ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
7:06 PM

ಕ್ರಿ"ಕೆಟ್" ಆಟ!?

Posted by ekanasu

ವಿಚಾರ
ಭಾರತೀಯರ ಕ್ರಿಕೆಟ್ ಹುಚ್ಚನ್ನು ಸಮರ್ಥಿಸುತ್ತ ... !

ಭಾರತೀಯರ ಕ್ರಿಕೆಟ್ ಕ್ರೇಜ್ಝ್ ಸಮಗ್ರವಾಗಿ ನೋಡಿದಾಗ ಅದು ಕ್ರೀಡಾ ಪ್ರೇಮ ಅಥವಾ ಕ್ರಿಕೆಟ್ ಗೀಳಿ ಅನಿಸದು. ಕ್ರಿಕೆಟ್ ಹುಚ್ಚು ಎಂದೇ ಅನಿಸುತ್ತದೆ. ಈಗ ಐ.ಪಿ.ಎಲ್. ಜ್ವರ ದೇಶದಲ್ಲೆಡೆ ಹಬ್ಬಿದೆ. ಸ್ವಲ್ಪ ಮೊದಲು ವಿಶ್ವಕಪ್ ಜ್ವರದಲ್ಲಿ ಭಾರತೀಯರು ಕೋಮಾಕ್ಕೆ ಹೋಗಿದ್ದರು. ಕ್ರಿಕೆಟ್ ವೀಕ್ಷಿಸಲು ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ, ನೌಕರರು ಆಫೀಸಿಗೆ ಚಕ್ಕರ್ ಹಾಕುವುದು ಇಲ್ಲಿ ಸ್ವಾಭಾವಿಕ. ಈ ಭಾರಿ ಮಠಾಧೀಶರೂ ಕೂಡ ಸಿಬ್ಬಂದಿಗಳಿಗೆ ಮಠದ ಆವರಣದಲ್ಲಿ ಕ್ರಿಕೆಟ್ ವೀಕ್ಷಿಸುವ ವ್ಯವಸ್ಥೆ ಮಾಡಿಕೊಟ್ಟರು! ಅವರೂ ತಂಡಕ್ಕೆ ಶುಭ ಕೋರಿ ಪಂದ್ಯ ವೀಕ್ಷಿಸಿದರು. ಇವುಗಳ ನಡುವೆ ಕೆಲವರು ಪರಮಜ್ಞಾನಿಗಳಂತೆ ಕ್ರಿಕೆಟ್ ನಿಂದಾಗುವ ದುಷ್ಟರಿಣಾಮಗಳ ಪಟ್ಟಿ ಮಾಡಿದರು!ಅನುಮಾನವೆ ಬೇಡ ಭಾರತೀಯರ ಕ್ರಿಕೆಟ್ ಹುಚ್ಚು ಹಲವು ಭಾರಿ ಅತಿರೇಖಕ್ಕೆ ಹೋಗುತ್ತದೆ. ಭಾರತ ಪಂದ್ಯ ಗೆಲ್ಲಲಿ ಎಂದು ಪೂಜೆ ಮಾಡುವುದು ತಲೆ ಬೋಳಿಸಿ ಭಾರತ ಧ್ವಜ ಬಿಡಿಸುವುದು, ಇದೆಲ್ಲವೂ ಅತಿರೇಕವೇ ಆದರೆ ಯಾವುದಾದರೊಂದು ಕ್ರೀಡೆ ನೋಡುವುದು ಅಥವಾ ನೋಡದಿರುವುದು ವೈಯಕ್ತಿಕ ವಿಚಾರ ಅಲ್ಲವೆ? ಕ್ರಿಕೆಟ್ನ ನೋಡುವವರೆಲ್ಲ ಹಾಕಿಯನ್ನು ಕಡ್ಡಾಯವಾಗಿ ನೋಡಬೇಕು ಎಂದು ಕಾಯ್ದೆ ತರಲು ಸಾಧ್ಯವೇ?|

ಪ್ರತಿಯೊಬ್ಬ ಮನುಷ್ಯನಿಗೂ ಅವನದ್ದೆ ಆದ Likings ಮತ್ತು Dislikings ಗಳಿರುತ್ತವೆ. ಅವನ Likings ಗಳೇನು ಎನ್ನುವುದು ಅವನ ವೈಯಕ್ತಿಕ ವಿಚಾರ. ಕೆಲವರಿಗೆ ಬಿಳಿ ಅಂಗಿ ಇಷ್ಟ, ಕೆಲವರಿಗೆ ಕೆಂಪು ಅಂಗಿ ಇಷ್ಟ, ಅಂತೆಯೆ ಕ್ರಿಕೆಟ್, ಹಾಕಿ, ಪುಟ್ಬಾಲ್ ಕೂಡ. ಕೆಂಪು ಅಂಗಿಯಿಂದ ಸಾರ್ವಜನಿಕರಿಗೆ ತೊಂದರೆಯಾದರೆ ಮಾತ್ರ ನಾವು ಆಕ್ಷೇಪಿಸಬಹುದು. ಉದಾಹರಣೆಗೆ ನಡುರಾತ್ರಿಯಲ್ಲಿ ಭಾರತ ಗೆದ್ದಿತೆಂದು ಪಟಾಕಿ ಸಿಡಿಸಿ ನೆರೆಹೊರೆಯದವರ ನಿದ್ದೆಗೆಡಿಸುವುದು!

