ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಚಾರ
ಈ ಜನ ಬಾಂಬ್ ಗಿಂತ ಡೇಂಜರ್
ಮೂರ್ನಾಲ್ಕು ಸ್ನೇಹಿತರು ಒಂದು ಮೂಲೆಯಲ್ಲಿ ಸೇರಿಕೊಂಡರು. ಸಂಭಾಷಣೆ ಶುರು. ಸಂಭಾಷಣೆ ಸಕಾರಾತ್ಮಕವಾಗಿದ್ದರೆ ಸರಿ, ನಕಾರಾತ್ಮಕವಾಗಿದ್ದರೆ...? ಜತೆಗಿದ್ದವರಿಗೆ ನಕಾರಾತ್ಮಕ ಭಾವನೆಗಳ ಬಿಸಿ ತಟ್ಟದೆ ಇರಲಾರದು. ಆದುದರಿಂದ ನಕಾರಾತ್ಮಕ ಸಂಭಾಷಣೆ ಮತ್ತು ನಕಾರಾತ್ಮಕ ಜನರಿಂದ ದೂರವಿರಿ. ನಕಾರಾತ್ಮಕ ಸಂಭಾಷಣೆಯಿಂದ ಧೈರ್ಯ ಕುಗ್ಗುತ್ತದೆ. ಬಾಳಲ್ಲಿ ಹುಮ್ಮಸ್ಸು, ಉತ್ಸಾಹ ಕ್ಷೀಣಿಸುತ್ತದೆ. ನಕಾರಾತ್ಮಕ ಜನ ತಾವು ಮುಳುಗುವುದಲ್ಲದೆ ನಿಮ್ಮನ್ನು ಸಹ ಮುಳುಗಿಸುತ್ತಾರೆ. ಅವರ ತಲೆಯಲ್ಲಿರುವ ಕಸವನ್ನು ನಿಮ್ಮ ತಲೆಗೆ ವರ್ಗಾವಣೆ ಮಾಡಿ ತಮ್ಮ ಭಾರವನ್ನು ಇಳಿಸಿಕೊಳ್ಳುತ್ತಾರೆ. ಸದಾ ನಿಮ್ಮೊಂದಿಗೆ ನಕಾರಾತ್ಮಕ ಮಾತುಗಳನ್ನು ಹಂಚಿಕೊಳ್ಳುವಂತಹ ಜನರು ನಿಮ್ಮೊಂದಿಗಿದ್ದರೆ, ಅವರಿಂದ, ಅವರ ಸಂಭಾಷಣೆಯಿಂದ ದೂರ ಇರುವುದೇ ಜಾಣತನ. "ದಿನಾ ಸಾಯೋರ್ಗೆ ಅಳೋವ್ರು ಯಾರು?" ನನಗೆ ಸ್ವಲ್ಪ ತುರ್ತು ಕೆಲಸ ಇದೆ ಅಂತ ಹೇಳಿ ಮೊದಲು ಅಲ್ಲಿಂದ ಜಾಗ ಖಾಲಿ ಮಾಡಿ ನಿಮ್ಮ ಕೆಲಸಕ್ಕೆ ಹೋಗಿ.

- ಜಬೀವುಲ್ಲಾ ಖಾನ್

0 comments:

Post a Comment