ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ




ಮಂಗಳೂರು:ದಕ್ಷಿಣಕನ್ನಡ ಜಿಲ್ಲೆಯ ಐತಿಹಾಸಿಕ ಪ್ರವಾಸಿ ತಾಣವಾದ ಮೂಡಬಿದ್ರೆಯ ಸಾವಿರ ಕಂಬದ ಬಸದಿ ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಅಭಿವೃದ್ಧಿ ಪಡಿಸಲು ರೂ.35,94,08,371 ಗಳ ವೆಚ್ಚದ ಯೋಜನೆಯನ್ನು ಸಿದ್ದಪಡಿಸಿ ಪ್ರವಾಸೋದ್ಯಮ ಇಲಾಖೆ ನಿರ್ದೇಶಕರಿಗೆ ಅಂದಾಜು ಪಟ್ಟಿಯನ್ನು ಅನುಮೋದನೆಗೆ ಸಲ್ಲಿಸಲಾಗಿದೆಯೆಂದು ಜಿಲ್ಲಾಧಿಕಾರಿ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಅಧ್ಯಕ್ಷರು ತಿಳಿಸಿರುತ್ತಾರೆ.
ಇದರಲ್ಲಿ ಮೂಡಬಿದ್ರೆ ಐತಿಹಾಸಿಕ ತಾಣಗಳಿಗೆಸಂಪರ್ಕ ರಸ್ತೆ ನಿರ್ಮಾಣ ,ಮಹಾವೀರ ಸಮುದಾಯ ಭವನ ಕಟ್ಟಡವನ್ನೊಳಗೊಂಡಂತೆ ಪಾರ್ಕಿಂಗ್ ವ್ಯವಸ್ಥೆ,ಸ್ಮಾರಕಗಳ ಪುನರ್ ನಿರ್ಮಾಣ ಕಾಮಗಾರಿಗಳಿಗೆ,ನೀರಿನ ಮೂಲಗಳನ್ನು ಸರಿಪಡಿಸಿ ಟ್ಯಾಂಕ್ಗಳನ್ನು ನಿರ್ಮಿಸಲು,ಹಳೆಯ ಕಟ್ಟಡಗಳನ್ನು ನವೀಕರಿಸಲು,ಪ್ರವಾಸಿಗರ ಸೌಕರ್ಯಕ್ಕಾಗಿ ಪ್ರವಾಸಿ ಸ್ಥಳಗಳ ಮ್ಯಾಪ್,ಜೈನ ತೀರ್ಥಂಕರರ ಮೂರ್ತಿ ಪುನರ್ ನವೀಕರಣಗೊಳಿಸುವಿಕೆ , ಚೌಟರ ಅರಮನೆಯ ನವೀಕರಣ ಮತ್ತು ನಕ್ಷೆ ಮತ್ತು ಅಂದಾಜು ವೆಚ್ಚದ ದರಪಟ್ಟಿಗಾಗಿ ಹೀಗೆ ಒಟ್ಟು 35,94,08,371 ರೂಗಳ ಅಂದಾಜು ಪಟ್ಟಿಯನ್ನು ತಯಾರಿಸಿ ಅನುಮೋದನೆಗೆ ಸಲ್ಲಿಸಲಾಗಿದೆ.
ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶವಿದ್ದರೂ ನೆರೆಯ ಕೇರಳಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ಅಂತಹ ಅಭಿವೃದ್ಧಿ ಕಾಣುತ್ತಿಲ್ಲ ಎಂಬ ದೃಷ್ಠಿಕೋನವನ್ನಿಟ್ಟುಕೊಂಡು ಈ ಕನಸು.ಕಾಂ ಇತ್ತೀಚೆಗೆ ಅತ್ಯಂತ ಅಧ್ಯಯನಾತ್ಮಕ ವರದಿಯನ್ನು ಪ್ರಕಟಿಸಿದ್ದನ್ನು ಸ್ಮರಿಸಬಹುದಾಗಿದೆ.

0 comments:

Post a Comment