ಕ್ರಿಕೆಟ್ ಹುಚ್ಚಿನಲ್ಲಿ ತೇಲಾಡುವವರಲ್ಲಿ ಹಲವರು ಸ್ವಂತ ನಿಲುವಿಲ್ಲದವರೂ ಇರುತ್ತಾರೆ. ಅವರಿಗೆ ಆರಾಧಿಸಲು ವ್ಯಕ್ತಿ ಬೇಕು ಅಷ್ಟೇ. ಕ್ರಿಕೆಟ್ ಎನ್ನುವ ಕ್ರೀಡೆ ಇರದಿದ್ದರೆ ಅವರು ಯಾವುದಾದರು ಚಿತ್ರತಾರೆಯ ಪೊಸ್ಟರ್ಗೆ ಹಾಲಿನ ಅಭಿಷೇಕ ಮಾಡುತ್ತಿದ್ದರು! ಕ್ರಿಕೇಟ್ ಇಸ್ ರಿಲಿಜನ್ ಸಚೀನ್ ಇಸ್ ಗಾಡ್ ಎಂಬ ಅತಿರೇಖದ ಮಾತನ್ನು ಹುಟ್ಟು ಹಾಕಿದವರು ಅವರೇ. ಕ್ರಿಕೇಟ್ ಇರದಿದ್ದರೆ ಬಹುಶಃ ಸಿನಿಮಾ ಇಸ್ ರಿಲಿಜನ್, ಅಮಿತಾಬ್ ಇಸ್ ಗಾಡ್ ಎನ್ನುತ್ತಿದ್ದರ ಅವರು!

ಕ್ರಿಕೆಟ್ ಜ್ವರ ಮತ್ತು ಪರಮಜ್ಞಾನಿಗಳ ನಡುವೆ ನಾವೊಂದು ವಿಚಾರ ಮರೆತಿದ್ದೇವೆ. ಕ್ರಿಕೆಟ್ನಲ್ಲೂ ಕ್ಲಾಸ್ ಇದೆ. ಭೀಮ್ಸೇನ್ ಜೋಶಿಯವರ ಹಾಡಿನಲ್ಲಿ ಶ್ರೇಷ್ಠತೆಯಿದೆ. ಸಚೀನ್ ಅವರ ಬ್ಯಾಟಿಂಗ್ನಲ್ಲೂ ಇದೆ. ಕ್ರಿಕೆಟ್ ಎಂದರೆ ಪರಮಜ್ಞಾನಿಗಳು ಹೇಳುವಂತೆ ಮೂರು ಗೂಟಾ ಚೆಂಡು ಬ್ಯಾಟು ಅಲ್ಲ. ಪ್ರತಿ ಕಲಾ ಪ್ರಕಾರದಲ್ಲಿ ಕ್ರೀಡೆಯಲ್ಲಿ ಕ್ಲಾಸ್ ಆಳ ಇರುವಂತೆ ಕ್ರಿಕೇಟ್ ಎಂಬ ಕ್ರೀಡೆಯಲ್ಲೂ ಇದೆ. ಬ್ಯಾಟ್ ಹಿಡಿದೊಡನೆ ಬೀಸಿದೊಡನೆ ಕ್ರಿಕೇಟ್ ಆಗುವುದಿಲ್ಲ. ಕ್ರಿಕೇಟ್ನ ಈ ಕ್ಲಾಸ್ ಜನರಿಗೆ ಅಚ್ಚುಮೆಚ್ಚು ಇವತ್ತು ಕೇವಲ ಭಾರತ ಗೆದ್ದಿತು ಎಂದು ಜನರು ಸಂಭ್ರಮಿಸುತ್ತಿಲ್ಲ. ಸಚೀನ್ರ ಸ್ಟ್ರೇಟ್ ಡ್ರೈವ್, ಯುವರಾಜ್ರ ಕವರ ಡ್ರೈವ್ ಮುಂತಾದವುಗಳಿಗೂ ಜನ ಸಂಭ್ರಮಿಸುತ್ತಾರೆ. ಕ್ರಿಕೇಟ್ನ ಆಳ ಶ್ರೇಷ್ಠತೆ, ಕ್ಲಾಸ್ನ ಅನುಭವಿಸದೆ ಇದ್ದಿದ್ದರೆ ಜನ ಈ ಪ್ರಮಾಣದಲ್ಲಿ ಹುಚ್ಚುರಾಗುತ್ತಿರಲಿಲ್ಲ. ಈ ಮಾತು ಎಲ್ಲಾ ಕ್ರಿಕೇಟ್ ಹುಚ್ಚರಿಗೂ ಅನ್ವಯಿಸದೆ ಇರಬಹುದು ಅಥವಾ ಅದನ್ನೆಲ್ಲ ಅನಿಭವಿಸಿದವರಲ್ಲಿ ಬಹಳ ಜನ ಕ್ರಿಕೇಟ್ ಜ್ವರದಲ್ಲಿ ಕೋಮಾಕ್ಕೆ ಹೋಗದಿರಬಹುದು ಆದರೂ ಅದು ಸತ್ಯ.

