ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಶಿಕಾರಿಪುರ : ಇಲ್ಲಿನ ಪ್ರಸಿದ್ದ ಶ್ರೀ ಹುಚ್ಚೂರಾಯಸ್ವಾಮಿ ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿ ಕಳೆದ ತಿಂಗಳ ಅವಧಿಯಲ್ಲಿ 4.29 ಲಕ್ಷ ದಾಖಲೆಯ ಕಾಣಿಕೆ ಹಣ ಸಂಗ್ರಹವಾಗಿದೆ. ಶಿಕಾರಿಪುರದ ಶ್ರೀ ಹುಚ್ಚೂರಾಯನ ಸನ್ನಿಧಿಗೆ ದಿನದಿಂದ ದಿನಕ್ಕೆ ಭಕ್ತರ ಪ್ರವಾಹ ಹೆಚ್ಚಾಗುತ್ತಿದ್ದು,ಕಳೆದ ತಿಂಗಳ ಧವನ ಹುಣ್ಣಿಮೆಯಂದು ನಡೆದ ರಥೋತ್ಸವ ಹಾಗೂ ಸತತ 3 ದಿನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಾಜ್ಯದ ನಾನಾ ಭಾಗದಿಂದ ಲಕ್ಷಾಂತರ ಭಕ್ತರು ಆಗಮಿಸಿ ಪ್ರಾಣದೇವರ ದರ್ಶನದ ಮೂಲಕ ಪುನೀತರಾಗಿದ್ದಾರೆ. ಶಿಕಾರಿಪುರದ ಭ್ರಾಂತೇಶ ನಂಬಿದ ಭಕ್ತರ ಪಾಲಿನ ಆರಾಧ್ಯ ಸ್ವಾಮಿಯಾಗಿ ಭಕ್ತರ ಇಷ್ಟಾರ್ಥ ನೆರವೇರಿಸುವ ಬಹು ದೊಡ್ಡ ನಂಬಿಕೆಯಿಂದ ಪ್ರಸಿದ್ದವಾಗಿದ್ದು,ಈ ಕಾರಣಕ್ಕೆ ರಾಜ್ಯದ ವಿವಿಧ ಭಾಗದಿಂದ ಆಗಮಿಸುವ ಭಕ್ತರ ಸಂಖ್ಯೆಯಲ್ಲಿ ಪ್ರತಿನಿತ್ಯ ಹೆಚ್ಚಳವಾಗುತ್ತಿದೆ.ಈ ನಂಬಿಕೆಯಿಂದ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ರಾಜ್ಯದ ಮುಖ್ಯಮಂತ್ರಿ ಕ್ಷೇತ್ರದ ಶಾಸಕ ಯಡಿಯೂರಪ್ಪನವರು ಕೋಟ್ಯಾಂತರ ವೆಚ್ಚದಲ್ಲಿ ದೇವಸ್ಥಾನದ ಸಂಪೂರ್ಣ ಜೀರ್ಣೋದ್ಧಾರಕ್ಕೆ ಪಣ ತೊಟ್ಟಿದ್ದು ಹೆಚ್ಚಿನ ಕಾರ್ಯ ಸಂಪೂರ್ಣವಾಗಿದೆ.ನೂತನ ರಾಜಗೋಪುರ,ಸುಂದರ ವಿಶಾಲ ಒಳಾಂಗಣ,ಸಾರ್ವಜನಿಕ ಭಕ್ತಾಧಿಗಳ ಅನ್ನಸಂತರ್ಪಣೆಗಾಗಿ ಬಹು ವಿಶಾಲ ಸುಸಜ್ಜಿತ ಪ್ರಾಂಗಣ ಮತ್ತಿತರರ ಸೌಲಭ್ಯದ ಜತೆಗೆ ದೇವಸ್ಥಾನ ಭಕ್ತಾಧಿಗಳ ಆಕರ್ಷಣೆಯ ಕೇಂದ್ರವಾಗಿದೆ.
ದೇವಸ್ಥಾನದ ಅಂದ ಹೆಚ್ಚಿಸಿ ಭಕ್ತಾಧಿಗಳ ಮನಸ್ಸಿಗೆ ಮುದ ನೀಡಲು ಸುಂದರ ಪುಷ್ಕರಣಿ,ವಿಶಾಲ ಸ್ವಚ್ಚ ಕೆರೆ ನಿರ್ಮಾಣ,ಈ ಎಲ್ಲಾ ಕಾರ್ಯಕ್ಕೂ ಕಲಶಪ್ರಾಯವಾಗಿ ಸಮೀಪದಲ್ಲಿ ಸುಂದರ ಶಿವನ ವಿಗ್ರಹ,ಕೃತಕ ಪ್ರಾಣಿಗಳ ಸಹಿತ ಸಂಗೀತ ಕಾರಂಜಿಯ ಉದ್ಯಾನವನ
ಅಬಾಲವೃದ್ಧರಾಗಿ ಎಲ್ಲರನ್ನೂ ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ.ಕಳೆದ ರಥೋತ್ಸವದಂದು ಉದ್ಘಾಟನೆಯ ಭಾಗ್ಯ ಕಂಡ ಈ
ಉದ್ಯಾನವನ ದಿಂದಾಗಿ ಪ್ರತಿನಿತ್ಯ ದೇವಸ್ಥಾನದ ಸಹಿತ ಕೆರೆ ವೀಕ್ಷಿಸಿ ಸುಂದರ ಸಂಜೆಯನ್ನು ಕಳೆಯಲು ಭಕ್ತರು ಹೆಚ್ಚಿನ ಸಂಖೆಯಲ್ಲಿ ಆಗಮಿಸುತ್ತಿದ್ದಾರೆ.

ಈ ಎಲ್ಲಾ ಸುಂದರ ಪರಿಸರದ ಜತೆಗೆ ಶ್ರೀ ಹುಚ್ಚೂರಾಯನ ಮಹಿಮೆ ಭಕ್ತರ ಪಾಲಿನ ಬೇಡಿದ ವರ ಕೊಡುವ ಸಂಜೀವಿನಿಯಾಗಿ ದಿನ
ದಿಂದ ದಿನಕ್ಕೆ ಭಕ್ತರು ಹೆಚ್ಚಾಗುತ್ತಿದ್ದು ಕಳೆದ ತಿಂಗಳ 8 ರಂದು ಕಾಣಿಕೆ ಹುಂಡಿಯಲ್ಲಿ 1.81 ಲಕ್ಷ ಸಂಗ್ರಹವಾಗಿದ್ದು,ಕೇವಲ 1 ತಿಂಗಳ
ನಂತರ ಬುಧವಾರ ತೆರೆದ ಹುಂಡಿಯಲ್ಲಿ ದಾಖಲೆಯ 3.60 ಲಕ್ಷ ನಗದು ಹಾಗೂ 63 ಸಾವಿರ ನಾಣ್ಯ ಸಂಗ್ರಹವಾಗಿ ಭಕ್ತರ
ಪ್ರವಾಹಕ್ಕೆ ಸಾಕ್ಷಿಯಾಗಿದೆ.

ವರದಿ: ರಾಘವೇಂದ್ರ ಎಚ್.ಆರ್.

0 comments:

Post a Comment