ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ
ಮುಸುಕು ಮಂಜಿನ ನಡುವೆ ಮಬ್ಬು ಕವಿದ ಹಾದಿ...ತಿರು ತಿರುವಿ ಜಾರ ಏರಿ ತಗ್ಗನಿಳಿದು ಅತ್ತ ತಲುಪುತ್ತಿದ್ದಂತೆ ಒಂದು ಕ್ಷಣ ಮೈ ಝಂ...ಎಂಬ ವಾತಾವರಣ...ಕಡಿದಾದ ಹಾದಿ...ದಣಿವು...ನೀರವ ಮೌನವನ್ನು ಬೇಧಿಸುವ ಜೀರುಂಡೆಗಳ ಝೇಂಕಾರ ... ಅಗೋಚರ ಶಕ್ತಿಯ ಆವಾಹನೆಗೊಂಡ ತಪೋವನ...ಪ್ರವೇಶಿಸುತ್ತಿದ್ದಂತೆಯೇ ಏನೋ ಅವ್ಯಕ್ತ ಭಾವನೆ... ಅದು ಹಸಿರ ರಾಶಿಯ ನಡುವಣ ಹಾದಿ..ಮೇಲೇರುವ ಸಾಹಸ...ವನದ ತುಂಬೆಲ್ಲಾ ಹಲಫಲಗಳು...ವೃಕ್ಷ ವೈವಿಧ್ಯ... ಜೊತೆಗೆ ಅಪರೂಪದ ಸಸ್ಯಪ್ರಬೇಧ...ಮೋಹಕ ಚುಂಬಕ ಶಕ್ತಿಯ ಪುಷ್ಪರಾಶಿ...ಇದು ಸಾಮಾನ್ಯ ವ್ಯಕ್ತಿಯ ಮನಸ್ಸಲ್ಲೊಂದು "ವಿಭಿನ್ನ"ಭಾವನೆಯನ್ನು ಮೂಡಿಸುವ ಸಾನಿಧ್ಯ ಪರಿಸರ...ಅದು ನಮ್ಮ ಪಾಲಿಗಂತೂ ನೈಜ ಅನುಭವ...


ಅಲ್ಲೊಂದು ಸಾಮಾನ್ಯ ಕಲ್ಲು...ಇದು ನೋಡುಗರ ಮಟ್ಟಿಗೆ ಮಾತ್ರ ಸಾಮಾನ್ಯ ಕಲ್ಲು...ಮೇಲ್ನೋಟಕ್ಕೆ! ಅವರೂ ಹಾಗೇ ಅಂದುಕೊಂಡಿದ್ದರು... ಆ ಕಾರಣಕ್ಕಾಗಿಯೇ ಕಲ್ಲ ಕೆಡವಿ ನೆಲಸಮ ಮಾಡಿದರು...ಆದರೆ ಅಲ್ಲಿನ ಆ ಶಕ್ತಿಯ ಮಹಿಮೆಯೇ ಹಾಗೆ... ಕಲ್ಲು ಕಲ್ಲಾಗಿ ಉಳಿದಿಲ್ಲ...ಮಳೆ ಬಂದು ಮಣ್ಣು ತೊಡೆದು ಹೋಯಿತೆಂಬ ಆತಂಕಕ್ಕೆ ಅವಕಾಶವೇ ಇಲ್ಲ...ದಿನ ದಿನವೂ ಕಲ್ಲು ಸೂಕ್ಷ್ಮ ಸೂಕ್ಷ್ಮವೇ ಬೆಳೆಯಲಾರಂಭಿಸಿತು...ಇದು ಅಗೋಚರ ಶಕ್ತಿಯ ಮಹಿಮೆ...!


