ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಪುತ್ತೂರು: ರಾಜ್ಯ ಸರಕಾರವನ್ನು ಅತಂತ್ರಗೊಳಿಸಲು ಕಾಂಗ್ರೆಸ್ ಹಾಗೂ ಜೆಡಿಎಸ್ ನಡೆಸುತ್ತಿವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ತೂರಿನ ಕಾವುವಿನಲ್ಲಿ ಹೇಳಿದ್ದಾರೆ.ಈಶ್ವರಮಂಗಲದ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳುವ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು , ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡ ಕಾಂಗ್ರೆಸ್ ಈಗ ರಾಜ್ಯವನ್ನು ಆಳುವ ಕನಸು ಕಟ್ಟಿಕೊಂಡಿದೆ.ಇದಕ್ಕಾಗಿ ರಾಜ್ಯಪಾಲರನ್ನು ಸೂತ್ರದ ಗೊಂಬೆಯನ್ನಾಗಿಸಿದೆ ಎಂದು ಆರೋಪಿಸಿದರು. ರಾಜ್ಯಪಾಲರಿಂದ ಸರಕಾರ ಉರುಳಿಸಲು ಸಾಧ್ಯವಾಗದು ಎಂದ ಅವರು ಕೇಂದ್ರ ಗೃಹ ಸಚಿವರು ಹಾಗೂ ಪ್ರಧಾನಿ ಸಂವಿಧಾನಾತ್ಮಕವಾದ ನಿರ್ಧಾರ ಕೈಗೊಳ್ಳುವರು ಎಂಬ ವಿಶ್ವಾಸವಿದೆ ಎಂದರು. ಮುಂದೆ 20 ವರ್ಷಗಳ ರಾಜ್ಯದಲ್ಲಿ ಬಿಜೆಪಿಯೇ ಆಡಳಿತ ನಡೆಸಲಿದೆ ಎಂದು ಇದೇ ವೇಳೆ ಅವರು ಹೇಳಿದರು.

0 comments:

Post a Comment