ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಸಂಪಾದಕೀಯ
ಕೇಂದ್ರ ಸರಕಾರ ಇನ್ನೆಂದಿಗೂ ತಲೆಯೆತ್ತುವಂತಿಲ್ಲ. ಮರ್ಯಾದೆ ಇದ್ದಲ್ಲಿ ಕೇಂದ್ರದ ಆಡಳಿತಾರೂಢ ಸರಕಾರ ಈ ರೀತಿಯ ಹೇಯಕೃತ್ಯ ಎಸಗುತ್ತಿರಲಿಲ್ಲ. ಕಾರಣ ಇಷ್ಟೇ. ಭ್ರಷ್ಟಾಚಾರದ ವಿರುದ್ಧ ಯೋಗ ಗುರು ಬಾಬಾ ರಾಮ್ ದೇವ್ ಆರಂಭಿಸಿದ್ದ ಹೋರಾಟಕ್ಕೆ ಕೇಂದ್ರ ಸ್ಪಂದಿಸಿದ ರೀತಿ.
ಶನಿವಾರ ಬೆಳಗ್ಗೆ 4.30ಕ್ಕೆ ನಿರಶನ ಸತ್ಯಾಗ್ರಹ ಆರಂಭಿಸಿದ ಬಾಬಾ ರಾಮ್ ದೇವ್ ಅವರಿಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿತ್ತು. ಯೋಗಿಗಳು, ಮಠಾಧಿಪತಿಗಳು, ಬಾಬಾ ರಾಮ್ ದೇವ್ ಅವರ ಅಪಾರ ಶಿಷ್ಯವರ್ಗ, ಬೆಂಬಲಿಗರು ದೆಹಲಿಯ ರಾಮಲೀಲಾ ಮೈದಾನದಲ್ಲಿ ಲಕ್ಷೊಪಾದಿಯಲ್ಲಿ ಜಮಾಯಿಸಿ ಶಾಂತರೀತಿಯಲ್ಲಿ ಸತ್ಯಾಗ್ರಹ ನಿರಶನ ಕೈಗೊಂಡಿದ್ದರು. ಇಡೀ ಭಾರತದಾದ್ಯಂತ ಬಾಬಾ ರಾಮ್ ದೇವ್ ಅವರ ಅಭಿಮಾನಿಗಳು ಈ ನಿರಶನ ಸತ್ಯಾಗ್ರಹದಲ್ಲಿ ಅಲ್ಲಲ್ಲಿ ಭಾಗಿಗಳಾಗಿ ಬೃಹತ್ ಜನಸ್ತೋಮದ ಬೆಂಬಲ ವ್ಯಕ್ತವಾಯಿತು.

