ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
10:25 PM

ಉಷ್ಟ್ರಾಸನ

Posted by ekanasu

ವೈವಿಧ್ಯ
ಉಷ್ಟ್ರವೆಂದರೆ ಒಂಟೆಯಾಗಿರುತ್ತದೆ. ಒಂಟೆಯ ಆಕಾರವನ್ನು ತರುವ ಆಸನವಾದುದರಿಂದ ಈ ಹೆಸರು ಬಂದಿರುತ್ತದೆ.
ಅಭ್ಯಾಸ ಕ್ರಮ : ಆರಂಭದಲ್ಲಿ ನೆಲದ ಮೇಲೆ ಜಮಖಾನದಲ್ಲಿ ಮೊಣಕಾಲೂರಿ ತೊಡೆ ಮತ್ತು ಪಾದಗಳನ್ನು ಹತ್ತಿರದಲ್ಲಿ ಇಟ್ಟು ಕಾಲುಗಳನ್ನು ಹಿಂದಕ್ಕೆ ತಿರುಗಿಸಿರಬೇಕು. ಬೆನ್ನು ತಲೆಯನ್ನು ಹಿಂದಕ್ಕೆ ಬಗ್ಗಿಸಿ ಕೈಗಳೆರಡನ್ನೂ ಪಾದಗಳ ಮೇಲೆ ಉಸಿರು ಬಿಡುತ್ತಾ ಇಡಬೇಕು. ಈ ಸಮ ಸ್ಥಿತಿ ಉಸಿರಾಟದಲ್ಲಿ ಅರ್ಧ ನಿಮಿಷ ಇರಬೇಕು. ಈ ರೀತಿ ಎರಡು ಮೂರು ಬಾರಿ ಅಭ್ಯಾಸ ಮಾಡಬೇಕು. ಅನಂತರ ತುಸು ವಿಶ್ರಾಂತಿ.


ಉಪಯೋಗಗಳು :
ಈ ಆಸನವನ್ನು ಅಭ್ಯಾಸ ಮಾಡುವುದರಿಂದ ಬೆನ್ನೆಲುಬು ಬಲಿಷ್ಠವಾಗುತ್ತದೆ ಹಾಗೂ ಸೊಂಟ ನೋವು ನಿವಾರಣೆಯಾಗುತ್ತದೆ. ಥೈರೋಯಿಡ್ ಗ್ರಂಥಿಯ ಬಲ, ಆರೋಗ್ಯ ವರ್ಧನೆ ಹಾಗೂ ಕುತ್ತಿಗೆ ನೋವು ನಿವಾರಣೆಯಾಗಲು ಸಹಕಾರಿಯಾಗುತ್ತದೆ. ಗೂನು ಬೆನ್ನು ಪರಿಹಾರಕ್ಕೆ ಈ ಆಸನವು ಉತ್ತಮವಾಗಿರುತ್ತದೆ. ಹೊಟ್ಟೆಯ ಬೊಜ್ಜು ಕರಗಲು ಸಹಾಯವಾಗುತ್ತದೆ.


-'ಯೋಗರತ್ನ' ಶ್ರೀ ಗೋಪಾಲಕೃಷ್ಣ ದೇಲಂಪಾಡಿ
ಅಂತರರಾಷ್ಟ್ರೀಯ ತೀರ್ಪುಗಾರರು.

0 comments:

Post a Comment