ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
11:04 PM

ಪದ್ಮಾಸನ

Posted by ekanasu

ವೈವಿಧ್ಯ


ಪದ್ಮ ಎಂದರೆ ಕಮಲದ ಹೂ ಯಾ ತಾವರೆ ಹೂ ಎಂದರ್ಥ. ಈ ಆಸನವು ಕಮಲ ಹೂವನ್ನು ಹೋಲುತ್ತದೆ. ಆದಕಾರಣ ಪದ್ಮಾಸನ ಎನ್ನುವುದು. ಈ ಆಸನವು ಧ್ಯಾನ ಮತ್ತು ಪ್ರಾಣಾಯಾಮಕ್ಕೆ ಹೇಳಿ ಮಾಡಿಸಿದ ಭಂಗಿಯಾಗಿದೆ. ಹಾಗೂ ಇದು ಒಂದು ಸುಖಕರವಾಗಿ ಕುಳಿತುಕೊಳ್ಳುವ ಭಂಗಿಯಾಗಿದೆ. ಈ ಆಸನದಲ್ಲಿ ನೆಲೆಸಿದಾಗಲೇ ಬುದ್ಧದೇವನಿಗೆ ಜ್ಞಾನೋದಯವಾಯಿತು ಎಂದು ಹೇಳಲಾಗಿದೆ. ಈ ಆಸನವನ್ನು ಕಲಿಯುವಾಗ ಗುರುಗಳ ಸಲಹೆ, ಮಾರ್ಗದರ್ಶನ ಪಡೆದುಕೊಂಡೇ ಅಭ್ಯಾಸ ಮಾಡಬೇಕು.


ಅಭ್ಯಾಸ ಕ್ರಮ


ಜಮಖಾನೆ ಹಾಸಿದ ನೆಲದ ಮೇಲೆ ನೇರವಾಗಿ ಕುಳಿತು, ಎರಡೂ ಕಾಲುಗಳನ್ನೂ ಮುಂದಕ್ಕೆ ನೀಳವಾಗಿ ಚಾಚಬೇಕು. ಬಲಕಾಲನ್ನು ಎಡತೊಡೆಯ ಮೇಲೆ, ಎಡಗಾಲನ್ನು ಮಡಿಸಿ ಬಲತೊಡೆಯ ಮೇಲೆ ಇರಿಸಬೇಕು. ಕೈಗಳನ್ನು ಆಯಾ ಮಂಡಿಗಳ ಮೇಲಿಟ್ಟು ಹೆಬ್ಬೆಟ್ಟು ಮತ್ತು ತೋರು ಬೆರಳುಗಳ ತುದಿಗಳನ್ನು ತಗಲಿಸಿ 'ಚಿನ್ಮುದ್ರೆ' ಭಂಗಿಯನ್ನು ಹಿಡಿಯಬೇಕು ಅಥವಾ ಕೈಗಳೆರಡನ್ನೂ ಹಿಮ್ಮಡಿಗಳೆರಡರ ಮಧ್ಯ ಇಡಬೇಕು. ಅಂಗೈಗಳು ಮೇಲ್ಮೊಗವಾಗಿರಬೇಕು. ಈ ಸ್ಥಿತಿಯಲ್ಲಿ ಸಾಮಾನ್ಯ ಉಸಿರಾಟ ನಡೆಸುತ್ತಾ ಆರಂಭದಲ್ಲಿ ಸ್ವಲ್ಪ ಹೊತ್ತು ಕ್ರಮೇಣ ಸಾಧ್ಯವಿದ್ದಷ್ಟು ಸಮಯದವರೆಗೆ ಮಾಡಬಹುದು. ಕಾಲುಗಳು ನೋವು ಅನಿಸಿದರೆ ಕೂಡಲೇ ವಿರಮಿಸಬೇಕು. ಅಭ್ಯಾಸ ಆದ ಅನಂತರ ಕಣ್ಣುಗಳನ್ನು ಮುಚ್ಚಿ ಗಮನವನ್ನು ಉಸಿರಾಟದಲ್ಲಿ ಯಾ ಇಷ್ಟ ದೇವರಲ್ಲಿ ಇರಿಸಬೇಕು. ಇದರಿಂದಾಗಿ ಏಕಾಗ್ರತೆಯನ್ನು ಬಲು ಬೇಗ ಸಾಧಿಸಬಹುದಾಗಿದೆ. ಪದ್ಮಾಸನವನ್ನು ಮಾಡಲು ಕಷ್ಟವಾಗುವವರು ಆರಂಭದಲ್ಲಿ ಅರ್ಧ ಪದ್ಮಾಸನ, ಕಾಲುಗಳನ್ನು ಮಡಿಸಿ ಬಿಡಿಸುವ ವ್ಯಾಯಾಮ, ಮತ್ತು ಬದ್ಧ ಕೋಣಾಸನವನ್ನು ಚೆನ್ನಾಗಿ ಅಭ್ಯಾಸ ಮಾಡಬೇಕು. ಪದ್ಮಾಸನದಲ್ಲಿ ಪರಿಣತಿ ಹೊಂದಿದ ನಂತರ ಧ್ಯಾನ ಮತ್ತು ಪ್ರಾಣಾಯಾಮವನ್ನು ಮಾಡಬಹುದು. ಈ ಸ್ಥಿತಿಯಲ್ಲಿ ದೃಷ್ಠಿಯನ್ನು ನಾಸಿಕಾಗ್ರ ಅಥವಾ ಭ್ರೂ ಮಧ್ಯದಲ್ಲಿ ಇರಿಸಬೇಕು.