ಗಡಗಡ ನಡುಗಿತು ಕೇಂದ್ರ
ಭ್ರಷ್ಟಾಚಾರ ವಿರುದ್ಧ ಸಮರ ಸಾರಿದ್ದ ರಾಮ್ ದೇವ್ ಅವರು , ವಿದೇಶದಲ್ಲಿರುವ ಕಪ್ಪು ಹಣವನ್ನು ರಾಷ್ಟ್ರೀಯ ಸಂಪತ್ತೆಂದು ಘೋಷಿಸಬೇಕು ಎಂಬ ಒತ್ತಾಯವನ್ನು ಮುಂದಿಡುತ್ತಲೇ ಕೇಂದ್ರ ಸರಕಾರ ಗಡಗಡ ನಡುಗಿದೆ. ಮಾತ್ರವಲ್ಲದೆ ರಾಮ್ ದೇವ್ ಅವರ ಮನವೊಲಿಸುವ ಕಾರ್ಯವೂ ನಡೆದಿದೆ. ಈ ರೀತಿಯ ಪ್ರತಿಭಟನೆ ನಡೆಸದಂತೆ ರಾಮ್ ದೇವ್ ಅವರ ಮನವೊಲಿಸಿ, ಕಾರ್ಯಕ್ರಮ ರದ್ದುಪಡಿಸುವಂತೆಯೂ ಒತ್ತಡಗಳನ್ನು ಹೇರಿದೆ. ಆದರೆ ಹಿಡದ ಹಟ ಬಿಡದ ರಾಮ್ ದೇವ್ ಅವರು ಸತ್ಯಾಗ್ರಹ ನಡೆಸಿಯೇ ತೀರುತ್ತೇನೆಂದು ಬಿಗಿಪಟ್ಟು ಹಿಡಿದು ಭ್ರಷ್ಟಾಚಾರದ ವಿರುದ್ಧ ಸಮರ ಸಾರಿದರು. ಇದಕ್ಕೆ ಅಭೂತಪೂರ್ವ ಜನ ಬೆಂಬಲ ಇಡೀ ರಾಷ್ಟ್ರದಾದ್ಯಂತ ವ್ಯಕ್ತವಾಗುತ್ತಲೇ ಕೇಂದ್ರಸರಕಾರದ ಬುಡ ಅಲ್ಲಾಡುವ ಸ್ಪಷ್ಟ ಸೂಚನೆ ರವಾನೆಯಾಯಿತು. ಅದರ ಹಿನ್ನಲೆಯಲ್ಲೆ ರಾತ್ರಿ 1.30ರ ವೇಳೆಗೆ ಕೇಂದ್ರ ಸರಕಾರ ಹೀನ ಕೃತ್ಯ ವೆಸಗಿತ್ತು. ಬಾಬಾ ರಾಮ್ ದೇವ್ ಅವರನ್ನು ಅಮಾನುಷವಾಗಿ ಬಂಧಿಸುವ ಮೂಲಕ ಇಡೀ ಹೋರಾಟವನ್ನು ಅಡ್ಡಿಪಡಿಸುವ ಕಾರ್ಯ ನಡೆಸಿತು.

ಮಾತು ತಪ್ಪಿತು ಎಂದ ಸರಕಾರ
ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ರಾಮ್ ದೇವ್ ಯೋಗಕ್ಕಾಗಿ ಅನುಮತಿ ಪಡೆದಿದ್ದರು. ಅದರೆ ಅವರು ಸತ್ಯಾಗ್ರಹ ಮಾಡಿದ್ದಾರೆ. ಈ ಕಾರಣಕ್ಕೆ ಅವರನ್ನು ಬಂಧಿಸಲಾಗಿದೆ ಎಂಬ ಕೇಂದ್ರದ ಮಾತು ನಿಜಕ್ಕೂ ಹಾಸ್ಯಾಸ್ಪದ.
1 ಮುಂಜಾನೆ 4.30ಕ್ಕೆ ನಿರಶನ ಕೈಗೊಂಡಿದ್ದ ರಾಮ್ ದೇವ್ ಹಾಗೂ ಅವರ ಸಂಗಡಿಗರನ್ನು ಆ ವೇಳೆಯೇ ಬಂಧಿಸದೆ ತಡರಾತ್ರಿ 1.30ರ ತನಕ ಸುಮ್ಮನೆ ಬಿಟ್ಟು ಮತ್ತೆ ಬಂದಿಸಲು ಕಾರಣವೇನು?
2.ರಾಮ್ ಲೀಲಾ ಮೈದಾನದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಜನ ಕುಳಿತುಕೊಳ್ಳಲು ಅನುಕೂಲವಾಗುವಂತಹ ಪೆಂಡಾಲ್, ದೊಡ್ಡ ವ್ಯವಸ್ಥೆ, ಇದಕ್ಕೆ ಪೂರಕವಾಗಿ ರಾಮ್ ದೇವ್ ಅವರ ಅಧಿಕೃತ ಮೂಲಗಳ ಮಾಧ್ಯಮ ಪ್ರಕಟಣೆಗಳು, ಮಾಧ್ಯಮದಲ್ಲಿ ನಿರಶನ ಸತ್ಯಾಗ್ರಹದ ಪೂರ್ವಭಾವೀ ವರದಿಗಳು...ಇಷ್ಟೆಲ್ಲಾ ಆಗಿದ್ದರೂ ತಡರಾತ್ರಿ 1.30ರ ವೇಳೆಗೆ ದೆಹಲಿ ಸರಕಾರ ಹಾಗೂ ಕೇಂದ್ರ ಸರಕಾರಕ್ಕೆ "ಜ್ಞಾನೋದಯ"ವಾಯಿತೇ? ರಾಮ್ ದೇವ ಅವರು ಯೋಗಕ್ಕಾಗಿ ಅವಕಾಶ ಪಡೆದಿದ್ದರೆಂಬುದು?
3. ಮುಂಜಾನೆಯಿಂದ ರಾಮ್ ದೇವ ಅವರು ನಿರಶನ ಸತ್ಯಾಗ್ರಹ ಕುಳಿತ ಸಂದರ್ಭದಲ್ಲಿ ಕೇಂದ್ರ ಸರಕಾರ ಬೇಡಿಕೆಗಳಿಗೆ ಒಪ್ಪಿರುವ ಘೋಷಣೆ ಮಾಡಿದ್ದೇಕೆ.? ಆ ಸಂದರ್ಭದಲ್ಲಿ ಕೇಂದ್ರ ಸರಕಾರಕ್ಕೆ ರಾಮ್ ದೇವ್ ಯೋಗ ಮಾಡುತ್ತಿದರೋ ಅಥವಾ ನಿರಶನ ಸತ್ಯಾಗ್ರಹ ನಡೆಸಿದರೋ, ಅಥವಾ ಭ್ರಷ್ಟಾಚಾರದ ವಿರುದ್ಧ ಸಮರ ಸಾರಿದರೋ ಎಂಬುದನ್ನು ತಿಳಿಯುವಷ್ಟೂ ಕನಿಷ್ಠ ಜ್ಞಾನ ಇದ್ದಿರಲಿಲ್ಲವೇ?.
4. ಅತ್ಯಂತ ಶಾಂತ ರೀತಿಯಲ್ಲಿ ನಡೆಯುತ್ತಿದ್ದ ಸತ್ಯಾಗ್ರಹದಲ್ಲಿ ಹುಳಿಹಿಂಡುವ ಕಾರ್ಯವನ್ನು ಈ ಸರಕಾರ ಮಾಡಿದ್ದೇಕೆ. ಅಂದರೆ ಭ್ರಷ್ಟಾಚಾರ ದೇಶದಲ್ಲಿ ಮುಂದುವರಿಯಬೇಕು ಎಂಬುದು ಕೇಂದ್ರ ಸರಕಾರದ ನಿಜವಾದ ಆಸಕ್ತಿ ಎಂಬುದು ಬಟಾ ಬಯಲಾಯಿತಲ್ಲವೇ