ಇಲ್ಲೊಂದು ಶಕ್ತಿಯಿದೆ ಎಂಬ ಅರಿವು ಆಗಿದ್ದೇ ಒಂದು ಸೋಜಿಗ...ಕೋಡಿನಂತಿದ್ದ ಕಲ್ಲ ಕಡಿಯುವ ಮೊದಲು ಆ ಕಲ್ಲ ಮೇಲೆ ಕುಳಿತು ಗುಡಿನಿರ್ಮಿಸಿದರೆ ಎಷ್ಟು ಚೆನ್ನ ಎಂಬ ಚಿಂತನೆ ಮಾಡಿದ್ದೇ ಸರಿ... ಕಾಲ ತುಂಬ ಕಳೆದಿರಲಿಲ್ಲ... ಕೆಲದಿನಗಳಲ್ಲೇ ಅದಕ್ಕೆ ಕಾಲ ಕೂಡಿ ಬಂದಿತ್ತು... ಯಾವ ವಿಘ್ನವೂ ಎದುರಾಗಿಲ್ಲ...ಬದಲಾಗಿ ಪ್ರಸನ್ನ ಮೂರ್ತ ಕೂಡಿಬಂದಿತ್ತು...ಸುಂದರ ಗುಡಿ ರೂಪುತಾಳಿತ್ತು...ಆ ಕಾಡ ಗರ್ಭದಲ್ಲೂ ಅಷ್ಟೊಂದು ಜನ ಸೇರಿದ್ದರು..ಅಲ್ಲೊಂದು ದೇವಗುಡಿಯ ನಿರ್ಮಾಣಕ್ಕೆ ಅವರೆಲ್ಲರೂ ಸಹಭಾಗಿಗಳಾಗಿದ್ದರು...ಇದೇ ನೋಡಿ ವಿಚಿತ್ರವೆಂದರೆ!!! ಎಲ್ಲವೂ ದೇವ ಮಹಿಮೆ...ಈ ಮಹಿಮೆಯ ನಡುವೆ ನಾವೆಲ್ಲ ನಿಮಿತ್ತ ಮಾತ್ರ ಅಲ್ಲವೇ!!!


ಇರಲಿ...ಇದೇನೋ ಕಾಕ ತಾಳಿಯವಾಯಿತೆನ್ನಿ... ಈ ಶಕ್ತಿಯನ್ನೊಮ್ಮೆ ಪರೀಕ್ಷಿಸಿಯೇ ಸಿದ್ಧ...ಎಂಬ ಹಠದಲ್ಲಿ ಇಷ್ಟೂ ವರುಷಗಳ ಕಾಲ ಮದುವೆಯಾಗದೆ ಇದ್ದಂತಹ ವ್ಯಕ್ತಿಯೋರ್ವರು ಅಲ್ಲಿ ನಿಂತು ಆ ಭಾವನೆಯನ್ನು ವ್ಯಕ್ತಪಡಿಸಿದ್ದೇ ತಡ.... ತಿಂಗಳು ತುಂಬುವುದರೊಳಗಾಗಿ ಮದುವೆ ನಿಶ್ಚಯ...ಇದೀಗ ಮದುವೆಯಾಗಿ ಸುಖೀ ಕುಟುಂಬ ನಡೆಸುತ್ತಿದ್ದಾರೆ...ಈ ಕ್ಷೇತ್ರಕ್ಕೆ ನಿರಂತರ ಆಗಮನ ಅವರದ್ದು... ವ್ಹಾವ್...ಇದು ಕಟ್ಟು ಕಥೆಯಲ್ಲ...ನೈಜ ಘಟನೆಗಳ ಅನಾವರಣ...

