ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಚಾರ

ಬೇರೆ ವ್ಯಕ್ತಿಗಳು ನಿಮ್ಮ ಕಡೆ ಬೇಗ ವಾಲಬೇಕು,ನಿಮ್ಮ ಮಾತುಗಳನ್ನು ಕೇಳಿಸಿಕೊಳ್ಳಬೇಕು,ನಿಮ್ಮ ಮಾತುಗಳಿಗೆ ಬೆಲೆ ಕೊಡಬೇಕು, ಆರಾಮಾಗಿ ನಿಮ್ಮ ಜೊತೆ ಬೆರೆಯಬೇಕು ಎಂದು ನೀವು ಬಯಸಿದ್ದೇ ಆದರೆ - ನೀವು ಆ ವ್ಯಕ್ತಿಯ ಕನಸು-ನನಸುಗಳ ಬಗ್ಗೆ,ಆ ವ್ಯಕ್ತಿಯ ಮೌಲ್ಯಗಳ ಬಗ್ಗೆ,ಆ ವ್ಯಕ್ತಿಯ ಭಾವನೆಗಳ ಬಗ್ಗೆ,ಆ ವ್ಯಕ್ತಿಯ ಬೇಕು-ಬೇಡಗಳ ಬಗ್ಗೆ ಹಗುರವಾಗಿ ಮಾತನಾಡದೆ,ಬಹಳ ಕನಿಕರದಿಂದ,ಪ್ರೀತಿ ವಿಶ್ವಾಸದಿಂದ,ಮುಖ್ಯವಾಗಿ ನಿರ್ಮಲ ಮನಸ್ಸಿನಿಂದ,ತಾಳ್ಮೆಯಿಂದ ಮಾತನಾಡಿ. ಆಗ ಆ ವ್ಯಕ್ತಿ ನಿಮ್ಮ ಸ್ನೇಹಿತನಾಗುವುದರಲ್ಲಿ ಸಂದೇಹವೇ ಇಲ್ಲ. ಸ್ನೇಹ ಬೆಳೆದರೆ ಏನಾಗುತ್ತದೆ...? ನೀವು ಪರಸ್ಪರ ಸಹಾಯಕರಾಗುತ್ತೀರಿ. ಆಗ ನಿಮ್ಮ ದಾರಿ ಸುಗಮವಾಗುತ್ತದೆ. ಇದು ಬಹಳ ಬಲಿಷ್ಠ ಸೂತ್ರ. ಒಂದು ಸಲ ನೀವು ಅಳವಡಿಸಿ ನೋಡಿ. ಇದರ ಚಮತ್ಕಾರ ನಿಮಗೇ ತಿಳಿಯುತ್ತದೆ.ಪರರನ್ನು ಟೀಕಿಸುವುದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು(ವ್ಯಕ್ತಿತ್ವ ವಿಕಸನದ ಒಂದು ಕಿವಿ ಮಾತು)
ಕೆಲವೊಮ್ಮೆ ನಾವು ಪರರ ಪಿಸುಮಾತುಗಳಿಗೆ,ಅವರು ನಮ್ಮ ಬಗ್ಗೆಯೇ ಟೀಕಿಸುತ್ತಿರುವುದು ಎಂದು ಕಲ್ಪಿಸಿಕೊಂಡು, ಆ ವಿಷಯವನ್ನು ತೀರವಾಗಿ ಮನಸ್ಸಿಗೆ ಹಚ್ಚಿಕೊಂಡು ನೊಂದುಬಿಡುತ್ತೇವೆ. ಪರಿಸ್ಥಿತಿ ಹತೋಟಿ ಮೀರಿದರೆ ಸಂಬಂಧಗಳಲ್ಲಿ ಬಿರುಕು ಬಿಡಬಹುದು. ಅವರು ನಿಮ್ಮ ಬಗ್ಗೆ ನಿಜವಾಗಲೂ ಟೀಕೆ ಮಾಡಿಕೊಳ್ಳುತ್ತಿದ್ದರೆ ಮಾಡಿಕೊಳ್ಳಲಿ ಬಿಡಿ. ಅದಕ್ಕೆ ನಾವೇಕೆ ನಮ್ಮ ಮಂಡೆ ಬಿಸಿಮಾಡಿಕೊಳ್ಳಬೇಕು..? ಪರರ ಶಾಂತಿ ಭಂಗ ಮಾಡಲು ಪಿತೂರಿ ನಡೆಸುವುದರಿಂದ,ಟೀಕೆಗಳ ಗೋಪುರ ಕಟ್ಟುವುದರಿಂದ ಅವರು ತಮ್ಮ ಅಮೂಲ್ಯವಾದ ಸಮಯ ಮತ್ತು ಶಕ್ತಿ ವ್ಯರ್ಥಮಾಡಿಕೊಳ್ಳಲಿ ಬಿಡಿ. ನೀವು ಎಂದಿಗೂ ತಾಳ್ಮೆ ಮತ್ತು ಸಹನೆಯನ್ನು ಕಳೆದುಕೊಳ್ಳಬೇಡಿ. ಅಂತಹ ಸಂಗತಿಗಳನ್ನು ಪರಿಸ್ಥಿತಿಗಳನ್ನು ಮನಸ್ಸಿಗೆ ಹಚ್ಚಿಕೊಳ್ಳದೆ, ಮನಸ್ಸನ್ನು ಬೇರೆ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಿ . ಊರ ಬಾವಿ ಮುಚ್ಚಬಹುದು ಆದರೆ ಜನರ ಬಾಯಿ ಮುಚ್ಚಲು ಸಾಧ್ಯವೇ..! ಅಂತಹ ಸನ್ನಿವೇಶಗಳಿಗೆ ಪ್ರಾಮುಖ್ಯತೆಯೇ ನೀಡಬೇಡಿ. ತಾಳ್ಮೆ ಕಳೆದುಕೊಂಡರೆ ಮಾತಿಗೆ ಮಾತು ಬೆಳೆಯುತ್ತದೆ. ನಂತರ ಜಗಳ. ರಕ್ತಪಾತವೂ ಆಗಬಹುದು.

