ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಮಂಗಳೂರು:ಬಿಸಿಲ ಝಳ ಏರಿದ್ದರೂ ನೀರಿಗೆ ತತ್ವಾರವಾಗಿಲ್ಲ.ಕಾರಣ ಏಪ್ರಿಲ್ ಅಂತ್ಯಕ್ಕೆ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದೆ. ಇದರಿಂದ ಅಡಿಕೆ ತೋಟಕ್ಕೆ ನೀರು ಹಾಯಿಸುವ ದೊಡ್ಡ ಸಮಸ್ಯೆ ನೀಗಿದೆ.


ಹಲವೆಡೆಗಳಲ್ಲಿ ನೀರ ಒಸರು ಶಕ್ತಿಪಡಕೊಂಡು ಉತ್ತಮ ನೀರು ಲಭ್ಯವಾಗಿದೆ. ಇಷ್ಟೆಲ್ಲಾ ಅನುಕೂಲವಾಗುತ್ತಿದ್ದಂತೆಯೇ ಈ ಬಾರಿ ಮೇ.31ಕ್ಕೆ ಮುಂಗಾರು ಪ್ರವೇಶ ಆಗಲಿದೆ ಎಂಬ ಅಧಿಕೃತ ಮಾಹಿತಿಯನ್ನು ಹವಾಮಾನ ಇಲಾಖೆ ಸೂಚಿಸಿದೆ. ನೆರೆಯ ಕೇರಳದಲ್ಲಿ ಮೇ.31ಕ್ಕೆ ಮುಂಗಾರು ಪ್ರವೇಶಿಸಿದರೆ ಮೂರ್ನಾಲ್ಕು ದಿನಗಳಲ್ಲಿ ಕರ್ನಾಟಕಕ್ಕೂ ಮುಂಗಾರು ನಿರೀಕ್ಷಿಸಬಹುದಾಗಿದೆ. ಜೂನ್ ತಿಂಗಳಿನಿಂದ ಸೆಪ್ಟಂಬರ್ ತಿಂಗಳ ತನಕ ಉತ್ತಮ ರೀತಿಯ ಮಳೆಯಾಗಲಿದ್ದು ಇದರಿಂದ ಕೃಷಿಕಾರ್ಯ ಅತ್ಯಂತ ಉತ್ತಮ ರೀತಿಯಲ್ಲಿ ಸಾಗುವ ನಿರೀಕ್ಷೆ ವ್ಯಕ್ತವಾಗಿದೆ.

ಹೆಚ್ಚಾಗಿ ನೈರುತ್ಯ ಮುಂಗಾರು ಅಂಡಮಾನ್ ಸಾಗರ ಪ್ರದೇಶದಲ್ಲಿ ಮೇ 20ರ ಸುಮಾರಿಗೆ ಪ್ರಾರಂಭಗೊಳ್ಳುತ್ತದೆ. ಆದರೆ ಇತ್ತೀಚಿನ ಹವಾಮಾನದ ಬದಲಾವಣೆಗಳನ್ನು ಅವಲೋಕಿಸಿದರೆ ಅದಕ್ಕೂ ಮುಂಚೆಯೇ ಮಳೆಯಾಗುವ ಸಾಧ್ಯತೆಗಳು ದಟ್ಟವಾಗಿದೆ. ಈ ಪ್ರದೇಶದಲ್ಲಿ ಮಳೆಬಿದ್ದ ಕೆಲದಿನಗಳಲ್ಲೇ ಮುಂಗಾರು ಮಳೆ ಕೇರಳಗಡಿ ಪ್ರವೇಶಿಸಲಿದೆ.

0 comments:

Post a Comment