ಇದೀಗ ಈ ಪರಿಸರ "ಶಕ್ತಿಪೀಠ"ಎಂದೇ ಪ್ರಸಿದ್ಧಿ ಪಡೆದಿದೆ. ಇಷ್ಟಾರ್ಥ ಸಿದ್ಧಿಗೆ ಇಲ್ಲಿ ಪ್ರಾರ್ಥನೆ ನೆರವೇರುತ್ತದೆ...ಅದು ಈಡೇರುತ್ತದೆ...
ಅಲ್ಲಿ ಪಂಚ ತೀರ್ಥಗಳಿವೆ. ಕಡಿದಾದ ಪ್ರದೇಶದಲ್ಲಿ ಗುಡಿಗೆ ಪ್ರದಕ್ಷಿಣಾ ಪಥದಲ್ಲಿ ಪಂಚ ತೀರ್ಥಗಳು ಜುಳು ಜುಳು ನಿನಾದದೊಂದಿಗೆ ವೈಯ್ಯಾರದಿಂದ ಹರಿಯುತ್ತಿದೆ. ನೈಸರ್ಗಿಕವಾಗಿ ನಿರ್ಮಿತಗೊಂಡ ಐದು ಕೆರೆಗಳೂ ಅಲ್ಲಿವೆ...ಕಾಡೊಳಗಿನಿಂದ, ವಿವಿಧ ಸಸ್ಯರಾಶಿಯೊಡಲಾಳದಿಂದ ಹರಿದು ಔಷಧೀಯ ಗುಣಗಳಹೊಂದಿರುವ ಈ ತೀರ್ಥ ಹಲವು ರೋಗಗಳಿಗೆ ಪರಿಹಾರ.ಒಟ್ಟಿನಲ್ಲಿ ಪ್ರಕೃತಿಯೇ ವಿಚಿತ್ರ...ಈ ವಿಚಿತ್ರವನ್ನು ಹುಡುಕಿಕೊಂಡು ಹೋಗುವ ಸಾಧನೆಯಿದೆಯಲ್ಲಾ ಅದು ಇನ್ನಷ್ಟು ಕಠಿಣ...

ಅಲ್ಲಿ ಪಂಚ ಶಕ್ತಿಗಳಿವೆ...
ಹೌದು...ಅಲ್ಲಿ ಐದು ಶಕ್ತಿಗಳಿವೆ...ಗಣಪತಿ., ದುರ್ಗೆ , ಶಿವ, ವಿಷ್ಣು, ಸೂರ್ಯ ಈ ಪಂಚ ಶಕ್ತಿಗಳನ್ನೊಳಗೊಂಡ ಪಂಚಾಯತನ ದೇಗುಲವೂ ಅಲ್ಲಿ ನಿರ್ಮಾಣಗೊಂಡಿದೆ. ಸುಂದರವಾದ ಪುಟ್ಟ ಗುಡಿ...ಅದರೊಳಗೆ ಶಕ್ತಿದೇವತೆಗಳ ಸ್ಥಾಪನೆ...ಇಷ್ಟಾರ್ಥ ಸಿದ್ಧಿಗೆ ಇಲ್ಲೊಂದು ಪ್ರಾರ್ಥನೆ...ಶುದ್ಧ ಮನಸ್ಸು, ನಿಶ್ಕಲ್ಮಶ ಮನೋಭಾವ...ಇವಿಷ್ಟಿದ್ದರೆ ಇಷ್ಟಪ್ರಾಪ್ತಿ...ಇದು ಅನುಭವಿಸಿದವರ ಮಾತು.

ಇರುವುದಾದರೂ ಎಲ್ಲಿ..?
ಈ ಶಕ್ತಿ ಪೀಠ, ಶ್ರೀ ಪಂಚತೀರ್ಥ ಮಠ,ತಪೋವನ, ಪಂಚತೀರ್ಥಗಳು ಇರುವುದಾದರೂ ಎಲ್ಲಿ ಎಂಬ ಪ್ರಶ್ನೆ ಉದ್ಭವಿಸದೆ ಇರಲಾರದು... ಇದಿರುವುದು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹೆಗ್ಗದ್ದೆ ಮಾರನ ಹಳ್ಳಿ ಎಂಬಲ್ಲಿ. ಹೆದ್ದಾರಿಯ ಪಕ್ಕದಲ್ಲೇ ಇರುವ ಹಸಿರ ಹೊನ್ನಿನ ರಾಶಿಯೊಳಪ್ರವೇಶಿಸಿದರೆ ಒಂದಷ್ಟು ದೂರ ನಡೆದು ಸಾಗಿದರೆ ಈ ಪ್ರಶಾಂತ ಸ್ಥಳಕ್ಕೆ ತಲುಪಬಹುದು. ಮೂಲತಃ ಜ್ಯೋತಿಷ್ಯ ಮನೆತನದವರಾದ ಸುಬ್ರಹ್ಮಣ್ಯ ಭಟ್ಟ ಕುಳಮರ್ವ ಈ ಐತಿಹ್ಯದ ತಾಣವನ್ನು , ಇಲ್ಲಿನ ಶಕ್ತಿಯನ್ನು ಅರಿತವರು...ಇದೀಗ ಅದನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ...

