ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ
ಪಾರ್ಶ್ವ ಎಂದರೆ ಪಕ್ಕ, ಉತ್ತಾನ ಎಂದರೆ ಬಲವಾಗಿ ಮುಂದೆ ಬಾಗುವುದು. ಎದೆಯ ಪಕ್ಕವನ್ನು ಹೆಚ್ಚಾಗಿ ಬಾಗಿಸುವುದು ಈ ಆಸನದಲ್ಲಿ ಮುಖ್ಯವಾಗಿದೆ.


ಅಭ್ಯಾಸ ಕ್ರಮ

ಮೊದಲು ತಾಡಾಸನದಲ್ಲಿ ನಿಲ್ಲಬೇಕು. ಅನಂತರ ಕಾಲುಗಳನ್ನು ಮೂರುವರೆ ಅಡಿಗಳಷ್ಟು ಅಂತರದಲ್ಲಿ ನಿಲ್ಲಿಸಬೇಕು. ಬೆನ್ನುಹಿಂದೆ ಕೈಗಳನ್ನು ಹಿಡಿದಿರಬೇಕು. ಬಲಪಾದವನ್ನು 90ಡಿಗ್ರಿ ಗಳಷ್ಟು ಬಲಕಡೆಗೆ ತಿರುಗಿಸಿ, ಉಸಿರು ಬಿಡುತ್ತಾ ತಲೆಯನ್ನು ಮೊಣಕಾಲ ಹತ್ತಿರ ಬಾಗಿಸಬೇಕು. ಮೊಣಕಾಲುಗಳು ಬಿಗಿಯಾಗಿರಬೇಕು. ಈ ಸ್ಥಿತಿಯಲ್ಲಿ ಕಾಲು ನಿಮಿಷದಿಂದ ಅರ್ಧ ನಿಮಿಷ ಕಾಲ ಇರಬೇಕು. ಆನಂತರ ಅದೇ ರೀತಿ ಇನ್ನೊಂದು ಪಾಶ್ರ್ವವಾದ ಎಡಬದಿಯಲ್ಲಿ ಈ ಆಸನ ಅಭ್ಯಾಸ ಮಾಡಬೇಕು. ಆಮೇಲೆ ವಿರಮಿಸಬೇಕು.

ಉಪಯೋಗಗಳು

ಈ ಆಸನದಿಂದ ಕಾಲು, ಮೊಣಕಾಲು, ನೋವು ಪರಿಹಾರವಾಗುತ್ತದೆ. ಭುಜಗಳ ಕಾಲುಗಳ ಸಾಮಾನ್ಯ ನ್ಯೂನತೆಗಳನ್ನು ಸರಿಪಡಿಸುತ್ತದೆ. ಹೊಟ್ಟೆ ಮತ್ತು ಎದೆಯ ಮಧ್ಯೆ ಇರುವ ವಪೆಯು ಬಲಿಷ್ಠವಾಗುತ್ತದೆ.


- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ,
ನಿವೃತ್ತ ಸೀನಿಯರ್ ಹೆಲ್ತ್ ಇನ್ಸ್ಪೆಕ್ಟರ್, ಅಂತರರಾಷ್ಟ್ರೀಯ ಯೋಗ ತೀರ್ಪುಗಾರರು.

0 comments:

Post a Comment