ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ

ಕ್ಷಣ ಕ್ಷಣಕ್ಕೂ ಕುತೂಹಲ...ಹೊಸ ತಿರುವು...ಇದ್ಯಾಕೆ ಹೀಗೆ ಎಂಬ ಪ್ರಶ್ನೆಗಳ ಸುರಿಮಳೆ...ವಿಜ್ಞಾನಕ್ಕೊಂದು ಸವಾಲು...ಧಾರ್ಮಿಕವೋ, ಸಂಪ್ರದಾಯವೋ...ಯಾವಕಾರಣವೋ ಗೊತ್ತಿಲ್ಲ...ಅಂತೂ ಈ ಬುರುಡೆಗಳು ಇಂದು "ಧರ್ಮ-ವಿಜ್ಞಾನ"ಈ ಎರಡು ಕ್ಷೇತ್ರಕ್ಕೂ ಸವಾಲಾಗಿ ಪರಿಣಮಿಸಿದೆ...ಹತ್ತು ಹಲವು ರಹಸ್ಯಗಳನ್ನೆಲ್ಲ ಹೊತ್ತು ಕುಳಿತಿವೆ...ಅಂತೂ ಬುರುಡೆಯೊಳಗಣ ರಹಸ್ಯವಾದರೂ ಏನು...? ಈ ಬುರುಡೆಗಳು ಯಾಕೆ ಬಚ್ಚಿಟ್ಟುಕೊಂಡಿದ್ದವು...ಎಲ್ಲಿದ್ದವು...ಯಾಕೆ ಹೀಗಾದವು ಎಲ್ಲವೂ ಕುತೂಹಲವೇ ಆಗಿ ಉಳಿದಿದೆ. ಏತನ್ಮಧ್ಯೆ ಬುದ್ದಿಜೀವಿಗಳು, ವಿಜ್ಞಾನಿಗಳು ಹಲವು ಸಾಧ್ಯತೆಗಳನ್ನು ತಿಳಿಸುತ್ತಿದ್ದಾರೆ.ಒಟ್ಟಿನಲ್ಲಿ ಬುರುಡೆ ಎಲ್ಲರ ಮುಂದೆ "?"ಆಗಿ ಉಳಿದಿದೆ...!ಇದೇ ಇಂದಿನ "ಈ ಕನಸು ಸ್ಪೆಷಲ್ ರಿಪೋರ್ಟ್"ಹಠಾತ್ ಹೆಸರುಮಾಡಿದ ಅಣ್ಣಿಗೇರಿ
ಅಣ್ಣಿಗೇರಿ ಹಠಾತ್ ವಿಶ್ವಪ್ರಸಿದ್ಧಿ ಪಡೆದಿದೆ!ಕಾರಣ ಇಲ್ಲಿದೊರೆತ ಬುರುಡೆಗಳು! ಧಾರಾವಾಡ ಜಿಲ್ಲೆಯ ನವಲಗುಂದ ತಾಲೂಕಿನ ಅಣ್ಣಿಗೇರಿ ಅಷ್ಟೇನೂ ಪ್ರಸಿದ್ಧವಾಗಿರುವ ಪರಿಸರವಾಗಿರಲಿಲ್ಲ.ಆದರೆ ಕೆಲ ತಿಂಗಳುಗಳ ಹಿಂದೆ ಅಲ್ಲಿ ಬುರುಡೆ ದರ್ಶನವಾಯಿತು...ಅದರ ಶೋಧಕ್ಕಾಗಿ ಕೈಯಿಕ್ಕಿದಾಗ 471ಬುರುಡೆಗಳು ಮತ್ತೆ ಕಂಡುಬಂದವು...ಇವೆಲ್ಲವೂ ಕೂಡಾ ಹಲವಾರು ಸತ್ಯಗಳನ್ನು ಹುದುಗಿಸಿಕೊಂಡು ಮಣ್ಣೊಳಗೆ ವರ್ಷಾನುಗಟ್ಟಲೆ ಕಾಲ ಅವಿತುಕುಳಿತಿದ್ದವು!

ಇಂದು ನಿನ್ನೆಯವಲ್ಲ...
ಅಣ್ಣಿಗೇರಿಯಲ್ಲಿ ಪತ್ತೆಯಾದ ತಲೆಬುರುಡೆಗಳು ಇಂದು ನಿನ್ನೆಯದಲ್ಲ. ಈ ಬುರುಡೆಗಳು 638ವರುಷಗಳಷ್ಟು ಹಳೆಯವಂತೆ! ಹಾಗಾದರೆ ಇಷ್ಟೆಲ್ಲಾ ಬುರುಡೆಗಳು ಒಂದೇಕಡೆ ದೊರಕಲು ಕಾರಣವೇನು ಎಂಬ ಪ್ರಶ್ನೆ ಉದ್ಭವಿಸಿದೆ. ಇದಕ್ಕೆ ಇಂದು ಹಲವು ತಿರುವುಗಳು-ಹೇಳಿಕೆಗಳು ಲಭ್ಯವಾಗುತ್ತಿವೆ. ಒಟ್ಟಿನಲ್ಲಿ ಈ ಬುರುಡೆಗಳು ರಹಸ್ಯವಾಗಿ ಕಾಡತೊಡಗಿವೆ.