ಸಂಶೋಧನೆಗೆ ಅವಕಾಶ:ಸುಬ್ರಹ್ಮಣ್ಯ ಭಟ್ಟರು ಸರಕಾರಿ ಉದ್ಯೋಗದಲ್ಲಿರುವವರು. ಜ್ಯೋತಿಷ್ಯ ಮನೆತನದವರಾದ್ದರಿಂದ ಸಹಜವಾಗಿಯೇ ಜ್ಯೋತಿಷ್ಯದ ಬಗ್ಗೆ ಆಸಕ್ತಿ ಹೊಂದಿದರು. ವೈಜ್ಞಾನಿಕ ತಳಹದಿಯೊಂದಿಗೆ ಜ್ಯೋತಿಷ್ಯವನ್ನು ತಿಳಿಸುವ ಇವರ ವಿಶಿಷ್ಠಕ್ರಮ ಶ್ಲಾಘನಾರ್ಹ. ಇದೀಗ ಸುಬ್ರಹ್ಮಣ್ಯ ಭಟ್ಟರು ತಪೋವನದಲ್ಲಿ ಒಂದು ಹೊಚ್ಚ ಹೊಸ ಚಿಂತನೆಯನ್ನು ಹಾಕಿಕೊಂಡಿದ್ದಾರೆ. ಜ್ಯೋತಿಷ್ಯ ಸಂಶೋಧನಾ ಕೇಂದ್ರ ರೂಪಿಸುವುದು ಅವರ ಹೆಬ್ಬಯಕೆ. ವಿವಿಧ ರೀತಿಯ ಪ್ರಯೋಗಗಳಿಗೆ ಅವರು ಇಲ್ಲಿ ಸೂಕ್ತ ವೇದಿಕೆ ಕಲ್ಪಿಸುತ್ತಿದ್ದಾರೆ. ಇದೀಗ ಪೂರ್ವಭಾವೀ ಯೋಜನೆಗಳು ಇಲ್ಲಿ ರೂಪುಗೊಂಡಿವೆ. ಧ್ಯಾನ, ಯೋಗ,ಕ್ಕೆ ಬೇಕಾದ ವ್ಯವಸ್ಥೆ ಇಲ್ಲಿ ಸಿದ್ಧವಾಗಿದೆ. ಪೂಜಾ ಮಂದಿರವೂ ಇದೆ. ಸುಮಾರು 40ಮಂದಿಗೆ ಉಳಕೊಳ್ಳುವಂತಹ ಒಂದು ಕಾಟೇಜು ನಿರ್ಮಾಣಗೊಂಡಿದೆ. ಯಾವುದೇ ರೀತಿಯ ಹಣ ಗಳಿಕೆಯ ಉದ್ಧೇಶ ಇವರದ್ದಲ್ಲ. ಬದಲಾಗಿ ಜ್ಯೋತಿಷ್ಯದ ಹಿನ್ನೆಲೆಯಲ್ಲಿ ಸಂಶೋಧನೆ, ಹಾಗೂ ಇತರ ವೈದಿಕ, ಧಾರ್ಮಿಕ ವಿಧಿ ವಿಧಾನ, ದಣಿದ ಮನಸ್ಸಿಗೆ ಒಂದಷ್ಟು ರಿಲ್ಯಾಕ್ಸ್ ನೀಡುವ ಸದುದ್ದೇಶ...ಹೀಗೆ ಹಲವು ಚಿಂತನೆ , ಯೋಜನೆಗಳು ಈ ಪ್ರದೇಶದಲ್ಲಿ ರೂಪುಗೊಳ್ಳುತ್ತಿದೆ.
ವಿವರಗಳಿಗೆ ದೂರವಾಣಿ ಸಂಖ್ಯೆ +919886523865,+918762119326 ಸಂಪರ್ಕಿಸಬಹುದು.

ವರದಿ: ಹರೀಶ್ ಕೆ.ಆದೂರು.
ಚಿತ್ರ: ಶಂ.ನಾ.ಖಂಡಿಗೆ.

1 comments:

Anonymous said...

harishanna, Lekhana layika ayidu. ella vishaya cover madiddi. enna photos layikalli hakiddi. thanks.

Post a Comment