ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ
ಇದು ಮಹಾ ಹೆರಿಗೆ...ಹೌದು ದಾಖಲೆಯ ಹೆರಿಗೆ.ಕೇವಲ ರಾಜ್ಯಮಟ್ಟದಲ್ಲಿ ದಾಖಲೆ ಮೆರೆದ ಹೆರಿಗೆಯಲ್ಲ...ವಿಶ್ವ ಮಟ್ಟದ ಹೆರಿಗೆ!ಹೌದು...ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸನಿಹದ ಪಿಲಿಕುಳದಲ್ಲಿರುವ ಡಾ.ಶಿವರಾಮಕಾರಂತ ಜೈವಿಕ ಉದ್ಯಾನವನದ ಕಾಳಿಂಗ ಸರ್ಪ ಸಂತಾನೋತ್ಪತ್ತಿ ಕೇಂದ್ರದಲ್ಲಿ ಈ ಹೆರಿಗೆ ನಡೆದಿದೆ.ತನ್ಮೂಲಕ ನಿರಂತರ ಏಳು ವರುಷಗಳ ಸಂಶೋಧಾನಾ ಕಾರ್ಯಕ್ಕೆ ಫಲ ದೊರೆತಂತಾಗಿದೆ.ಇಲ್ಲಿರುವ ಕಾಳಿಂಗ ಸರ್ಪಗಳ ಪೈಕಿ ನಾಲ್ಕು ಸರ್ಪಗಳು ಏಕ ಕಾಲದಲ್ಲಿ ಮೊಟ್ಟೆಯಿಡುವ ಮೂಲಕ ಈ ದಾಖಲೆಯಾಗಿದೆ. ವಿಶ್ವದ ಯಾವುದೇ ಜೈವಿಕ ಉದ್ಯಾನವನದ ಕಾಳಿಂಗ ಸಂತಾನೋತ್ಪತ್ತಿ ಕೇಂದ್ರದಲ್ಲಿ ಇಂದಿನ ತನಕ ಕಾಳಿಂಗ ಸರ್ಪಗಳು ಈ ರೀತಿಯಲ್ಲಿ ಮೊಟ್ಟೆಯಿಟ್ಟಿರುವ ದಾಖಲೆಗಳು ಲಭಿಸುತ್ತಿಲ್ಲ.ಇದರಿಂದಾಗಿ ಪಿಲಿಕುಳದ ಜೈವಿಕ ಉದ್ಯಾನವನದ ಮುಕುಟಕ್ಕೆ ಮತ್ತೊಂದು ಗರಿ ಸೇರ್ಪಡೆಗೊಂಡಂತಾಗಿದೆ. ಪಿಲಿಕುಳ ಜೈವಿಕ ಉದ್ಯಾನವನ ಈಗ ವಿಶ್ವದ "ದೃಷ್ಠಿ"ಗೆ ಕಾರಣವಾಗಿದೆ.

ಸಂತಾನೋತ್ಪತ್ತಿಗೆ 5 ಹಾವುಗಳು
ಕಳೆದ 2003ರಿಂದ ಪಿಲಿಕುಳದ ಜೈವಿಕ ಉದ್ಯಾನವನದಲ್ಲಿ ಕಾಳಿಂಗ ಸರ್ಪಗಳ ಕುರಿತಂತೆ ನಿರಂತರ ಸಂಶೋಧನೆಗಳು ನಡೆಯುತ್ತಿತ್ತು.ಕಾಳಿಂಗ ಸರ್ಪದ ಸಂತಾನೋತ್ಪತ್ತಿಗಾಗಿ ವಿಶೇಷ ಪ್ರಯತ್ನಗಳನ್ನೂ ಕೈಗೊಳ್ಳಲಾಗುತ್ತಿತ್ತು. ಆ ಪ್ರಕಾರ 5 ಹೆಣ್ಣು ಕಾಳಿಂಗಗಳನ್ನು ಸಂತಾನೋತ್ಪತ್ತಿಗಾಗಿ ಗೊತ್ತುಪಡಿಸಲಾಗಿತ್ತು. ಕಾಳಿಂಗ ಸರ್ಪಗಳು ಸಂತಾನೋತ್ಪತ್ತಿಗೆ ವಿಶೇಷವಾದ ಸ್ಥಳಗಳನ್ನು ಆಯ್ಕೆ ಮಾಡುತ್ತವೆ. ಸರಿಯಾದ ಹವಾಮಾನ, ಪರಿಸರದಲ್ಲಷ್ಟೇ ಮೊಟ್ಟೆಗಳನ್ನಿಷ್ಟು ಸಂತಾನೋತ್ಪತ್ತಿ ಕಾರ್ಯ ನಡೆಸುತ್ತದೆ. ಅದನ್ನೆಲ್ಲಾ ಅಧ್ಯಯನ ಕೈಗೊಂಡು ಇಲ್ಲಿ ಸಹಜವಾಗಿರುವಂತಹ ಪ್ರಕೃತಿಯ ವಾತಾವರಣವನ್ನೇ ಹೋಲುವ ಕೃತಕ ಸಂತಾನೋತ್ಪತ್ತಿ ಕೇಂದ್ರದಲ್ಲಿ ಈ ಕಾಳಿಂಗಗಳು ಮೊಟ್ಟೆಯಿಟ್ಟು ದಾಖಲೆ ಬರೆದಿವೆ.ಮುಂದಿನ ಎರಡು ತಿಂಗಳೊಳಗಾಗಿ ಈ ಮೊಟ್ಟೆಗಳು ಒಡೆದು ಮರಿಗಳು ಹೊರಬರಲಿವೆ...

0 comments:

Post a Comment