ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ದಿವ್ಯತೆ ಹಾಗೂ ರಮ್ಯತೆಯ ಸ್ಥಳ ಹನುಮಗಿರಿ - ರಾಘವೇಶ್ವರ ಶ್ರೀಪುತ್ತೂರು: ಈಶ್ವರಮಂಗಲದ ಸಂತೋಷ ಹಾಗೂ ಸಂದೇಶ ನೀಡುವ ಸ್ಥಳವಾಗಿದೆಯಲ್ಲದೆ ಇಲ್ಲಿ ಬದುಕಿಗೆ ಪ್ರೇರಣೆಯೂ ಸಿಗಬಲ್ಲುದು ಮಾತ್ರವಲ್ಲ ಇದೊಂದು ದಿವ್ಯತೆ ಹಾಗೂ ರಮ್ಯತೆಯನ್ನು ನೀಡುವ ಸ್ಥಳ ಎಂದು ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದ್ದಾರೆ.
ಈಶ್ವರಮಂಗಲದ ಹನುಮಗಿರಿಯಲ್ಲಿ "ಈ ಕನಸು.ಕಾಂ" ಗಾಗಿ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು , ಜಗತ್ತಿನ ಕೆಲವು ಕಡೆಗಳಲ್ಲಿ ಸಂತೋಷ ಸಿಗುತ್ತದೆ ; ಆದರೆ ಅಲ್ಲಿ ಸಂದೇಶ ಸಿಗುವುದಿಲ್ಲ , ಇನ್ನೂ ಕೆಲವು ಕಡೆ ದಿವ್ಯತೆ ಇರುತ್ತದೆ ಅಲ್ಲಿ ರಮ್ಯತೆ ಇರುವುದಿಲ್ಲ. ಆದರೆ ಹನುಮಗಿರಿ ಹಾಗಲ್ಲ , ಇಲ್ಲಿಗೆ ಬಂದಾಗ ಸಂತೋಷವೂ ಸಿಗುತ್ತದೆ ಇದರ ಜೊತೆಗೆ ಜೀವನಕ್ಕೆ , ಬದುಕಿಗೆ ಸಂದೇಶವೂ ಇಲ್ಲಿದೆ. ಇನ್ನು ದಿವ್ಯತೆಯ ಅನುಭವವೂ ಇಲ್ಲಾಗುತ್ತದೆ ರಮ್ಯತೆಯೂ ಇಲ್ಲಿದೆ. ಇಂತಹ ಕ್ಷೇತ್ರಗಳು ಜಗತ್ತಿನಲ್ಲೇ ಅಪರೂಪ ಎಂದು ಹೇಳಿದ ಶ್ರೀಗಳು ಇಲ್ಲಿ ವೈಭವಯುತವಾದ ವಾತಾವರಣ ಇದೆ.ಪ್ರವಾಸಿಗರಾಗಿ ಇಲ್ಲಿಗೆ ಬರುವವರು ಯಾತ್ರಿಕರಾಗಿ ಪರಿವರ್ತನೆಗೊಳ್ಳಬಹುದಾದ್ದು ವಿಶೇಷವೇ ಸರಿ ಎಂದು ಶ್ರೀಗಳು ನುಡಿದರು.

ಇಲ್ಲಿನ ಪಂಚಮುಖಿ ಆಂಜನೇಯನ ವಿಗ್ರಹವೂ ವಿಶಿಷ್ಠವಾದದ್ದು. ದೇಶದಲ್ಲೇ ಅಪರೂಪವಾದ ಈ ಹನುಮನಲ್ಲಿ ದೇವ ಮತ್ತು ಭಕ್ತ ಜೊತೆಯಾಗಿದ್ದಾರೆ ಇಂತಹ ಕ್ಷೇತ್ರಗಳೂ ಅಪರೂಪ. ಇನ್ನು ರಾಮ ಹನುಮನೂ ಇಲ್ಲಿ ಜೊತೆಯಾಗಿದ್ದಾರೆ ಅದೂ ಅಪರೂಪವೇ.ಹೀಗಾಗಿ ಹಲವು ಅಪರೂಪಗಳ ಆಗರವಾಗಿರುವ ಈ ಪ್ರದೇಶ ಹಸಿರುವಾತಾವರಣದಿಂದಲೂ ಕೂಡಿದೆ ಎಂದು ರಾಘವೇಶ್ವರ ಶ್ರೀ ಬಣ್ಣಿಸಿದರು.

ಸಂದರ್ಶನ: ಮಹೇಶ್ ಪುಚ್ಚಪ್ಪಾಡಿ.

0 comments:

Post a Comment