯಾಂಕಿಂಗ್, ಫಿನಾನ್ಶಿಯಲ್ ಕ್ಷೇತ್ರಗಳ ಹುದ್ದೆಗಳಿಗೆ ಉದ್ಯೋಗಾಯ್ಕೆ

ಮೂಡಬಿದಿರೆ: ಆಳ್ವಾಸ್ ಪ್ರಗತಿ ಬೃಹತ್ ಉದ್ಯೋಗಮೇಳದ ಯಶಸ್ಸಿನ ಬೆನ್ನಲ್ಲೇ ಆಳ್ವಾಸ್ ಎಜುಕೇಷನ್ ಫೌಂಡೇಷನ್ ಮತ್ತೊಂದು ಉದ್ಯೊಗಮೇಳವನ್ನು ಕೇವಲ ಬ್ಯಾಂಕಿಂಗ್ ಮತ್ತು ಫಿನಾನ್ಶಿಯಲ್ ಕ್ಷೇತ್ರಗಳಿಗಷ್ಟೇ ಸೀಮಿತಗೊಳಿಸಿ ಆಯೋಜಿಸುತ್ತಿದೆ.
ಮೇ 27ರಂದು ಮಿಜಾರು ಶೋಭಾವನದಲ್ಲಿ "ಆಳ್ವಾಸ್ ಪ್ರಗತಿ ದ ಬ್ಯಾಂಕಿಂಗ್ ಪ್ಲೇಸ್ ಮೆಂಟ್ ಡ್ರೈವ್ - 2011" ಎಂಬ ಉಚಿತ ಉದ್ಯೋಗಮೇಳ ನಡೆಯಲಿದೆ.ಸೌತ್ ಇಂಡಿಯನ್ ಬ್ಯಾಂಕ್, ಇಂಡಿಯನ್ ಓವರ್ ಸೀಸ್ ಬ್ಯಾಂಕ್, ಆಕ್ಸಸ್ ಬ್ಯಾಂಕ್, ಯಸ್ ಬ್ಯಾಂಕ್, ದೇನಾ ಬ್ಯಾಂಕ್, ಎಚ್.ಡಿ.ಎಫ್.ಸಿ, ಕಾರ್ವೇ , ಎಚ್.ಪಿ.ಫಿನಾನ್ಶಿಯಲ್ಸ ಸರ್ವೀಸಸ್, ಮಹೀಂದ್ರಾ .ಫಿನಾನ್ಶಿಯಲ್ ಸರ್ವೀಸಸ್, ಫೆಡರಲ್ ಬ್ಯಾಂಕ್ ಮೊದಲಾದ ಹಣಕಾಸು ಸಂಸ್ಥೆಗಳು ಈ ಮೇಳದಲ್ಲಿ ಪಾಲ್ಗೊತ್ತಿವೆ.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಎಂ.ಬಿ.ಎ, ಎಂ.ಕಾಂ,ಪದವಿ ವಿದ್ಯಾರ್ಥಿಗಳು ಈ ಮೇಳದಲ್ಲಿ ಮುಕ್ತವಾಗಿ ಪಾಲ್ಗೊಳ್ಳಬಹುದಾಗಿದೆ. ಆಸಕ್ತ ವಿದ್ಯಾರ್ಥಿಗಳು ಆಳ್ವಾಸ್ ಎಜುಕೇಷನ್ ಫೌಂಡೇಷನ್ ನ ಪ್ಲೇಸ್ ಮೆಂಟ್ ಸೆಲ್ ಗೆ ನೇರವಾಗಿ ಅಥವಾ ಇ ಮೇಲ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08258 - 236531,8904818467 ಸಂಪರ್ಕಿಸಬಹುದು. Email: placement.alvas@gmail.com

0 comments:

Post a Comment