ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
11:44 PM

ಜೀವನ

Posted by ekanasu

ಸಾಹಿತ್ಯ

ಮಾಯಾ ಲೋಕದ ಪಗಡೆಯಾಟ
ತಿರ ತಿರುಗಿ ,ಕಾಯಿ ಉರುಳಿಸಿದರೂ
ತಲೆ ಮೇಲೆತ್ತಿ ಕೈ ಮುಗಿದರೂ
ಮಾಯೆಯ ಬಲೆ ಸುತ್ತರಿದು
ಕರಿ ಕಾರ್ಮೋಡ ದಟೈಸಿ
ನಡೆಸುತ್ತದೆ ಆಟ - ಜೀವನ ಪಾಠಕೌರವ - ಪಾಂಡವ ವೈರ ಭಾವ
ವೈಭವೀಕರಣ ಸೋಲು - ಗೆಲುವಿನ
ನಿರೀಕ್ಷೆಯ , ಅನುಭವದ ವೇದ - ಪಾಠ
ಕಾಯಿಗಳೆಷ್ಟೇ ಉರುಳಿಸಿದರೂ
ಬೀಳ ಬಹುದಾದ್ದು ಸರಿ ಬೆಸ ಸಂಖ್ಯೆಗಳು
ಸರಿಯಾದರೆ ಸರಿ ಬೆಸವಾದರೆ ಬೆಸ
ಜೀವನದ ಸಮರಸ ಭಾವ
ಸಮ್ಮಿಳಿತಗೊಂಡ ಜೀವ-ನೋವ

- ಸೌಮ್ಯ, ಸಾಗರ.

2 comments:

Anonymous said...

ಸಮರಸವೇ ಜೀವನ ಎನ್ನುತ್ತಲೇ
ಒಬ್ಬರಿಗೊಬ್ಬರು ಹೊಡೆದಾಡುತ್ತೇವೆ!
ಎಲ್ಲಾ ನಿಮಗಾಗಿ ಎನ್ನುತ್ತಲೇ
ಇದುವೇ ಜೀವನ ಇದು ಜೀವ!
ಇದೇ ಜೀವನದ ವಿಪರ್ಯಾಸ!
ಇಂದು ಹುಟ್ಟಿ ನಾಳೆ ಉಳುದು ನಾಡದು ಸಾಯ್ವ ಈ ಜೀವನಕ್ಕೆ ಮೂರು ದಿನದ ಬಾಳ್ವೆ ....
Deepak

Mallika Bhat Parappadi said...

nice sowmya...... i read all your kavan's, which was published. tummba chanda baritira...ondu innondkkinta binna agiratte tumba kushi agatte oduvaga........... keep it up........

Post a Comment