ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಮೂಡಬಿದಿರೆ: ಈ ಬಾರಿಯ ಕರ್ನಾಟಕ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಮೂಡಬಿದಿರೆ ರೋಟರಿ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಅನುಜ್ಞಾ ರಾಜ್ಯಕ್ಕೇ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾಳೆ. 625ರಲ್ಲಿ 619ಅಂಕ ಪಡೆದು ಈ ಬಾಲಕಿ ಸಾಧನೆ ಮೆರೆದಿದ್ದಾಳೆ. ರೋಟರಿ ಶಾಲೆಯು ಮೂಡಬಿದಿರೆ ವಲಯದಲ್ಲಿ ಕಳೆದ ಹಲವು ವರುಷಗಳಿಂದ ನಿರಂತರವಾಗಿ ಶೇ.100 ಫಲಿತಾಂಶ ದಾಖಲಿಸುತ್ತಾ ಬಂದಿದ್ದು ಈ ಬಾರಿಯೂ ಈ ಸಾಧನೆ ಮುಂದುವರಿದಿದೆ. 31ವಿದ್ಯಾರ್ಥಿಗಳು ವಿಶಿಷ್ಠದರ್ಜೆ, 62ವಿದ್ಯಾರ್ಥಿಗಳು ಪ್ರಥಮ, 8ದ್ವಿತೀಯ ಹಾಗೂ 3ಮಂದಿ ತೃತೀಯ ಸ್ಥಾನ ಗಳಿಸಿಕೊಂಡಿದ್ದಾರೆ.ಒಟ್ಟಾರೆಯಾಗಿ ರೋಟರಿಆಂಗ್ಲಮಾಧ್ಯಮ ಶಾಲೆಯ ಶಿಕ್ಷಕ-ವಿದ್ಯಾರ್ಥಿಗಳ ಪರಿಶ್ರಮಕ್ಕೆ ಹೆತ್ತವರು ಭೇಷ್ ಎಂದಿದ್ದಾರೆ.

0 comments:

Post a Comment