ಪತ್ತೆಯಾಗಿದ್ದು ಹೇಗೆ?
ಈ ನೂರಾರು ಬುರುಡೆಗಳು ಪತ್ತೆಯಾಗಿದ್ದೇ ಒಂದು ರೋಚಕ. ವರುಷಗಳ ಹಿಂದೆ ಅಣ್ಣಿಗೇರಿಯ ಹೊರವಲಯದಲ್ಲಿ ಈ ಬುರುಡೆ ಗೋಚರಿಸಿದವು. ಚರಂಡಿ ಬಳಿಯಲ್ಲಿ ಭೂಮಿಯೊಳಗೆ ಈ ಬುರುಡೆಗಳು ಗೋಚರಿಸಿದವು. ಇದರಿಂದ ಅಚ್ಚರಿಗೊಂಡು ಮತ್ತಷ್ಟು ಶೋಧಕಾರ್ಯ ಕೈಗೊಂಡಾಗ ಮತ್ತಷ್ಟು ಬರುಡೆಗಳು ಪತ್ತೆಯಾಗಿದ್ದವು. ಇದನ್ನು ಮೇಲ್ನೋಟಕ್ಕೆ ಸಾಮೂಹಿಕವಾಗಿ ಅಂತ್ಯಸಂಸ್ಕಾರ ನಡೆಸಿದ ಮಾನವ ಶರೀರದ ಬುರುಡೆಗಳು ಎಂದು ಹೇಳಲಾಯಿತು...

ನಿಗೂಢತೆಯ ಬೆನ್ನುಹತ್ತಿ...
ಹತ್ತು ಹಲವು ನಿಗುಢತೆಗೆ ಕಾರಣವಾಗಿರುವ ಅಣ್ಣಿಗೇರಿ ಬುರುಡೆಗಳು ಹತ್ತು ಹಲವು ಸಾಧ್ಯತೆಗಳನ್ನು ಹೊರಗೆಡಹುತ್ತಿವೆ.
ಯುದ್ಧದಲ್ಲಿ ಮಡಿದ ಜನರನ್ನು ಸಾಮೂಹಿಕವಾಗಿ ಅಂತ್ಯಸಂಸ್ಕಾರಮಾಡಿ ಮಣ್ಣುಮಾಡಲಾಗಿದೆ ಎಂಬ ವಾದ ಒಂದೆಡೆಯಾದರೆ ; ಇದಲ್ಲವೇ ಅಲ್ಲ. ಸಾಮೂಹಿಕ ಆತ್ಮಹತ್ಯೆಯೇ ಈ ಬುರುಡೆ ಒಂದೆಡೆ ಲಭಿಸಲು ಕಾರಣ ಎಂಬುದು ಇನ್ನೊಂದು ವಾದವಾಗಿದೆ. ಒಟ್ಟಿನಲ್ಲಿ ಬುರುಡೆಗಳ ಬಗ್ಗೆ ಒಂದೆಡೆ ಧಾರ್ಮಿಕ ನಂಬಿಕೆಗಳು ಕಂಡುಬಂದರೆ ಇನ್ನೊಂದೆಡೆ ವೈಜ್ಞಾನಿಕ ಕಾರಣಗಳು ಲಭ್ಯವಾಗುತ್ತಿವೆ.ಒಟ್ಟಿನಲ್ಲಿ ಬುರುಡೆ ರಹಸ್ಯ ಮಾತ್ರ ಎಲ್ಲರ ತಲೆ ಕೆಡಿಸುವಂತಾಗಿದೆ.

ಕಲುಬುರ್ಗಿ ವಾದ ಹೀಗಿದೆ...!
ಅಣ್ಣಿಗೇರಿಯಲ್ಲಿ ಲಭ್ಯವಾದ ನೂರಾರು ಬುರುಡೆಗಳ ಬಗ್ಗೆ ಖ್ಯಾತ ಸಂಶೋಧಕ ಡಾ.ಎಂ.ಎಂ.ಕಲ್ಬುರ್ಗಿ ಹೊಸವಾದ ಮಂಡಿಸಿದ್ದಾರೆ.14ನೇ ಶತಮಾನದಲ್ಲಿ ವೀರ ಗೊಗ್ಗಿದೇವ ಎಂಬವರ ಮುಂದಾಳತ್ವದಲ್ಲಿ ವೀರ ಮಹೇಶ್ವರ ಪಂಥ್ ಎಂಬ ಸಂಘಟನೆ ಅಸ್ತಿತ್ವದಲ್ಲಿತ್ತು. ಅವರೆಲ್ಲರೂ ಶಿವನ ಆರಾಧಕರಾಗಿದ್ದರು. ಶಿವನನ್ನು ಮೆಚ್ಚಿಸಲೆಂದೇ ಇವರೆಲ್ಲಾ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ವಾದ ಮಂಡಿಸುತ್ತಿದ್ದಾರೆ.
- ವರ್ಷಾ

0 comments:

Post a Comment