ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಮೈಸೂರು :ನಿಸರ್ಗ ರಮ್ಯ ತಾಣ, ಪ್ರಸ್ತುತ ಜೀರ್ಣಾವಸ್ಥೆಯಲ್ಲಿರುವ ಕುಕ್ಕರಹಳ್ಳಿ ಕೆರೆ ನವೀಕರಣ ಮತ್ತು ಸೌಂದರ್ಯ ಅಭಿವೃದ್ಧಿಗೆ ಕೊನೆಗೂ ಮುಹೂರ್ತ ಕೂಡಿಬರುತ್ತಿದೆ. ಈ ಕಾರ್ಯ ನಡೆಸಲು ಇದೀಗ ಟೆಂಡರ್ ಆಹ್ವಾನಿಸಲಾಗಿದೆ. ಮೇ .30ರಂದು ಟೆಂಡರ್ ಹಾಕಲು ಕೊನೆಯ ದಿನವೂ ನಿಗಧಿಯಾಗಿದೆ. ಅತ್ಯಂತ ರಮ್ಯ ತಾಣವಾದ ಕುಕ್ಕರ ಹಳ್ಳಿ ಅನೇಕ ಪಕ್ಷಿಗಳಿಗೆ ತವರಾಗಿದೆ.ಆದರೆ ಇತ್ತೀಚೆನ ದಿನಗಳಲ್ಲಿ ಈ ಕೆರೆಯ ನಿರ್ವಹಣೆ ಸಮರ್ಪಕವಾಗದೆ ಇದ್ದುದರಿಂದಾಗಿ ತೀವ್ರ ತೊಂದರೆಗೊಳಗಾಗಿದೆ. ಈ ಬಗ್ಗೆ ಈ ಕನಸು.ಕಾಂ ಸಮಗ್ರ ಸವಿವರ ವರದಿ ಪ್ರಕಟಿಸಿದ್ದನ್ನು ಸ್ಮರಿಸಬಹುದಾಗಿದೆ.


ಕೆರೆ ಅಭಿವೃದ್ಧಿಗೊಂಡಿದ್ದೇ ಆದಲ್ಲಿ ಅದೊಂದು ನಿಸರ್ಗ ರಮ್ಯ ತಾಣವಾಗಿ ಮೈಸೂರಿನ ಘನತೆ ಹೆಚ್ಚಿಸುವುದರಲ್ಲಿ ಸಂದೇಹವಿಲ್ಲ.ಮೈಸೂರಿನ ಅರಮನೆ, ಉದ್ಯಾನವನ, ಕಾರಂಜಿ ,ಅಣೆಕಟ್ಟು ನೋಡಿದವರಿಗೆ ಕುಕ್ಕರ ಹಳ್ಳಿ ಕೆರೆಯ ಸೌಂದರ್ಯ ವೀಕ್ಷಣೆಯ ಭಾಗ್ಯವೂ ದೊರಕಲಿದೆ.
ಗುಜರಾತಿನ ಸಾಯಿ ಕನ್ಸಲ್ಟೆಂಟ್ಸ್ ಅವರು ಜಿಲ್ಲಾಧಿಕಾರಿ ಹರ್ಷ ಗುಪ್ತ ಅವರಿಗೆ ಸಲ್ಲಿಸಿರುವ ಕೆರೆ ಅಭಿವೃದ್ಧಿ ಯೋಜನೆಯ ನೀಲನಕ್ಷೆಯಂತೆ ಕಾಮಗಾರಿ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ.ಇದಕ್ಕಾಗಿ ಮೈಸೂರು ನಗರ ಸಭೆ, ನಗರಾಭಿವೃದ್ಧಿ ಇಲಾಖೆ ಮತ್ತು ಮೈಸೂರು ವಿವಿಯ ಅಧಿಕಾರಿಗಳು ಯೋಜನೆಯನ್ನು ಪರಿಶೀಲಿಸಿ ಅನುಮೋದನಾಗಿ ವಿವಿ ಸಿಂಡಿಕೇಟಿಗೆ ಸಲ್ಲಿಸಿದ್ದಾರೆ.
ಏನೇ ಇರಲಿ...ಆದಷ್ಟು ಶೀಘ್ರ ಈ ಕಾಮಗಾರಿ ಮುಗಿಯಬೇಕಾಗಿದೆ. ಕುಕ್ಕರಹಳ್ಳಿ ಕೆರೆ ಅಭಿವೃದ್ಧಿ ಆಗಬೇಕಾಗಿದೆ.

0 comments:

Post a Comment