ಬಾಬಾ ರಾಮ್ ದೇವ್ ಕಪ್ಪುಹಣದ ಬಗ್ಗೆ ಮಾತನಾಡಿದ್ದು ತಪ್ಪಾ? ಅಥವಾ ಭ್ರಷ್ಟಾಚಾರದ ವಿರುದ್ಧ ಅವರು ಧ್ವನಿ ಎತ್ತಿದ್ದು ತಪ್ಫಾ?...ಕೇಂದ್ರದ ಈ ರೀತಿಯ ಕುಟಿಲ ಧೋರಣೆಗೆ ಕಾರಣವೇನು? ಇನ್ನಾದರೂ ಕೇಂದ್ರ ಸರಕಾರ ತನ್ನ ಬುದ್ದಿ ತಿದ್ದಿಕೊಳ್ಳಬೇಕು. ಕೇಂದ್ರ ಸರಕಾರ ತನ್ನ ನೀಚಬುದ್ದಿಯನ್ನು ಬಿಡಬೇಕಾಗಿದೆ. ಭ್ರಷ್ಟಾಚಾರ ನಿರ್ಮೂಲನೆಗೆ ಕೈ ಜೋಡಿಸಬೇಕಾಗಿದೆ.

2 comments:

Nanda Kishor B said...

ನೈತಿಕತೆ ಮೊದಲೇ ಇರಲಿಲ್ಲ..
ಈಗ ಅಲ್ಪ ಸ್ವಲ್ಪ ಇದ್ದಿದ್ದ ಮಾನವೀಯತೆಯೂ ಇಲ್ಲವೆಂದು ಸಾಬೀತಾಯಿತು...!!!

Anonymous said...

Mr. Nanda kishor B.
karnataka daliruva BJP sarakarake nithikathe manaviyathe edye???

Dr.radhaKrishna

Post a Comment