ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ದಿನ ದಿನವೂ ಕರಾಳ ಮುಖ...
ಸುರತ್ಕಲ್ : ಎಂ.ಎಸ್.ಇ.ಝೆಡ್ ವಿಸ್ತರಣಾ ಘಟಕ ಪೆರ್ಮುದೆಯಿಂದ ಚಂದ್ರಹಾಸನಗರ - ಕುತ್ತೆತ್ತೂರು - ಅತ್ರುಕೋಡಿ-ಕಾಟಿಪಳ್ಳವನ್ನು ಸೇರುವ ರಸ್ತೆಯ ಮೂಲಕ ಪೈಪ್ ಲೈನ್ ಹಾಕುವ ಕಾಮಗಾರಿಯನ್ನು ಸಾರ್ವಜನಿಕರಿಗೆ, ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಗೂ ಯಾವುದೇ ಮಾಹಿತಿ, ಸೂಚನೆ ನೀಡದೆ ನಡೆಸುವುದನ್ನು ಕುತ್ತೆತ್ತೂರು ಗ್ರಾಮಸ್ಥರು ವಿರೋಧಿಸಿದ್ದಾರೆ.ಇಂದು ಅತ್ರುಕೋಡಿ ಬಳಿಯಲ್ಲಿ ಕಾಮಗಾರಿ ಆರಂಭಿಸಲು ರಸ್ತೆಯನ್ನು ಅಗೆಯಲಾಗಿತ್ತು. ಇದರ ಮಾಹಿತಿ ತಿಳಿದ ಗ್ರಾಮಸ್ಥರು ಮತ್ತು ಪಂಚಾಯತ್ ಸದಸ್ಯರು ಕಾಮಗಾರಿಯನ್ನು ತಡೆಹಿಡಿದು ವಿಚಾರಿಸಿದರು.
ಅತ್ರುಕೋಡಿ - ಕಾಟಿಪಳ್ಳ ರಸ್ತೆಯನ್ನು ನಿರ್ಮಾಣ ಮಾಡಲು ಖಾಸಗಿ ವ್ಯಕ್ತಿಗಳು ತಮ್ಮ ಸ್ವಂತ ಜಮೀನನ್ನು ಬಿಟ್ಟುಕೊಟ್ಟಿದ್ದು ಸಾರ್ವಜನಿಕ ಹಿತದೃಷ್ಟಿಯಿಂದ ಈ ರಸ್ತೆಯನ್ನು ನಿರ್ಮಾಣ ಮಾಡಿ ಜಿಲ್ಲಾ ಪಂಚಾಯತ್ ಗೆ ಹಸ್ತಾಂತರಿಸಲಾಗಿತ್ತು. ಈಗ ಏಕಾ ಏಕಿ ಯಾರಿಗೂ ಯಾವುದೇ ಸೂಚನೆ ನೀಡದೆ ರಸ್ತೆಯನ್ನು ಅಗೆದು ಅದರ ಮಧ್ಯದಲ್ಲಿ ಎರಡು ಪೈಪ್ ಲೈನ್ಗಳನ್ನು ಅಳವಡಿಸುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಮಾತ್ರವಲ್ಲದೆ ಎಂಎಸ್ಇಝೆಡ್ಗೆ ಈ ರೀತಿ ಸ್ವೇಚ್ಛಾಚಾರದಿಂದ ವರ್ತಿಸಲು ಯಾವ ಹಕ್ಕು ಇದೆ ಎಂದು ಗ್ರಾಮಸ್ಥರು ಪ್ರಶ್ನಿಸುತ್ತಿದ್ದಾರೆ.

