ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಹೂವುಗಳು ಒಂದು ರೀತಿಯ ವಿಚಿತ್ರ ಅತಿಥಿಗಳು ದಿನವು ಮುಂಜಾನೆ ಹುಟ್ಟಿ ಸಂಜೆ ಸಾಯುವುದೇ ಇವುಗಳ ವಿಚಿತ್ರ ಅಮರತ್ವ!ಚೆಂದದ ಮನೆಯ ಅಂದ ಹೆಚ್ಚಿಸಲು ಮನೆಯ ಮುಂದೊಂದು ಕೈತೋಟವಿದ್ದರೆ ಎಷ್ಟು ಚೆನ್ನ ಎಂಬುದನ್ನು ಅನುಭವಿಸಿಯೆ ತೀರಬೇಕು.ಪ್ರತಿಯೊಬ್ಬ ಹೆಣ್ಣುಮಗಳು ತನ್ನ ವಿವಾಹದ ನಂತರದ ಜೀವನವನ್ನು ಕಲ್ಪಸಿಕೊಳ್ಳುವಾಗ ಪ್ರೀತಿಸುವ ಗಂಡ, ಚೆಂದದ ಮನೆ, ಮನೆಯ ಮುದೊಂದು ಪುಟ್ಟ ಹೂದೋಟವನ್ನು ಸೇರಿಸಿಯೇ ತನ್ನ ಕನಸು ಹೆಣೆಯುತ್ತಾಳೆ.ಈ ಹೂತೋಟಕ್ಕಿರುವ ಮಹತ್ವವೇ ಅಂತದ್ದು!. ಮನೆಯ ಮುಂದೆ ಸ್ವಲ್ಪಜಾಗ ಸಿಕ್ಕರು ಅಲ್ಲೇ ತರಾವರಿ ಹೂಗಿಡ ನೆಡುವುದು, ಅವುಗಳ ಆರೈಕೆ ಮಾಡುವುದು. ಮೊದಲ ಕುಸುಮಕುಸುರಿ ಸಣ್ಣ ಮೊಗ್ಗು ಹೊರಚಾಚಿದಾಗ ಅದನ್ನು ಪದೇ-ಪದೇ ಕಣ್ಣರಳಸಿ ನೋಡುವುದು.ಸಂಪೂರ್ಣವಾಗಿ ಅರಳಿನಿಂತಾಗ,ಅಷ್ಟೇ ಪ್ರೀತಿಯಿಂದ ಅದನ್ನು ಕೊಯ್ದು ಅಲಂಕರಿಸುವುದು,ಇಲ್ಲವೇ ದೇವರ ಮನೆ ಸೇರುವುದು ರೂಢಿ.ಹೂ-ತೋಟ ದೊಡ್ಡದಿದ್ದರಂತು, ನಮ್ಮ ಇಷ್ಟಕ್ಕೆ ತಕ್ಕಹಾಗೇ ಅದನ್ನು ಬೆಳೆಸಬಹುದು. ಸಂಜೆಯ ಹೊತ್ತು ಮನೆ-ಮಂದಿ ಕುಳಿತು ಹರಟಲು, ಮಕ್ಕಳು ಆಟವಾಡಲು, ಆರಾಮ ಕುರ್ಚಿಯಲ್ಲಿ ಕುಳಿತುಪುಸ್ತಕ ಓದುತ್ತ ಹೂಗಳನ್ನು ನೋಡುತ್ತ ಕಾಲ ಕಳೆಯಲು, ಅದಕ್ಕೆ ಕವಿ ಕೆ.ಎಸ್ ನರಸಿಂಹಸ್ವಾಮಿಯವರ ಕವನದಲ್ಲಿ ಹೂಬನದ ಹಾದಿಯಲ್ಲಿ ನರ್ತಿಸುವ ನವಿಲಿನಂತೆ ಎಂಬ ಸುಂದರ ವರ್ಣನೆಯಿರುವುದು.

ಸೇವಂತಿಗೆ, ಮಲ್ಲಿಗೆ,ಗುಲಾಬಿ, ಸೀಸನ್ ಹೂವುಗಳು ಕಮಲ, ರಾತ್ರಿರಾಣಿ ಹೀಗೆ ಯಾವ ಹೂ ಬೆಳೆಸಿದರು ಅವುಗಳು ತಮ್ಮ ವಿಶಿಷ್ಟಗುಣಗಳಿಂದ ಸೂಜಿಗಲ್ಲಿನಂತೆ ಮನುಷ್ಯರನ್ನು ಸೆಳೆಯುವ ಆಕರ್ಷಕ ವ್ಯಕ್ತಿತ್ವ ಇರುತ್ತದೆ. ಹೂಗಳ ಜೊತೆ ಜೀವನ ಕಳೆಯುವುದು, ಸುಂದರವಾದ ಕನಸ್ಸನ್ನು ಬಿತ್ತಿ ಪುನಃ ಸುಂದರವಾದ ಕನಸ್ಸನ್ನೆ ಪಡೆದಂತೆ.ನಾವು ಹೇಗೆ ಬೆಳೆಯುತ್ತೇವೆಯೊ ಹಾಗೆ ಬೆಳೆಯುತ್ತವೆ. ನಮಗೆ ತಿಳಿಯದೆ ರಾತ್ರಿರಾಣಿ ಹೂವಿನ ಘಮ 20 ವರ್ಷದ ಹಿಂದಿನ ನಿಮ್ಮ ಮನೆಯ ಅಂಗಳದ ದಿನಗಳನ್ನು ಗಕ್ಕನೆ ನಿಮ್ಮ ಮುಂದೆ ತಂದು ನಿಲ್ಲಿಸಬಹದು. ಮದುವೆಯಾಗಿ ಹೋದ ಮಗಳು ಅಮ್ಮನನ್ನು ಅಮ್ಮ ಈ ಬಾರಿ ಮಲ್ಲಿಗೆ ಬಿಟ್ಟಿತ್ತ, ದಂಡೆ ಮಾಡಿದ್ಯ ಅಂಥಾ ಕೇಳುವಷ್ಟು ಆಪ್ತ ನಮ್ಮ ಮನೆಯ ಹೂದೋಟ!

ಜಂಜಡದ ಬದುಕಲ್ಲಿ ಹೂ-ಗಿಡ ಬೆಳಸಿ ನೀರೆರೆಯಲಾಗದ ಅಪಾರ್ಟ್ ಮೆಂಟ್ ಒಡತಿಯರು ಕೊಯ್ದು ಅಲಂಕರಿಸಿಕೊಡುವ ಹೂಗಳ ಉಡುಗೊರೆಯಾಗಿ ಪಡೆದು ಬೀಗುತ್ತಾರೆ. ಪ್ಲಾಸ್ಟಿಕ್ನ್ನಲ್ಲಿ ಸ್ಪ್ರೇ ಮಾಡಿದ ನೀರಿನ ಜೊತೆ ನಾನು ತಾಜ ಎಂದು ಕೃತಕನಗು ಬೀರುತ್ತಿರುವ ಹೂಗಳ ಹಿಡಿದು ಸಂತಸಪಡುತ್ತಾರೆ.


-ಉಷಾ ಜಿ.ಎಸ್
ಅಂತಿಮ ಪತ್ರಿಕೋದ್ಯಮ
ಮಾನಸ ಗಂಗೋತ್ರಿ, ಮೈಸೂರು.

0 comments:

Post a Comment