ಭಾರತೀಯರಿಗೆ ಎಷ್ಟು ಕ್ರಿಕೇಟ್ ಹುಚ್ಚು ಇದೆಯೊ ಅದಕ್ಕಿಂತ ಹೆಚ್ಚು ಪುಟ್ಬಾಲ್ ಹುಚ್ಚು ಅಮೇರಿಕಾದವರಿಗೆ, ಬ್ರಿಟಿಷರಿಗೆ ಇದೆ. ಅಲ್ಲಿ ಆಟಗಾರ ಸರಿಯಾಗಿ ಆಡಲಿಲ್ಲವೆಂದು ಪುಟ್ಬಾಲ್ ಹುಚ್ಚರು ಕೊಲೆ ಮಾಡಿದ ಉದಾಹರಣೆಯು ಇದೆ! ಕ್ರಿಕೇಟ್ ಹುಚ್ಚು ಅತಿಯಾದ್ದರಿಂದಲೇ ದೇಶ ಬೆಳೆಯಲಿಲ್ಲ ಎಂದು ವಾದ ಮಾಡುವ ಪರಮಜ್ಞಾನಿಗಳು ತಿಳಿಯದ ವಿಷಯವಿದು ಉತ್ತರಕನ್ನಡದ ಕೆಲವು ಹಳ್ಳಿಗಳಲ್ಲಿ ಅಂತವರು ಭಾಷಣ ಮಾಡುವಾಗ ದೇಶದ ಪ್ರಗತಿಗೆ ಮಾರಕವೆಂದು ಅಮೇರಿಕಾದಲ್ಲಿ ಕ್ರಿಕೆಟ್ ಅನ್ನು Ban ಮಾಡಿದ್ದಾರೆ. ಎಂದದ್ದನ್ನು ನಾನು ಕೇಳಿದ್ದೇನೆ! ಅಮೇರಿಕ ದಶಕಗಳಿಂದ ಟೆಸ್ಟ್ ಆಡುವ ಮಾನ್ಯತೆ ಪಡೆಯಲು ಪರದಾಡುತ್ತಿದೆ. ಮಾನ್ಯತೆ ಸಿಗದಿರುವ ಕಾರಣದಿಂದಲೇ ಇಂದು ಆಡುತ್ತಿಲ್ಲ. ಬಹುಶಃ ಹುಚ್ಚು ಪ್ರತಿಯೊಬ್ಬರಿಗೂ ಇರುತ್ತದೆ. ಕೆಲವರಿಗೆ ಕ್ರಿಕೇಟ್ ಹುಚ್ಚು, ಕೆಲವರಿಗೆ ಸಿನಿಮಾ, ಕೆಲವರಿಗೆ ಸಂಗೀತ, ಕೆಲವರಿಗೆ ಅದೆಲ್ಲವೂ ! ಪ್ರಬುದ್ಧ ಮನಸ್ಸುಗಳು ಆಸಕ್ತಿಯನ್ನು ಆಸಕ್ತಿಗೆ ಸೀಮಿತವಾಗಿಸುತ್ತದೆ. ಅಪ್ರಬುದ್ಧ ಮನಸ್ಸುಗಳು ಅದನ್ನು ಹುಚ್ಚಿನ ತನಕ ಬೆಳೆಯಲು ಬಿಡುತ್ತದೆ. ಅದೆಲ್ಲವೂ ಅವರವರ ಮನಸ್ಸಿಗೆ ವಯಕ್ತಿಕ ಆಯ್ಕೆಗೆ ಸಂಬಂಧಪಟ್ಟದ್ದು.- ಆದಿತ್ಯ ಭಟ್

1 comments:

Anonymous said...

nice...............

Post a Comment