ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಅಳಿವಿನಂಚಿನಲ್ಲಿರುವ ಜಲಚರಗಳನ್ನು ನಾಶಪಡಿಸಿದರೆ ಶಿಕ್ಷೆ
ಮಲ್ಪೆ: ಸಮುದ್ರದಲ್ಲಿ ಅಳಿವಿನಂಚಿನಲ್ಲಿರುವ ಜಲಚರಗಳಾದ ಕಡಲಾಮೆ, ತಿಮಿಂಗಿಲ ಮೊದಲಾದ ಮೀನಿನ ಪ್ರಭೇದಗಳನ್ನು ಹಿಡಿದು ಅದರ ಸಂತತಿಯನ್ನು ನಾಶಪಡಿಸಿದರೆ ಜೈಲು ಕಂಬಿ ಹಿಂದೆ ಗ್ಯಾರಂಟಿ...ನೀವೂ ಜಾಗ್ರತರಾಗಿ..ರಾಜ್ಯದ ಕಾನೂನಿನ ಪ್ರಕಾರ ಅಪರಾಧವೆನಿಸುತ್ತದೆ ಎಂದು ಕರ್ನಾಟಕ ಪೊಲೀಸ್ ಇಲಾಖೆಯ ಸಿಐಡಿ ಫಾರೆಸ್ಟ್ನ ಪೊಲೀಸ್ ಮಹಾ ನಿರ್ದೇಶಕ ಕೆ.ಎಸ್.ಎನ್. ಚಿಕ್ಕೆರೂರ್ ಹೇಳಿದ್ದಾರೆ.ಕರ್ನಾಟಕ ಪೊಲೀಸ್ ಇಲಾಖೆಯ ಸಿಐಡಿ ಫಾರೆಸ್ಟ್ ವತಿಯಿಂದ ನಡೆದ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಅಳಿವಿನಂಚಿನಲ್ಲಿರುವ ಮೀನಿನ ರಕ್ಷಣೆಯ ಬಗ್ಗೆ ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಸೂಚನಾ ಫಲಕ ಉದ್ಘಾಟಿಸಲಾಗಿದೆ.
ಕೇಂದ್ರ ಸರಕಾರ 1972ರಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ನು ಹೊರಡಿಸಿದ್ದು, ಅದರಂತೆ ವನ್ಯಜೀವಿ ಸಂರಕ್ಷಣಾ ಕಾಯ್ದೆ 2 ರಂತೆ ಜಲಚರ, ಸಸ್ತನಿ, ಸರಿಸೃಪ, ಕಶೇರುಕ, ಅಕಶೇರುಕಗಳು ಹಾಗೂ ಅವುಗಳ ವೊಟ್ಟೆ ಮರಿಗಳನ್ನು ನಾಶಪಡಿಸಿದರೆ ಅಪರಾಧವೆಸಗಿದವನಿಗೆ 3 ರಿಂದ 7 ವರ್ಷಗಳ ಕಾಲ ಸಜೆ ಮತ್ತು 25 ಸಾವಿರ ರೂಪಾಯಿ ದಂಡವನ್ನು ವಿಧಿಸಲಾಗುತ್ತದೆ ಎಂದರು. ಈ ಬಗ್ಗೆ ಮೀನುಗಾರರಲ್ಲಿ ಎಚ್ಚರಿಕೆ ಮೂಡಿಸಲು ರಾಜ್ಯದ ಪ್ರಮುಖ ಬಂದರುಗಳಲ್ಲಿ ಮಾಹಿತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದ್ದು ಕಾರಾವಾರ, ಹೊನ್ನಾವರ, ಭಟ್ಕಳ ಮತ್ತು ಮಲ್ಪೆಬಂದರುಗಳಲ್ಲಿ ಸೂಚನಾ ಫಲಕವನ್ನು ಅಳವಡಿಸಲಾಗಿದೆ .

ಇವುಗಳನ್ನು ಹಿಡಿದೀರಾ...ಜೋಕೆ...
ನೀಲಿ ತಿಮಿಂಗಿಲ, ಭರ್ಜಿ ಹಲ್ಲಿನ ಮೀನುಗಳು, ತಿಮಿಂಗಿಲ, ನೀರ್ ಬಲೆರ್, ಕಲ್ಲು ಥೊರಕೆ, ಚಿಕ್ಕ ಮೂತಿಯ ಸಾಮಾನ್ಯ ಡಾಲ್ಫಿನ್, ಗೂನು ಬೆನ್ನಿನ ಡಾಲ್ಫಿನ್, ಸವಕ್ಕು ಥೊರಕೆ, ದೊಡ್ಡ ಹಲ್ಲಿನ ಗರಗಸ ಮೀನು, ಕೆಂಪು ಹವಳ, ಬಿಳಿದೊಡ್ಡ ಹೊಟ್ಟೆಯ ಕಡಲ ಗರುಡ, ಒರಟು ಹಲ್ಲಿನ ಡಾಲ್ಫಿನ್, ಕಡಲ ಸೌತೆ, ಗಿಟಾರ್ ಮೀನು, ಬಾಟಲ್ ಮೂಗಿನ ಡಾಲ್ಫಿನ್, ಕ್ಯಾರೆಟ್ ಆಮೆ, ಹಸಿರ್ಗಡಲ ಆಮೆ, ಬೆಂಕಿ ಹವಳ, ಹದ್ದು ಕೊಕ್ಕಿನ ಆಮೆ, ಚರ್ಮದ ಆಮೆ, ಪಾಂಡಿಚೆರಿ ಮೀನು, ಚೂಪಾದ ಹಲ್ಲಿನ ಗರಗಸ ಮೀನು, ಕಪ್ಪು ಹವಳ, ಡೈಸಿ ಹವಳ, ಆಲೀಪ್ ರೆಡ್ಲೆ ಆಮೆ, ಕಡಲ ಕುದುರೆ, ಕೊಲೇಜ್ ವೊದಲಾದ ಮೀನುಗಳನ್ನು ಹಿಡಿಯುವುದು ಅಪರಾಧವಾಗುತ್ತದೆ.

-ಮಾನಸಿ

0 comments:

Post a Comment