ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಜಾಣತನದಿಂದ ಸತ್ಯವನ್ನೇ ಮಾತನಾಡಿ

ನಾಲ್ಕನೇ ಖಲೀಫರಾಗಿದ್ದ ಹಜ್ರತ್ ಅಲಿ ಅವರು ಒಂದು ಸ್ಥಳದಲ್ಲಿ ನಿಂತಿದ್ದರು. ಓರ್ವ ಅಪರಿಚಿತ ವ್ಯಕ್ತಿ ಭಯಭೀತನಾಗಿ ಅವರ ಮುಂದೆಯಿಂದ ಓಡಿಹೋದದ್ದನ್ನು ಕಂಡರು. ಕೆಲವು ಕ್ಷಣಗಳ ನಂತರ, ಕೈಯಲ್ಲಿ ಚೂರಿ ಹಿಡಿದುಕೊಂಡು ಯಾರನ್ನೋ ಹಿಂಬಾಲಿಕೊಂಡು ಬಂದ ಹಾಗೆ ಒಬ್ಬ ವ್ಯಕ್ತಿ ಬಂದು, ಹಜ್ರತ್ ಅಲಿ ಅವರನ್ನು ಕೇಳಿದ - "ಇಲ್ಲಿಂದ ಯಾರಾದರೂ ಓಡಿ ಹೋದರಾ?" ಆಗ ಹಜ್ರತ್ ಅಲಿ ಮನದಾಳದಲ್ಲಿ ವಿಷಯವನ್ನು ಅರಿತುಕೊಂಡು ಒಂದು ಹೆಜ್ಜೆ ಪಕ್ಕಕ್ಕೆ ಸರಿದು ನಿಂತರು. "ಎಂದಿನಿಂದ ನಾನು ಇಲ್ಲಿ ನಿಂತಿದ್ದೀನೋ, ಅಂದಿನಿಂದ ಯಾರೂ ಈ ಕಡೆಯಿಂದ ಓಡಿ ಹೋಗಲಿಲ್ಲ" ಎಂದರು. ತನ್ನ ಜಾಣ್ಮೆಯಿಂದ ಒಂದು ಕೊಲೆಯಾಗುವುದನ್ನು ತಡೆದರು. ಸುಳ್ಳು ಸಹ ಹೇಳಲಿಲ್ಲ. ಸತ್ಯವನ್ನು ಸಹ ಮರೆಯಲಿಲ್ಲ.ಕೆಲವರು ಸುಳ್ಳು ಹೇಳುವುದನ್ನೇ ತನ್ನ ಪ್ರವೃತ್ತಿ ಮಾಡಿಕೊಂಡಿರುತ್ತಾರೆ. ನೀವು ಆಡಿದ ಒಂದೇ ಒಂದು ಸುಳ್ಳಿನಿಂದ ಎಷ್ಟೋ ಸಂಸಾರಗಳು, ಸಂಬಂಧಗಳು ಮುರಿದು ಹೋಗಬಹುದು. ಅದಕ್ಕೆ ಕಾರಣರಾಗಲು ನಿಮಗೆ ಇಷ್ಟವೇ? ಕ್ಷಣಕಾಲ ನಿಮಗೆ ಮರ್ಯಾದೆ ಸಿಗಬಹುದು. ಸಂತೋಷ ಆಗಬಹುದು. ನೀವು ಹೇಳಿದ ಮಾತುಗಳು ಸುಳ್ಳು ಎಂದು ಗೊತ್ತಾದ ಮೇಲೆ ಆ ಜನ ನಿಮಗೆ ಮರ್ಯಾದೆ ಕೊಡುತ್ತಾರೆಯೇ? ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬರುವುದಿಲ್ಲ. ನೀವು ಕಾಣಿಸಿಕೊಂಡ ಕೂಡಲೇ ಜನ ಅಲ್ಲಿಂದ ಜಾಗ ಖಾಲಿ ಮಾಡುತ್ತಾರೆ.

ನಿಮ್ಮನ್ನು ದ್ವೇಷದ ಕಣ್ಣುಗಳಿಂದ ನೋಡುತ್ತಾರೆ. ನಿಮಗೆ ಮತ್ತು ನಿಮ್ಮ ಮಕ್ಕಳಿಗೆ ಮನದಲ್ಲೇ ಶಾಪ ಹಾಕುತ್ತಾರೆ. ಸುಳ್ಳು ಹೇಳಿ ಅದು ನನ್ನ ಚಾಣಾಕ್ಷತನ ಎಂದು ತಿಳಿದುಕೊಳ್ಳಬೇಡಿ. ಒಂದಲ್ಲ ಒಂದು ದಿನ ಸಿಕ್ಕಿ ಬೀಳುತ್ತೀರಿ. ನಿಮ್ಮ ಮರ್ಯಾದೆ ಬೀದಿಪಾಲಾಗುತ್ತದೆ. ಆಗ ನಿಮಗೆ ನೋವು ಕಾಡುತ್ತದೆ. ಇಂತಹ ಪರಿಸ್ಥಿಯನ್ನು ನಿಮ್ಮ ಕೈಯ್ಯಾರೆ ತಂದುಕೊಳ್ಳಲು ನಿಮಗೆ ಇಷ್ಟವೇ? ಸುಳ್ಳು ಹೇಳುವುದು ನಿಮಗೆ ಅಭ್ಯಾಸವಾಗಿಹೋಗಿದ್ದರೆ, ಆ ಅಭ್ಯಾಸವನ್ನು ಬಿಡಲು ಪ್ರತಿದಿನ ಮಲಗುವ ಮುನ್ನ ಆತ್ಮಾವಲೋಕನ ಮಾಡಿಕೊಳ್ಳಿ. ನಾಳೆ ನಾನು ಯಾರಿಗೂ ಸುಳ್ಳು ಹೇಳುವುದಿಲ್ಲವೆಂದು ಮನಸಾರೆ ಪ್ರಮಾಣ ಮಾಡಿ. ಹಾಗೆಯೇ ನಡೆದುಕೊಳ್ಳಿ. ಅಕಸ್ಮಾತ್ ನೀವು ಸುಳ್ಳು ಹೇಳಿದ್ದೇ ಆದಲ್ಲಿ ನಿಮ್ಮ ಆತ್ಮ ಸಾಕ್ಷಿ ನಿಮ್ಮನ್ನು ನೀನು ಪ್ರಮಾಣ ಮಾಡಿದ್ದೀಯ ಎಂದು ಎಚ್ಚರಿಸುತ್ತದೆ. ಆಗ ಜಾಗರೂಕರಾಗಿ; ಸುಳ್ಳು ಹೇಳುವುದನ್ನು ನಿಲ್ಲಿಸಿ. ನೀವು ಸತ್ಯವಾದಿಯಾದರೆ, ಜನ ನಿಮಗೆ ಗೌರವ ಕೊಡುತ್ತಾರೆ. ನೀವು ಸತ್ಯವಾದಿಯಾಗಲು ಸತ್ಯ ಹೇಳಲೇ ಬೇಕು.

- ಜಬೀವುಲ್ಲಾ ಖಾನ್

0 comments:

Post a Comment