ಉಪಯೋಗಗಳುಹೊಸಬರಿಗೆ ಆರಂಭದಲ್ಲಿ ಪದ್ಮಾಸನ ಅಭ್ಯಾಸ ಮಾಡುವಾಗ ಕೆಲವು ದಿನಗಳ ಕಾಲ ಸ್ವಲ್ಪ ಮಂಡಿನೋವು ಬರಬಹುದು. ಅಭ್ಯಾಸ ಆದ ನಂತರ ಪದ್ಮಾಸನವು ಒಂದು ಸುಖಕರವಾಗಿ ಕುಳಿತುಕೊಳ್ಳುವ ಭಂಗಿಯಾಗಿದೆ. ನೆಲದಲ್ಲಿ ತುಂಬಾ ಹೊತ್ತು ಕುಳಿತುಕೊಳ್ಳಬಹುದು. ಯಾವುದೇ ರೀತಿಯ ಕಾಲು ಸೆಳೆತ, ಮಂಡಿನೋವು ಇತ್ಯಾದಿ ಬರುವುದಿಲ್ಲ. ಕಾಲಿನ ನರ, ಹೊಟ್ಟೆ ಸೊಂಟ, ಬೆನ್ನು, ಮಂಡಿ ಇತ್ಯಾದಿ ಅಂಗಗಳು ಹೊಸ ಹುರುಪನ್ನು ಪಡೆದು ಚುರುಕಾಗುತ್ತದೆ. ಹೊಟ್ಟೆಯು ತೆಳ್ಳಗಾಗಿ ಶರೀರಕ್ಕೆ ಒಂದು ಬಗೆಯ ಸುಂದರತೆ ಕಂಡುಬರುತ್ತದೆ. ತೊಡೆಗಳ ಕೊಬ್ಬು ಕರಗುತ್ತದೆ. ಈ ಆಸನದಲ್ಲಿ ಮನಸ್ಸು ಏಕಾಗ್ರತೆಯನ್ನು ಸಾಧಿಸಿ ಬುದ್ಧಿ ಚುರುಕಾಗುತ್ತದೆ. ಆತಂಕ, ಉದ್ವೇಗ ದೂರವಾಗುತ್ತದೆ. ಈ ಆಸನದಿಂದ ಮನಸ್ಸಿಗೆ ಸುಖ, ಶಾಂತಿ, ನೆಮ್ಮದಿ ದೊರೆಯುತ್ತದೆ. ಶಿಸ್ತು ಎದ್ದು ತೋರುತ್ತದೆ.

- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ,

0 comments:

Post a Comment