ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ
ಮಲೆನಾಡ ಅಡಿಕೆ ಬೆಳಗಾರ ಸಂಕಷ್ಟದ ನಡುವೆಯೂ ವಿನೂತನ ಪ್ರಯೋಗಗಳನ್ನು ಮೈಗೂಡಿಸಿಕೊಳ್ಳುತ್ತಲಿದ್ದಾನೆ. ಫಸಲು ಚಿಗುರಿದ ಹಾಗೆ ಬಿಡುವಿಲ್ಲದೇ ಕೆಲಸ ನಿರ್ವಹಿಸುವ ಬೆಳೆಗಾರನಿಗೆ ಅಡಿಕೆ ಕೊನೆ ಕೊಯ್ಯುವದಕ್ಕೂ ಜನರು ಸಿಗುತ್ತಿಲ್ಲ. ಕಾಡಿ ಬೇಡಿ ದುಪ್ಪಟ್ಟು ಹಣ ಸುರಿದು ಅಡಿಕೆಯನ್ನು ಮರದಿಂದ ಕೆಳಗಿಳಿಸಿದ ನಂತರ ಎದುರಾಗುವ ಮತ್ತೊಂದು ಸಮಸ್ಯೆಯೆ ಅಡಿಕೆ ಸುಲಿಯಲು ಸಿಗದ ಕೂಲಿಗಳದ್ದು.ಬಹುಷ: ಕೂಲಿಗಳ ಸಮಸ್ಯೆಯಿಂದ ಮುಕ್ತಿ ಪಡೆಯುವ ಇನ್ನು ಕಾಲ ದೂರವಿರಲಿಕ್ಕಿಲ್ಲ. ಕಾರಣವಿಷ್ಟೆ ಮಾರುಕಟ್ಟೆಗೆ ಈಗಾಗಲೆ ಅಡಿಕೆ ಸುಲಿಯುವ ಯಂತ್ರ ಕಾಲಿಟ್ಟಿದೆ. ವಿದ್ಯುತ್ ಚಾಲಿತ ಯಂತ್ರವಾದ ಇದು ಕ್ಷಣಮಾತ್ರದಲ್ಲಿಯೇ ಸಿಪ್ಪೆಯಿಂದ ಅಡಿಕೆಯನ್ನು ಬೆರ್ಪಡಿಸಬಲ್ಲದು.

ಕಳೆದ 2ವರ್ಷಗಳ ಹಿಂದೆಯೆ ಈ ಯಂತ್ರ ಲಭ್ಯವಿದ್ದರೂ ಸಾಕಷ್ಟು ಪ್ರಚಾರವನ್ನು ಪಡೆದಿರಲಿಲ್ಲ ಮತ್ತು ಯಂತ್ರದ ಮೂಲಕ ಸುಲಿದ ಅಡಿಕೆ ಬಿರುಕನ್ನು ಬಿಡುತ್ತದೆ ಎಂಬ ವದಂತಿಯೂ ಕೇಳಿ ಬಂದಿತ್ತು. ಇತ್ತಿಚಿಗೆ ಲಭ್ಯವಿರುವ ಯಂತ್ರ ಎಲ್ಲಾ ವದಂತಿಗಳನ್ನು ಸುಳ್ಳು ಮಾಡಿದೆಯಲ್ಲದೇ ಸುಲಿಯುವ ವಿಧಾನವೂ ಸರಳವಾಗಿದೆ. ವಿದ್ಯುತ್ ಸಂಪರ್ಕವನ್ನು ಬೆಸದ ಕ್ಷಣದಲ್ಲಿಯೇ ಯಾವ ಕೂಲಿ ಆಳಿಗೂ ಕಡಿಮೆಯಿಲ್ಲದಂತೆ ಕಾರ್ಯ ನಿರ್ವಹಿಸುತ್ತದೆ. ಕಡಿಮೆ ಸಮಯದಲ್ಲಿ ಅಧಿಕ ಅಡಿಕೆಯನ್ನು ಸಿಪ್ಪೆಯಿಂದ ಬೆರ್ಪಡಿಸುವ ಈ ಯಂತ್ರದ ಕಾರ್ಯವೈಖರಿ ಹಾಗೂ ನಿರ್ವಹಣಾ ಜವಬ್ದಾರಿಯೂ ಸರಳವಾಗಿದ್ದು ಮುಂದಿನ ದಿನಗಳಲ್ಲಿ ಅಡಿಕೆ ಬೆಳೆಗಾರನ ಬಹುದೊಡ್ಡ ಕೂಲಿಯ ಸಮಸ್ಯೆ ಸುಲಲಿತವಾಗಿ ದೂರವಾಗುವದರಲ್ಲಿ ಯಾವದೇ ಸಂಶಯವಿರಲಿಕ್ಕಿಲ್ಲ.

ಸಚಿತ್ರ ಬರಹ : ಅಚ್ಯುತಕುಮಾರ,ಯಲ್ಲಾಪುರ

0 comments:

Post a Comment