ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ
ಉತ್ತರ ಕನ್ನಡ ಜಿಲ್ಲೆ ಜಲಪಾತಗಳ ತವರೂರು . ಜಿಲ್ಲೆಯಲ್ಲಿ ಹೆಜ್ಜೆ ಹೆಜ್ಜೆಗೂ ಎಂಬಂತೆ ಜಲಲ ಜಲಧಾರೆಗಳನ್ನು ಕಾಣಬಹುದಾಗಿದೆ. ಮಳೆಗಾಲದಲ್ಲಂತೂ ಉತ್ತರ ಕನ್ನಡ ಜಿಲ್ಲೆಯ ಜಲಪಾತಗಳು ಹುಚ್ಚೆದ್ದು ಕುಣಿಯಲಾರಂಭಿಸುತ್ತವೆ. ಜಲಪಾತಗಳು ತುಂಬಿ ಕುಪ್ಪಳಿಸಿ ದೃಶ್ಯಕಾವ್ಯದ ಸೃಷ್ಠಿಗೆ ಕಾರಣವಾಗುತ್ತವೆ.ಇದು ನಮ್ಮ ರಾಜ್ಯದ ಪ್ರಸಿದ್ಧ ಜಲಪಾತಗಳಲ್ಲಿ ಒಂದಾದ ಮಾಗೋಡು ಜಲಪಾತ.ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿರುವ ಈ ಜಲಧಾರೆ, ತಾಲೂಕಿನ ಕೇಂದ್ರದಿಂದ 20 ಕಿ.ಮೀ ದೂರದಲ್ಲಿದೆ.ಹುಬ್ಬಳ್ಳಿ ಸಮೀಪ ಹುಟ್ಟಿ ಮುಂದುವರೆದು ಮಾಗೋಡು ಸಮೀಪದಲ್ಲಿ ಜಲಪಾತವಾಗಿ ಧುಮ್ಮಿಕ್ಕುವದನ್ನು ಮಳೆಗಾಲದಲ್ಲಿ ನೋಡುವ ಆನಂದವೇ ಬೇರೆ.
ಮಳೆಗಾಲದಲ್ಲಿ ಈ ಸ್ಥಳ ಸ್ವರ್ಗದಂತೆಯೇ ಭಾಸವಾಗುತ್ತದೆ. ಪ್ರಕೃತಿಯ ಈ ಸ್ವರ್ಗವನ್ನು ನೀವು ಒಮ್ಮೆ ನೋಡಿ,ಕಣ್ತುಂಬುವ ನಿಸರ್ಗ ಸೌಂದರ್ಯವನ್ನು ಆಸ್ವಾದಿಸಿ...

- ಶ್ರೀಧರ ಭಟ್ಟ ಅಣಲಗಾರ

1 comments:

s.magod said...

good one. keep rwiting

Post a Comment