ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಚಾರ
ಸಮಯಕ್ಕೆ ಅನುಸಾರವಾಗಿ ಮಾತನಾಡಿ

ಪ್ರತಿಯೊಂದು ಆಚಾರವಿಚಾರಕ್ಕೂ ಒಂದು ನಿರ್ದಿಷ್ಟ ಸಮಯವಿದೆ. ಅದರಲ್ಲೂ ಮುಖ್ಯವಾಗಿ ನೀವು ಬೇರೆಯವರಿಂದ ಯಾವುದೇ ಸಹಾಯ ಪಡೆಯಬೇಕಾದರೆ ಸರಿಯಾದ ಸಮಯ ಆರಿಸಿಕೊಳ್ಳಿ. ಮೊದಲು ನಿಮ್ಮ ಮುಂದಿರುವ ವ್ಯಕ್ತಿಯ ಭಾವನೆಗಳನ್ನು ತಿಳಿದುಕೊಳ್ಳಿ. ಆತ ಮುಖ್ಯವಾದ ಕೆಲಸದಲ್ಲಿ ತೊಡಗಿದ್ದಾನೆಯೇ? ಆತಂಕದಲ್ಲಿದ್ದಾನೆಯೇ? ಚಿಂತೆಯಲ್ಲಿ ಮುಳುಗಿದ್ದಾನೆಯೇ? ಆರೋಗ್ಯವಾಗಿದ್ದಾನೆಯೇ? ಕೋಪದಲ್ಲಿದ್ದಾನೆಯೇ? ಯಾವುದೋ ಪರಿಸ್ಥಿತಿಗೆ ಸಿಲುಕಿ ನರಳುತ್ತಿದ್ದಾನೆಯೇ? ಮಲಗಿ ಕೊಂಡಿದ್ದಾನೆಯೇ? ಇತ್ಯಾದಿ...ಇತ್ಯಾದಿ...ಸರಿಯಾದ ಸಮಯ,ಜಾಗ,ವಾತಾವರಣ ನೋಡಿ ಏನನ್ನು ಕೇಳಬೇಕೋ,ಹೇಳಬೇಕೋ ಶಾಂತಿಯಿಂದ ನಗುನಗುತ್ತಾ, ವಿನಮ್ರತೆಯಿಂದ ಕೇಳಿ ಅಥವಾ ಹೇಳಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ. ಅನಾವಶ್ಯಕವಾಗಿ ಮಾತನಾಡದೆ ಆದಷ್ಟು ವಿಷಯಕ್ಕೆ ಸಂಬಂಧಪಟ್ಟ ಮಾತುಗಳನ್ನು ಮಧ್ಯಮ ಧ್ವನಿಯಲ್ಲಿ ಮಾತನಾಡಿ.

ಇವುಗಳನ್ನು ಆಡಬೇಡಿ:
1. ಬೇರೆಯವರಿಗೆ ನೋವುಂಟು ಮಾಡುವ, ಮನಸ್ಸು ಮುರಿಯುವ ಮತ್ತು ಬೇರೆಯವರ ಬೆನ್ನಹಿಂದೆ,ಬೇರೆಯವರ ಗೌರವಕ್ಕೆ ಧಕ್ಕೆ ಉಂಟಾಗುವ ರೀತಿಯಲ್ಲಿ
2.ಯಾರನ್ನು ಅಡ್ಡ ಹೆಸರುಗಳಿಂದ ಕರೆದು
3.ಮೊಬೈಲಿನಲ್ಲಿ ಊರೆಲ್ಲ ಕೇಳಿಸಿಕೊಳ್ಳುವ ಹಾಗೆ
4.ಬಾತ್ ರೂಮ್ ನಲ್ಲಿ
5.ಏಕವಚನದಲ್ಲಿ ಯಾರಿಗೂ ಕರೆದು
6.ಮಕ್ಕಳ ಮುಂದೆ ಬೈಗುಳಗಳನ್ನು
7.ಕೋಪದಲ್ಲಿ ಯಾರಿಗೂ
8.ಎಲ್ಲರ ಮುಂದೆ ಎಲ್ಲವನ್ನೂ
9.ಅಹಂ ಭಾವನೆಯಿಂದ
10.ಅನಾವಶ್ಯಕವಾಗಿ
11.ಸವಾರಿ ಓಡಿಸುತ್ತಾ ಮೊಬೈಲ್ ನಲ್ಲಿ


- ಜಬೀವುಲ್ಲಾ ಖಾನ್.

0 comments:

Post a Comment