ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ
ಮೂಡಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಪ್ರವರ್ತಿತ ಆಳ್ವಾಸ್ ಕನ್ನಡ ಮಾಧ್ಯಮ ಪ್ರೌಢಶಾಲೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಮತ್ತೊಮ್ಮೆ ಶೇಕಡಾ ನೂರು ಫಲಿತಾಂಶ ದಾಖಲಿಸಿದೆ.ಕಳೆದ ವರುಷವಷ್ಟೇ ಪ್ರಾರಂಭಗೊಂಡ ಈ ಪ್ರೌಢಶಾಲೆ ಆರಂಭದ ವರುಷವೇ ಶೇಕಡಾ ನೂರು ಫಲಿತಾಂಶ ದಾಖಲಿಸಿ ಹೆಸರು ಪಡೆದಿತ್ತು. ಇದೀಗ ಮತ್ತೊಮ್ಮೆ ಈ ದಾಖಲೆಯನ್ನು ಮುಂದುವರಿಸಿದೆ.
ಪಬ್ಲಿಕ್ ಪರೀಕ್ಷೆ ಬರೆದ ಆಳ್ವಾಸ್ ಕನ್ನಡ ಮಾಧ್ಯಮ ಪ್ರೌಢಶಾಲೆಯ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಫಲಿತಾಂಶದೊಂದಿಗೆ ತೇರ್ಗಡೆಹೊಂದುವುದರೊಂದಿಗೆ ಶೇಕಡಾ ನೂರು ಫಲಿತಾಂಶ ದಾಖಲಿಸಿದ್ದಾರೆ.


ರಾಜೇಶ್ ಗೆ ವಿಜ್ಞಾನ ವಿಭಾಗದ ಆಸೆ
ಪ್ರೌಢಶಾಲೆಯ ರಾಜೇಶ್ ವೆಂಕಣ್ಣ ನಾಯಕ ವಿಶಿಷ್ಠದರ್ಜೆಯಲ್ಲಿ ಉತ್ತೀರ್ಣಹೊಂದಿ ಕೀರ್ತಿ ತಂದಿರುತ್ತಾನೆ. ಮೂಲತಃ ಉತ್ತರಕನ್ನಡ ಜಿಲ್ಲೆಯ ಅಂಕೋಲದ ರೈತಪುತ್ರನಾದ ರಾಜೇಶ್ ವೆಂಕಣ್ಣ ನಾಯಕ ತನ್ನ ಶ್ರಮದ ಕಲಿಕೆಯ ಮೂಲಕ ಈ ಸಾಧನೆ ಮೆರೆದಿದ್ದಾನೆ.
ರಾಜೇಶ್ ವೆಂಕಣ್ಣ ನಾಯಕ 625ರಲ್ಲಿ 605ಅಂಕ (96.8ಶೇಕಡಾ)ಪಡೆದುಕೊಂಡು ಶಾಲೆಗೆ ಪ್ರಥಮ ಪಡಕೊಂಡಿದ್ದಾನೆ. ಪದವಿ ಪೂರ್ವದಲ್ಲಿ ವಿಜ್ಞಾನ ವಿಭಾಗವನ್ನು ಆಯ್ಕೆ ಮಾಡಿಕೊಂಡು ಮುಂದಿನ ದಿನಗಳಲ್ಲಿ ಎಂಜಿನಿಯರ್ ಆಗುವ ಬಯಕೆ ವ್ಯಕ್ತಪಡಿಸಿದ್ದಾನೆ.
ಅಂಕೋಲದ ಅಗಸೂರು ಎಂಬಲ್ಲಿ ಕೃಷಿಕಾಯಕದಲ್ಲಿ ತೊಡಗಿರುವ ವೆಂಕಣ್ಣ ದೇವಣ್ಣ ನಾಯಕ ಮತ್ತು ಶಾಂತಿ ವೆಂಕಣ್ಣ ನಾಯಕರ ಸುಪುತ್ರನಾಗಿರುವ ಈತನ ಸಾಧನೆಗೆ ಹೆತ್ತವರು ಸಂಭ್ರಮಿಸಿದ್ದಾರೆ.

ಎಲ್ಲರೂ ಕ್ರೀಡಾ ವಿದ್ಯಾರ್ಥಿಗಳು
ಆಳ್ವಾಸ್ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಈ ಬಾರಿ ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳು ಕೂಡಾ ಕ್ರೀಡಾವಿದ್ಯಾರ್ಥಿಗಳು. ಕ್ರೀಡಾ ಕ್ಷೇತ್ರದಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸಾಧನೆ ಮೆರೆದು ಇದೀಗ ಶೇಕಡಾ ನೂರು ಫಲಿತಾಂಶ ದಾಖಲಿಸಿರುವುದು ಮತ್ತೊಂದು ಹೆಗ್ಗಳಿಕೆ.

ಡಾ.ಆಳ್ವ ಹರ್ಷ
ಆಳ್ವಾಸ್ ಕನ್ನಡ ಮಾಧ್ಯಮ ಶಾಲೆ ಇದೀಗ ದ್ವಿತೀಯ ವರುಷವೂ ಶೇಕಡಾ ನೂರು ಫಲಿತಾಂಶ ದಾಖಲಿಸಿರುವುದಕ್ಕೆ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಸಂತಸ ವ್ಯಕ್ತಪಡಿಸಿದ್ದಾರೆ. ಈ ಸಾಧನೆಗೆ ಕಾರಣರಾದ ಅಧ್ಯಾಪಕ ವೃಂದ ಹಾಗೂ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

0 comments:

Post a Comment