ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
10:36 AM

ಅಸ್ಪೃಶ್ಯರು

Posted by ekanasu

ಕಳೆದ ಸಂಚಿಕೆಯಿಂದ...

`ನಾಲ್ಕು ದಿನ ಮಗು ಅತ್ತಿತೆಂತ ಮಕ್ಕಳೇ ಬೇಡ ಎನ್ನುವುದು ಯಾವ ಮಹಾ ಶೌರ್ಯ? ಮತ್ತೆಂಥ ಹೆಣ್ಣು ನೀನು?'
`ಹೆಣ್ಣೆಂದರೆ ಹೆರುತ್ತಿರಬೇಕ? ಇದೊಳ್ಳೆ ಕತೆ' - ಎಂದಳು ಸರೋಜ.
`ಹೌದಪ್ಪ , ನಂಗೆ ಗಂಡ ಇರಬೇಕಿತ್ತು . ಹೆರಿಗೆ ನಿಲ್ಲುವ ವರೆಗೂ ಹೆರುತ್ತಾ ಇರುತ್ತಿದ್ದೆ'- ಪಾರ್ತಕ್ಕನ ಮಾತಿಗೆ ಗಂಜಿಯೂಟ ಮಾಡುವುದೂ ಬಿಟ್ಟು ಹೋ ಅಂತ ದೊಡ್ಡದಾಗಿ ನಕ್ಕವು ಮಕ್ಕಳು. ಮೂಲೆಯಲ್ಲಿ ಕುಳಿತು ಪ್ರಸಂಗ ಬಿಚ್ಚಿಕೊಳ್ಳುತ್ತಿದ್ದ ಪಾರ್ತಕ್ಕನಿಗೂ ನಗೆ. ಗೌರಮ್ಮನಿಗೂ.
`ನಾನಂತೂ ಪಾರ್ತಕ್ಕನ ಹೊಟ್ಟೆ ಡೊಳ್ಳು ಆಗುವುದನ್ನು ಎಣಿಸಲಿಕ್ಕೂ ಹೋಗುವುದಿಲ್ಲ' - ಎಂದಳು ಶಾಮಿ ಮುಖ ಚಿರುಟಿಸಿ.
`ಯಾಕೆ ಮಗ?ನಾನು ಈಗ ಹೀಗೆ ಇದ್ದೇನೆ ಅಂತವ?ಪ್ರಾಯದ ಕಾಲದಲ್ಲಿ ನಿಮ್ಮ ಹಾಗೆ ಕರಟಿಕೊಂಡು ಇರಲಿಲ್ಲ. ಅರಸಿನಕೋಡು ಮುರಿದ ಹಾಗೆ ಇದ್ದೆ.'`ಪಾರ್ತಕ್ಕ , ನಿಮಗೆ ಹೊಟ್ಟೆನೋವು ಸುರುವಾದರೆ ಮಿಡ್ ಬಾಯನ್ನು ಕರೆದುಕೊಂಡು ಬರಲು ಹೋಗುವವ ನಾನೇ...' ಎಂದ ಶಿವ
`ಯಂತಕ್ಕೆ ಮಿಡ್ ಬಾಯಿ ? ನಾನು ಮಿಡ್ ಬಾಯಿಯನ್ನೇ ಹೆರಿಸಿ ಕಳಿಸಿಯೇನು. ಭಾಸ್ಕರನನ್ನು ಹೇಗೆ ಹೆತ್ತೆ ನಾನು ಗೊತ್ತುಂಟ ಮಾಣಿ ನಿಂಗೆ?
`ಥೂ ನಿಮ್ಮ ಹೆಂಗಸರ ಹೆರಿಗೆ ಪುರಾಣ ! ನಂಗೆ ಬೇಡಪ್ಪ.ಕೊಳಕು ಹೆಂಗಸರು'- ಎನ್ನುತ್ತ ಊಟ ಮುಗಿಸಿ ಎದ್ದ ಶಿವ.
`ನಿನ್ನನ್ನು ಹೆತ್ತದ್ದು ಯಾರನ?' - ಎಂದು ಛೇಡಿಸಿದಳು ಸರೋಜ. ಸದಾ ಹೆಂಗಸರ ಪರವಾಗಿಯೇ ನಿಲ್ಲುವವಳು.
`ಇವ ಯಾವ ದೊಡ್ಡ ಗಂಡಸು?ಮಾಣಿಯ ಠೇಂಕಾರ ಕಂಡರೆ ಸಾರು, ಮೀಸೆ ಹುಟ್ಟಲಿಕ್ಕಾದರೂ ಮರ ಹತ್ತುವುದನ್ನು ಬಿಟ್ಟಿಲ್ಲ.ಊರುತುಂಬಾ ಮಾತಾಡುತ್ತದೆ!' -ಎಂದ ಪಾರ್ತಕ್ಕ `ನಂಗೆ ಹೊಟ್ಟೆನೋವು ಸುರುವಾದದ್ದು ಎಷ್ಟುಹೊತ್ತಿಗೆ? ಬಿಸಿಲು ಇನ್ನೂ ಸೋರಲವರೆಗೂ ಬಂದಿರಲಿಲ್ಲ.ಅಷ್ಟು ಬೆಳಗ್ಗೆಯಲ್ಲಿ . ನಂಗೆ ಗೊತ್ತಾಯಿತಾ ಇಲ್ಲವ, ಕೆಲಸ ಚುರುಕು ಮಾಡಿದೆ. ಇವರ ಹತ್ತಿರ ಹೇಳಿದೆ. ಇಬ್ಬರೂ ಒಂದು ಮುಷ್ಟಿ ಉಂಡು ಊಟದ ಶಾಸ್ತ್ರ ಮುಗಿಸಿದೆವು. ಮೇಲುಮನೆ ಸುಬ್ಬಕ್ಕನನ್ನು ಕರೆಯಬೇಕಾ ಎಂದರು.ಹೂಂ ಎಂದೆ.
ಚಾಪೆ ಬಿಡಿಸಿಕೊಂಡೆ.ಮಲಗಿದೆ. ಸುಬ್ಬಕ್ಕ ಬರುವಾಗ ಮಗು ಬಿದ್ದಾಗಿತ್ತು. ಅವಳಿಗೆ ಹೊಕ್ಕುಳು ಚೊಟ್ಟು ಕತ್ತರಿಸುವ ಕೆಲಸ ಮಾತ್ರ ಉಳಿದದ್ದು.ಅವಳು ಬರುವುದು ತಡವಾಗಿದ್ದರೆ ಆ ಕೆಲಸವನ್ನೂ ನಾನೇ ಮುಗಿಸುತ್ತಿದ್ದೆ.'
`ಹ್ಹುಂ ಹ್ಞುಂ...ಅಮಟೆಕಾಯಿ ಗೊರಟು' ಎಂದಳು ಮಲಗಿದ್ದಲಿಂದಲೇ ರತ್ನ.
`ಅದು ನಿಮಗೆ . ಈಗಿನವಕ್ಕೆ. ಮಗ, ಅದೆಲ್ಲ ಒಂದು ಕೈಚಳಕ. ನಾವು ಹಾಗಿದ್ದೆವು. ಈಗಿನವರಿಗೆ ಅದೆಲ್ಲ ಸಾಧ್ಯವಾಗಲಿಕ್ಕಿಲ್ಲ. ಒಪ್ಪಿದೆ.'
(ಮುಂದುವರಿಯುವುದು...)

- ವೈದೇಹಿ.

0 comments:

Post a Comment