ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಆಳ್ವಾಸ್ ಪ್ರಗತಿ: ದ ಬ್ಯಾಂಕಿಂಗ್ ಪ್ಲೇಸ್ ಮೆಂಟ್ ಡ್ರೈವ್ - 2011
ಮೂಡಬಿದಿರೆ: ಆಳ್ವಾಸ್ ಪ್ರಗತಿ - 2011 ಬೃಹತ್ ಉದ್ಯೋಗಮೇಳದ ಪೂರ್ಣ ಯಶಸ್ಸಿನ ಬೆನ್ನಲ್ಲೇ ಮೂಡಬಿದಿರೆಯ ಆಳ್ವಾಸ್ ಎಜುಕೇಷನ್ ಫೌಂಡೇಷನ್ "ಆಳ್ವಾಸ್ ಪ್ರಗತಿ: ದ ಬ್ಯಾಂಕಿಂಗ್ ಪ್ಲೇಸ್ ಮೆಂಟ್ ಡ್ರೈವ್ - 2011" ಎಂಬ ಮತ್ತೊಂದು ಉದ್ಯೋಗಮೇಳವನ್ನು ಯಶಸ್ವಿಯಾಗಿ ಮಿಜಾರು ಶೋಭಾವನ(ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ಕ್ಯಾಂಪಸ್) ಕ್ಯಾಂಪಸ್ ನಲ್ಲಿ ಆಯೋಜಿಸಿತು. ಬ್ಯಾಂಕಿಂಗ್ ಮತ್ತು ಫಿನಾನ್ಶಿಯಲ್ ಸೆಕ್ಟರ್ ಗಳನ್ನೇ ಮುಖ್ಯಗುರಿಯನ್ನಾಗಿಸಿಕೊಂಡು ಈ ಮೇಳವನ್ನು ಆಯೋಜಿಸಿದ್ದು ವಿಶೇಷವಾಗಿತ್ತು.

ಶುಕ್ರವಾರ (ಮೇ.27ರಂದು ) ಮೇಳಕ್ಕೆ ಚಾಲನೆ ನೀಡಿದ ಕರ್ಣಾಟಕ ಬ್ಯಾಂಕ್ ಅಧ್ಯಕ್ಷ ಅನಂತಕೃಷ್ಣ ಮಾತನಾಡಿ;ಪ್ರಸ್ತುತ ಬ್ಯಾಂಕಿಂಗ್ ಸೇರಿದಂತೆ ಹಣಕಾಸು ಕ್ಷೇತ್ರದಲ್ಲಿ ವಿಫುಲ ಉದ್ಯೋಗಾವಕಾಶವಿದೆ. ಸ್ಪರ್ಧಾತ್ಮಕವಾದ ವೇತನಶ್ರೇಣಿಯನ್ನೂ ಈ ಉದ್ಯೋಗಗಳು ಹೊಂದಿವೆ. ಆ ಕಾರಣಕ್ಕಾಗಿ ಹೆಚ್ಚಿನ ಯುವಜನತೆ ಈ ಕ್ಷೇತ್ರದತ್ತ ಆಕರ್ಷಿತರಾಗುತ್ತಿದ್ದಾರೆ ಎಂದರು.

