ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
3:32 PM

ವಜ್ರಾಸನ

Posted by ekanasu

ವೈವಿಧ್ಯ
ಎರಡು ಕಾಲುಗಳನ್ನೂ ಮಡಚಿ ಕುಳಿತುಕೊಳ್ಳಬೇಕು. ಪಾದಗಳು ಮೇಲ್ಮುಖವಾಗಿರಬೇಕು. ಕೈಗಳನ್ನು ನೇರವಾಗಿ ಚಾಚಿ ಆಯಾ ಮಂಡಿಗಳ ಮೇಲಿರಿಸಬೇಕು. ಈ ಆಸನದಲ್ಲಿ ಸಮ ಉಸಿರಾಟ ನಡೆಸುತ್ತಾ 1 ನಿಮಿಷದಿಂದ 3 ನಿಮಿಷದವರೆಗೆ ಇರಬೇಕು. ಅನಂತರ ತುಸು ವಿಶ್ರಾಂತಿ.ಉಪಯೋಗಗಳು :ಈ ಆಸನದಿಂದ ಮೊಣಕಾಲು ನೋವು, ಪಾದಗಳ ಗಂಟಿನ ನೋವು ಕಾಲುಗಳ ಸಿಡಿತ ಇತ್ಯಾದಿ ನಿವಾರಣೆಯಾಗುತ್ತವೆ. ಪ್ರಾಣಾಯಾಮ ಮತ್ತು ಧ್ಯಾನಗಳಿಗೆ ಈ ಆಸನವು ಬಹಳ ಉಪಯುಕ್ತವಾಗಿದೆ. ಬೆನ್ನು, ಕೈ, ಕಾಲುಗಳಿಗೆ ಲಘುತ್ವ ಉಂಟಾಗುವುದು. ಉಸಿರಾಟ ನಿರಾಯಾಸವಾಗುವುದು.
-'ಯೋಗರತ್ನ' ಶ್ರೀ ಗೋಪಾಲಕೃಷ್ಣ ದೇಲಂಪಾಡಿ

0 comments:

Post a Comment