ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
12:13 AM

ಸಹನೆ...ಶಾಂತಿ...

Posted by ekanasu

ವಿಚಾರ
ಎಲ್ಲಿ ಸಹನೆ ಮನೆ ಮಾಡುತ್ತೋ ಅಲ್ಲಿ ಶಾಂತಿ ನೆಲೆಸುತ್ತದೆ!

ಈಜಿಪ್ಟ್ ದೇಶದ ದೊರೆ ಸಲಾಹುದ್ದೀನ್ ಅಯ್ಯೂಬಿ ತನ್ನ ವಿಶ್ರಾಂತಿ ಕುಠೀರದಿಂದ ಹೊರ ಬಂದಾಗ, ಅವನ ಎದೆಯ ಮೇಲೆ ಒಂದು ಪಾದರಕ್ಷೆಯ ಏಟು ಬೀಳುತ್ತದೆ. ಕಾವಲುಗಾರರ ನಡುವೆ ಜಗಳ ನಡೆದು ಒಬ್ಬ ಇನ್ನೊಬ್ಬನ ಮೇಲೆ ಎಸೆದ ಪಾದರಕ್ಷೆಯೇ ಅದು. ಗುರಿತಪ್ಪಿ, ಇಡೀ ದೇಶದ ಅಧಿಪತಿಯಾದ ಸುಲ್ತಾನನ ಮೇಲೆ ಬೀಳುತ್ತದೆ. ಆ ಸ್ಥಾನದಲ್ಲಿ ನಾವು ನೀವು ಇದ್ದಿದ್ದರೆ ಏನಾಗುತ್ತಿತ್ತು ಎಂಬುದನ್ನು ಸ್ವಲ್ಪ ಯೋಚಿಸಿ....! ಅವರ ಈ ಕೃತ್ಯಕ್ಕೆ ಏನು ಸಜೆ ಕೊಡದೆ, ತಲೆ ತಗ್ಗಿಸಿಕೊಂಡು, ಮೌನವಾಗಿ, ಶಾಂತಿಯಿಂದ ಸುಲ್ತಾನ ಅಲ್ಲಿಂದ ಹೊರಟು ಹೋಗುತ್ತಾನೆ. ಎಂತಹ ಸಹನಾ ಸ್ವಭಾವ ಆತನದು. ಹಿರಿಯರು ಕಿರಿಯರೊಂದಿಗೆ ಸಹನೆಯಿಂದ ನಡೆದುಕೊಂಡರೆ, ಕಿರಿಯರು ಸಹ ಅವರ ಬಾಳಲ್ಲಿ ಸಹನೆಯನ್ನು ಅಳವಡಿಸಿಕೊಳ್ಳವುದನ್ನು ಕಲಿತುಕೊಳ್ಳುತ್ತಾರೆ. ಎಷ್ಟೇ ದೊಡ್ಡ ಅಧಿಕಾರಿಯಾಗಿದ್ದರೂ ಸಹ ನಾವು ಸಹನೆ ಕಳೆದುಕೊಳ್ಳಬಾರದು ಎಂದು ಸುಲ್ತಾನ ನಮಗೆ ಕಿವಿಮಾತು ಹೇಳಿದ್ದಾನೆ. ಅಸಹನೆಯ ಪರಿಣಾಮಗಳೇನೆಂದು ಪ್ರತಿದಿನ ನಾವು ನಮ್ಮ ಕಣ್ಮುಂದೆ ಕಾಣುತ್ತಿದ್ದೇವೆ. ಎಲ್ಲಿ ಸಹನೆ ಮನೆ ಮಾಡುತ್ತೋ ಅಲ್ಲಿ ಶಾಂತಿ ನೆಲೆಸುತ್ತದೆ.

- ಜಬೀವುಲ್ಲಾ ಖಾನ್

0 comments:

Post a Comment