ಒಂದು ದಿನದ ಈ ಉದ್ಯೋಗಮೇಳದಲ್ಲಿ ಪ್ರತಿಷ್ಠಿತ ಎಚ್.ಡಿ.ಎಫ್.ಸಿ, ಸೌತ್ ಇಂಡಿಯಾ, ಐ.ಒ.ಬಿ, ಆಕ್ಸಿಸ್ ಬ್ಯಾಂಕ್, ಮಹೀಂದ್ರಾ ಫೈನಾನ್ಸ್, ಕಾರ್ವೇ ಫೈನಾನ್ಸ್, ಡಾಯಿಷ್ ಬ್ಯಾಂಕ್, ಎಚ್.ಪಿ.ಫಿನಾನ್ಶಿಯಲ್ಸ್,ಐ.ಐ.ಎಫ್.ಎಲ್, ಯಸ್ ಬ್ಯಾಂಕ್ ಭಾಗವಹಿಸಿ ಆಯ್ಕೆ ಪ್ರಕ್ರಿಯೆ ಕೈಗೊಂಡವು.
ಉದ್ಯೋಗಮೇಳವನ್ನು ಸಂಪೂರ್ಣ ಉಚಿತವಾಗಿ ಆಯೋಜಿಸಲಾಗಿದೆ. ಎಂ.ಬಿ.ಎ., ಎಂ.ಕಾಂ, ಬಿ.ಕಾಂ ಮತ್ತು ಬಿ.ಬಿ.ಎಂ. ಪದವಿಪಡೆದ ವಿದ್ಯಾರ್ಥಿಗಳಿಗೆ ಈ ಉದ್ಯೋಗಮೇಳದಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಆಳ್ವಾಸ್ ಸಮೂಹ ಸಂಸ್ಥೆಗಳ ವಿದ್ಯಾಥರ್ಿಗಳಿಗಷ್ಟೇ ಈ ಮೇಳ ನಡೆಸದೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಅರ್ಹ ಪದವೀಧರರನ್ನೇ ಮುಖ್ಯ ಗುರಿಯಾಗಿರಿಸಿಕೊಂಡು ಈ ಮೇಳವನ್ನು ಆಯೋಜಿಸಿದ್ದು ವಿಶೇಷವಾಗಿತ್ತು.ವರುಷಗಳ ಹಿಂದೆ ಸಣ್ಣ ಮಟ್ಟದಲ್ಲಿ ಆರಂಭಗೊಂಡ ಆಳ್ವಾಸ್ ಪ್ರಗತಿ ಉದ್ಯೋಗಮೇಳ ಮೊದಲ ಪ್ರಯತ್ನದಲ್ಲೇ ಉತ್ತಮ ಯಶ ಕಂಡಿತು.ಆ ಕಾರಣಕ್ಕೆ ಈ ವರುಷ ಬೃಹತ್ ಮಟ್ಟದಲ್ಲಿ "ಆಳ್ವಾಸ್ ಪ್ರಗತಿ - 2011" ಆಯೋಜಿಸಿದಾಗ 15ಸಾವಿರಕ್ಕೂ ಅಧಿಕ ಉದ್ಯೋಗಾಕಾಂಕ್ಷಿಗಳು ಈ ಮೇಳದಲ್ಲಿ ಪಾಲ್ಗೊಂಡು 3,500ರಷ್ಟು ಉದ್ಯೋಗಗಳು ಉದ್ಯೋಗಾಕಾಂಕ್ಷಿಗಳಿಗೆ ಲಭ್ಯವಾದವು. ಈ ಯಶಸ್ಸಿನ ಹುರುಪಿನೊಂದಿಗೆ ಇದೀಗ ಬ್ಯಾಂಕಿಂಗ್ ಮತ್ತು ಹಣಕಾಸು ಸಂಸ್ಥೆಗಳನ್ನಷ್ಟೇ ಗುರಿಯಾಗಿಸಿಕೊಂಡು ಮೇಳವನ್ನು ಆಯೋಜಿಸಲಾಗಿದೆ.ಮುಂದಿನ ವರುಷ ಇನ್ನೂ ವ್ಯವಸ್ಥಿತವಾಗಿ ಹೊಸತನದೊಂದಿಗೆ "ಪ್ರಗತಿ" ಉದ್ಯೋಗಮೇಳವನ್ನು ನಡೆಸುವ ಕನಸು ನಮ್ಮದು.ವರ್ಷದುದ್ದಕ್ಕೂ ನಿರಂತರವಾಗಿ ಈ ರೀತಿಯ ಉದ್ಯೋಗಮೇಳಗಳು ಆಳ್ವಾಸ್ ಕ್ಯಾಂಪಸ್ ನಲ್ಲಿ ನಿರಂತರವಾಗಿ ನಡೆಯುತ್ತಿರುತ್ತದೆ ಎಂದು ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ತಿಳಿಸಿದರು.
ಆಳ್ವಾಸ್ ಎಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಡಾ.ಎಂ.ಎಸ್.ಗೋವಿಂದೇ ಗೌಡ ಉಪಸ್ಥಿತರಿದ್ದರು. ಅರುಣಾ ಮಿನೇಜಸ್ ಕಾರ್ಯಕ್ರಮ ನಿರ್ವಹಿಸಿದರು.


0 comments:

Post a Comment