ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಈ ಕನಸು ಅವಾರ್ಡ್

ಚಿಂತೆ ಮತ್ತು ಚಿತೆಗೆ ಒಂದಕ್ಷರದ ಅಂತರ. ಆದರೆ ಅದರರ್ಥ ಅದೆಷ್ಟು ಗಂಭೀರ!. ಚಿತೆ ವ್ಯಕ್ತಿಯ ಮೃತ ದೇಹವನ್ನು ದಹಿಸಿದರೆ ಚಿಂತೆ ಜೀವಂತ ವ್ಯಕ್ತಿಯನ್ನು ಸುಡುತ್ತಿರುತ್ತದೆ. 'ಮನ ಏವ ಮನುಷ್ಯಣಾಂ ಕಾರಣಂ ಬಂಧ ಮೋಕ್ಷಯೇ' ಅರ್ಥಾತ್ ಮಾನವನಿಗೆ ಸಂಸಾರ ಬಂಧನಕ್ಕೂ ಮತ್ತು ಅದರ ಬಿಡುಗಡೆಗೂ ಮನಸ್ಸೇ ಕಾರಣ. 'ನಿನ್ನೆ', 'ನಾಳೆ'ಗಳ ಮಧ್ಯೆ ಮನಸ್ಸು ನಲುಗಿ ಹೋಗಿದೆ. ಪರಮಾತ್ಮ ದಯಪಾಲಿಸಿದ ಪವಿತ್ರವಾದ 'ಇಂದು'ವನ್ನು ಮರೆತು ಮನಸ್ಸು' ಚಿಂತೆ' ಎಂಬ ಪಿಶಾಚಿಯ ಕಾರ್ಯಗಾರವಾಗುತ್ತಿದೆ. ಗತಿಸಿ ಹೋದ ನಿನ್ನೆಗಳು ಅಲ್ಲೇ ಮರೆಯಾಗಲಿ. ಇನ್ನೂ ಜನ್ಮತಾಳದ ನಾಳೆಗಳ ಕಟ್ಟನ್ನು ಇಂದೇ ಏಕೇ ಹೊತ್ತುಕೊಂಡು ಇಂದಿನ ನೆಮ್ಮದಿಯ ಹಂತಕರಾಗಬೇಕು?. ಅವುಗಳನ್ನು ಕೂಡಾ ನಿನ್ನೆಗಳಂತೆ ಭದ್ರವಾಗಿ ಕದತಟ್ಟಿಬಿಡೋಣ...ನಮಗೆ ವರ್ತಮಾನವೇ ಸಾಕು. ಭೂತ, ಭವಿಷ್ಯಗಳ ಬಗ್ಗೆ ಅನಗತ್ಯ ವಿಚಾರಕ್ಕೆ ಕೈಹಾಕುವ ಸಾಹಸ ಏಕೇ ಬೇಕು..? "ದ ಪೀಸ್ ಆಫ್ ದ ಮೈಂಡ್ ಕಂಮ್ಸ್ ಫ್ರಂ ಆಕ್ಸೆಪ್ಟಿಂಗ್ ದ ವರ್ಸ್ಟ್" ಅಲ್ಲವೇ..? ಮನಸ್ಸಿಗೆ ಕೆಟ್ಟದನ್ನು, ನೋವನ್ನು ಎದುರಿಸುವ, ತಾಳಿಕೊಳ್ಳುವ ಸಾಮರ್ಥ್ಯವಿದೆ. ನಮ್ಮ ಆಲೋಚನೆಗಳಿಂದಲೇ ಮನಸ್ಸಿನ ಆಗಾಧ ಶಕ್ತಿಯನ್ನು ಕುಗ್ಗಿಸಿಕೊಂಡು ಚಿಂತೆಗೆ ರಹದಾರಿ ಮಾಡಿ ಕೊಡುತ್ತಿದ್ದೇವೆ. ಚಿಂತೆಯನ್ನು ಒದ್ದೋಡಿಸಲರಿಯದವನಿಗೆ ಮುಪ್ಪು ಬೇಗನೆ ಅಪ್ಪಿಕೊಳ್ಳುತ್ತದೆ. ಸಾವು ಬೇಗನೆ ದಯಪಾಲಿಸುತ್ತದೆ.

ಮನಸ್ಸು ಶೂನ್ಯವಾಗಿದ್ದರೆ ಚಿಂತೆ, ಅಸೂಯೆ, ಆತಂಕ, ದ್ವೇಷ, ಸೇಡು ಮುಂತಾದ ಶಕ್ತಿಶಾಲಿ ಭಾವನೆಗಳು ಉದ್ಭವಿಸಿ ನಮ್ಮ ಮೇಲೆಯೇ ಹುಲಿಯಂತೆ ಎರಗಿ ನಮ್ಮ ಬಲ ಅಡಗಿಸಿ ವ್ಯಕ್ತಿತ್ವವನ್ನೇ ಮರೆಸುತ್ತದೆ. ಮನದ ಶಾಂತಿ, ಸಂತೋಷ, ಸಾತ್ವಿಕತೆಯನ್ನು ಕೆಡಿಸಿ ಅಲ್ಲೋಲ ಕಲ್ಲೋಲವಾಗಿಸುತ್ತದೆ. ಇಂದು ಜಗತ್ತಿನಾದ್ಯಂತ ದೇಹಕ್ಕೆ ಮದ್ದು ನೀಡುವ ಮುನ್ನ ಮನಸ್ಸಿಗೆ ಚಿಕಿತ್ಸೆ ನೀಡಿ ಎನ್ನುವ ಪರಿಕಲ್ಪನೆ ಮೂಡಿದೆ. ಮನಸ್ಸು ನಿಮ್ಮದೇ, ಉತ್ತಮ ಆಲೋಚನೆಗಳಿಂದ ಅದನ್ನು ನಿಯಂತ್ರಿಸಿಕೊಳ್ಳಿ...

-ಮಲ್ಲಿಕಾಭಟ್ ಪರಪ್ಪಾಡಿ.

0 comments:

Post a Comment