ನಯವಾಗಿ ಅರ್ಥವಾಗುವ ರೀತಿಯಲ್ಲಿ ಮಾತನಾಡಿ(ವ್ಯಕ್ತಿತ್ವ ವಿಕಸನದ ಒಂದು ಕಿವಿ ಮಾತು)

ನೀವು ಏನೇ ಮಾತನಾಡಬೇಕಾದರೂ ಬೇರೆಯವರಿಗೆ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಮಾತನಾಡಿ. ಅವರನ್ನು ಅರ್ಥಮಾಡಿಸಲು ನೀವು ಹೆಚ್ಚು ಸಮಯ ಕಳೆಯುತ್ತಿದ್ದರೆ, ನೀವು ಆಡುತ್ತಿರುವ ಮಾತುಗಳು ಅರ್ಥಮಾಡಿಕೊಳ್ಳಲು ಕಷ್ಟವಾಗುತ್ತಿದೆ, ನೀವು ಸರಿಯಾಗಿ ಮಾತನಾಡುತ್ತಿಲ್ಲ ಎಂದರ್ಥ. ಅರ್ಥ ಮಾಡಿಸಲು ಹೆಚ್ಚು ಸಮಯ ತೆಗೆದುಕೊಳ್ಳದೆ ನಿಮ್ಮ ಮಾತುಗಳನ್ನು ಅರ್ಥಮಾಡಿಸಿ ಬಿಡಿ. ಅವರ ಬಗ್ಗೆ ನೀವು ಕಾಳಜಿ ವಹಿಸುತ್ತಿದ್ದೀರಿ ಎಂಬ ನಂಬಿಕೆ ಅವರಲ್ಲಿ ಬಂದರೆ, ಆಗ ಅವರು ನಿಮ್ಮೊಂದಿಗೆ ಸಹಕರಿಸುತ್ತಾರೆ. ಆ ನಂಬಿಕೆ ಹುಟ್ಟಿಸುವುದು ನಿಮ್ಮ ಮಾತಿನ ಚಾತುರ್ಯದ ಜೊತೆಗೆ ನಿರ್ಮಲ ಮನಸ್ಸಿನ ಸಿಹಿ ಸೇರಿದರೆ ಮಾತ್ರ ಸಾಧ್ಯ. ಪ್ಲಾಸ್ಟಿಕ್ ಮಾತುಗಳ ಪ್ರಭಾವ ಕ್ಷಣಿಕ,ನಿರ್ಮಲ ಮಾತುಗಳ ಪ್ರಭಾವ ಶಾಶ್ವತ ಎಂಬುದನ್ನು ಮರೆಯಬೇಡಿ.

- ಜಬೀವುಲ್ಲಾ ಖಾನ್.

0 comments:

Post a Comment