ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ವೇಣೂರು:ವೇಣೂರಿನ ಬಾಹುಬಲಿಗೆ 2012ರಲ್ಲಿ ಮಹಾ ಮಸ್ತಕಾಭಿಷೇಕ ನಡೆಯಲಿದ್ದು, ಈ ಸಂದರ್ಭದಲ್ಲಿ ಮೂಲಭೂತ ವ್ಯವಸ್ಥೆಯೂ ಸೇರಿದಂತೆ ವೇಣೂರು ಪರಿಸರದ ಸಂಪೂರ್ಣ ಅಭಿವೃದ್ಧಿಗಾಗಿ ರಾಜ್ಯ ಸರಕಾರದಿಂದ ಹೆಚ್ಚುವರಿ 5ಕೋಟಿ ನೆರವು ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿದ್ದಾರೆ.
ವೇಣೂರು ಬಾಹುಬಲಿ ಬೆಟ್ಟದಲ್ಲಿ ಮೇ.25ರಂದು ಗೋಧೂಳಿಯ ಸಮಯದಲ್ಲಿ ಗೊಮ್ಮಟೇಶ ಮೂರ್ತಿಗೆ ಪಾದಪೂಜೆ ನೆರವೇರಿಸಿದ ಅವರು; ಮಹಾ ಮಸ್ತಕಾಭಿಷೇಕದ ಸಂದರ್ಭದಲ್ಲಿ ಗೊಮ್ಮಟೇಶ ಮೂರ್ತಿಗೆ ಅಟ್ಟಳಿಗೆ ನಿರ್ಮಿಸಿ ಅಭಿಷೇಕ ಮಾಡಲು ಸೂಕ್ತವಾಗುವಂತಹ ಕಬ್ಬಿಣದ ಶಾಶ್ವತ ಅಟ್ಟಳಿಗೆ ನಿರ್ಮಾಣಕ್ಕೆ ಬೇಕಾದ ಹಣವನ್ನು ಒದಗಿಸುವುದಾಗಿ ತಿಳಿಸಿದರು. ಜೊತೆಗೆ ವೇಣೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಅಭಿವೃದ್ಧಿಗೆ ಸೂಕ್ತ ನೆರವು ನೀಡುವುದಾಗಿ ಯಡಿಯೂರಪ್ಪ ಹೇಳಿದ್ದಾರೆ.


ವೇಣೂರಿನ ಫಲ್ಗುಣೀ ನದಿಗೆ ಅಣೆಕಟ್ಟು ನಿರ್ಮಿಸಿ ನೀರುಪೂರೈಸುವ ಯೋಜನೆಗೆ ಜೂನ್ ತಿಂಗಳಲ್ಲಿ ಅನುಮೋದನೆ ನೀಡಿ ಹಣಬಿಡುಗಡೆ ಗೊಳಿಸುವ ಭರವಸೆ ನೀಡಿದ ಮುಖ್ಯಮಂತ್ರಿಗಳು ಮಹಾಮಸ್ತಕಾಭಿಷೇಕಕ್ಕೆ ಪೂರ್ವದಲ್ಲೇ ಈ ಎಲ್ಲಾ ಯೋಜನೆಗಳ ಅನುಷ್ಠಾನ ಕಾರ್ಯ ಪೂರ್ಣಗೊಳ್ಳಲಿದೆ ಎಂಬ ಭರವಸೆ ನೀಡಿದ್ದಾರೆ.

ಬಾಹುಬಲಿ ಮೂರ್ತಿಯ ಸಂರಕ್ಷಣೆ ಮತ್ತು ಇತರ ಅಭಿವೃದ್ಧಿ ಕಾರ್ಯಗಳಿಗೆ ನೆರವು, ನಿರಂತರ ಕುಡಿಯುವ ನೀರಿನ ಪೂರೈಕೆಗೆ ಪೂರಕ ಕಾರ್ಯ, ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಕಾರ್ಯಕ್ರಮ ನಡೆಸಲು ಬೇಕಾದ ವ್ಯವಸ್ಥೆಗಳಿಗೆ ಸಹಕಾರ ನೀಡುವ ಭರವಸೆ ನೀಡಿದರು.
ಇದೇ ಸಂರ್ಭದಲ್ಲಿ ಮುಖ್ಯಮಂತ್ರಿಗಳನ್ನು ಗಣ್ಯರ ಸಮ್ಮುಖದಲ್ಲಿ ಮೂಡಬಿದಿರೆ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮಿಗಳು ಸನ್ಮಾನಿಸಿ ಗೌರವಿಸಿದರು.
ಧನಂಜಯ ಕುಮಾರ್ ದಂಪತಿಗಳು, ಅಳದಂಗಡಿಯ ತಿಮ್ಮಣ್ಣಾರಸ ಡಾ. ಪದ್ಮಪ್ರಸಾದ್ ಅಜಿಲ , ಡಿ.ವಿ.ಸದಾನಂದ ಗೌಡ, ಯೋಗೀಶ್ ಭಟ್, ಎ.ಜಿ.ಕೊಡ್ಗಿ, ಪದ್ಮನಾಭ ಕೊಟ್ಟಾರಿ, ಪ್ರಭಾಕರ ಬಂಗೇರ ಹಾಗೂ ಇತರ ಗಣ್ಯರು ಹಾಜರಿದ್ದರು.

0 comments:

Post a Comment