ಈ ಬಗ್ಗೆ ಪೆರ್ಮುದೆ ಗ್ರಾಮ ಪಂಚಾಯತ್ ಸದಸ್ಯರೂ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದು ಪೈಪ್ ಲೈನ್ ಅಳವಡಿಕೆಯ ಕ್ರಮವನ್ನು ಪ್ರತಿಭಟಿಸಿದ್ದಾರೆ.
ಪೈಪ್ಲೈನ್ ಅಳವಡಿಸುವ ಬಗ್ಗೆ ಅನುಮತಿ ಕೇಳಿ ಪೆರ್ಮುದೆ ಪಂಚಾಯತ್ಗೆ ಪತ್ರವನ್ನು ಎಂಎಸ್ಇಝೆಡ್ ಬರೆದಿದ್ದು, ಪಂಚಾಯತ್ ಸಾರ್ವಜನಿಕರ ವಿರೋಧದಿಂದಾಗಿ ಅನುಮತಿಯನ್ನು ನಿರಾಕರಿಸಿತ್ತು ಎಂದು ಪಂಚಾಯತ್ ಮೂಲಗಳು ತಿಳಿಸಿವೆ.
ಸಮುದ್ರಕ್ಕೆ ತ್ಯಾಜ್ಯ ವಿಸರ್ಜಿಸುವ ಯೋಜನೆಯನ್ನು ಈಗಾಗಲೇ ಮುಕ್ಕದ ಬಳಿ ಮೀನುಗಾರರು ಪ್ರತಿಭಟಿಸಿದ್ದು, ಈಗ ಕುತ್ತೆತ್ತೂರು ಗ್ರಾಮಸ್ಥರೂ ಸಾರ್ವಜನಿಕ ರಸ್ತೆಯನ್ನು ಅಗೆದು, ತೊಂದರೆ ನೀಡಿ ತ್ಯಾಜ್ಯ ವಿಸರ್ಜನಾ ಪೈಪ್ಲೈನ್ ಅಳವಡಿಸುವುದನ್ನು ವಿರೋಧಿಸುತ್ತಿದ್ದಾರೆ.

ತ್ಯಾಜ್ಯ ವಿಲೇವಾರಿಗೆ ಸುಲಭದ ಮಾರ್ಗ:ಎಂ.ಎಸ್.ಇ.ಝೆಡ್ ನ ತ್ಯಾಜ್ಯವನ್ನು ಮುಕ್ಕದ ಬಳಿಯಲ್ಲಿ ಸಮುದ್ರಕ್ಕೆ ಬಿಡಲು ಸುಲಭದ ದಾರಿಯನ್ನು ಕಂಡುಕೊಳ್ಳಲಾಗುತ್ತಿದೆ. ಪೈಪ್ ಲೈನ್ ಹಾಕಲು ಖಾಸಗಿ ಜಮೀನು ಸ್ವಾಧೀನಪಡಿಸುವುದು ಕಷ್ಟದ ಕೆಲಸವಾಗಿರುವುದರಿಂದ ಸಾರ್ವಜನಿಕ ಜಿಲ್ಲಾಪಂಚಾಯತ್ ರಸ್ತೆಯನ್ನು ಅಗೆದು ಅದರ ಮಧ್ಯಭಾಗದಲ್ಲಿ ಪೈಪ್ ಲೈನ್ ಹಾಕಿ, ಪೆರ್ಮುದೆಯಿಂದ ಚಂದ್ರಹಾಸ ನಗರ - ಕುತ್ತೆತ್ತೂರು - ಅತ್ರುಕೋಡಿ - ಕಾಟಿಪಳ್ಳದ ರಸ್ತೆಯ ಮೂಲಕವಾಗಿ ಪಡುಪದವು- ಮಧ್ಯ - ಚೇಳಾರು ಮೂಲಕ ಸಾಗಿ ಮುಕ್ಕದ ಬಳಿ ಸಮುದ್ರಕ್ಕೆ ತ್ಯಾಜ್ಯ ಬಿಡುವುದು ಸುಲಭದ ಮಾರ್ಗ ಎಂದು ಎಂಎಸ್ಇಝೆಡ್ ಅಧಿಕಾರಿಗಳು ಭಾವಿಸಿದ್ದು ಇದಕ್ಕಾಗಿ ಯಾರ ಅನುಮತಿಯನ್ನೂ ಪಡೆಯದೆ ಕುತ್ತೆತ್ತೂರಿನ ಅತ್ರುಕೋಡಿ ಬಳಿ ಕಾಮಗಾರಿ ಆರಂಭಿಸಿದ್ದಾರೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

- ವರದಿ: ರವೀಂದ್ರ ಶೆಟ್ಟಿ , ಕುತ್ತೆತ್ತೂರು.

0 comments:

Post a Comment