ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
4:34 PM

ಎನ್.ಸಿ.ಸಿ ಕಲರವ...

Posted by ekanasu

ರಾಜ್ಯ - ರಾಷ್ಟ್ರ

ಮೂಡಬಿದಿರೆ: 18ನೆಯ ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ ಮಂಗಳೂರು ಇದರ ಸಂಯುಕ್ತ ವಾರ್ಷಿಕ ವಿಶೇಷ ಶಿಬಿರ ಮೂಡಬಿದಿರೆ ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಕ್ಯಾಂಪಸ್ ನಲ್ಲಿ ಪ್ರಾರಂಭಗೊಂಡಿದೆ.



ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕಾಲೇಜು ಹಾಗೂ ಹೈಸ್ಕೂಲ್ ವಿಭಾಗದ 500 ಕೆಡೆಟ್ಗಳು ಈ ಶಿಬಿರದಲ್ಲಿ ಪಾಲ್ಗೊಂಡು ತರಬೇತಿ ಪಡೆಯುತ್ತಿದ್ದಾರೆ. 7 ಅಧಿಕಾರಿಗಳು ಹಾಗೂ 20 ಸೇನಾಧಿಕಾರಿಗಳು ಶಿಬಿರದ ನೇತೃತ್ವ ವಹಿಸಿ ತರಬೇತಿ ನೀಡುತ್ತಿದ್ದಾರೆ.



ನವದೆಹಲಿಯಲ್ಲಿ 2012ರಲ್ಲಿ ನಡೆಯುವ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಪಾಲ್ಗೊಳ್ಳುವ ಪೂರ್ವ ತಯಾರಿಯ ಶಿಬಿರದ ಇದಾಗಿದೆ. ಈ ಶಿಬಿರದಲ್ಲಿ ಉತ್ತಮ ತರಬೇತಿದಾರರ ಗುರುತಿಸುವಿಕೆ ನಡೆಯುತ್ತದೆ. ಬಿ ಮತ್ತು ಸಿ ಸರ್ಟಿಫಿಕೇಟ್ ಪರೀಕ್ಷೆಗೆ ಪೂರ್ವತಯಾರಿ ಈ ಶಿಬಿರದಲ್ಲಿ ನಡೆಯುತ್ತದೆ.
.22, ಎಸ್.ಎಲ್.ಆರ್ ರೈಫಲ್ ತರಬೇತಿ ಮತ್ತು ಫಯರಿಂಗ್ ತರಬೇತಿ ನಡೆಯುತ್ತಿದೆ.


ಉದ್ಘಾಟನೆ
ಶಿಬಿರವನ್ನು ಉದ್ಘಾಟಿಸಿದ ಕ್ಯಾಂಪ್ ಕಮಾಂಡಂಟ್ ಲೆಫ್ಟಿನೆಂಟ್ ಕರ್ನಲ್ ಅಲೋಕ್ ಪರಮಾರ್ ಶಿಬರಿದ ಉದ್ದೇಶ ಹಾಗೂ ಕಾರ್ಯಕ್ರಮಗಳ ವಿವರ ನೀಡಿದರು.



ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಕುರಿಯನ್ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳು ಜೀವನದಲ್ಲಿ ಗುರಿ ಇಟ್ಟು ಕಾರ್ಯಪ್ರವೃತ್ತರಾಬೇಕೆಂದು ಕರೆನೀಡಿದರು.



ತರಬೇತಿಯಲ್ಲಿ ಶ್ರೀ ಮಹಾವೀರ ಕಾಲೇಜಿನ ಕ್ಯಾ.ರಾಧಾಕೃಷ್ಣ ಶೆಟ್ಟಿ ,ಅತಿಥೇಯ ಆಳ್ವಾಸ್ ಕಾಲೇಜಿನ ಲೆ.ಡಾ.ರಾಜೇಶ್ ಬಿ, ಎಸ್.ವಿ.ಎಸ್ ಬಂಟ್ವಾಳದ ಲೆ.ಸುಂದರ್, ತುಂಬೆ ಪದವಿಪೂರ್ವ ಕಾಲೇಜಿನ ಫಸ್ಟ್ ಆಫೀಸರ್ ಅಬ್ದುಲ್ ಕಬೀರ್ , ಪಾದುವ ಪ್ರೌಢಶಾಲೆಯ ಫಸ್ಟ್ ಆಫೀಸರ್ ಸ್ಟ್ಯಾನಿ ತಾವ್ರೋ, ಮೂಡಬಿದಿರೆ ಜೈನ್ ಪದವಿಪೂರ್ವ ಕಾಲೇಜಿನ ಫಸ್ಟ್ ಆಫೀಸರ್ ಸುಧಾ ಮತ್ತು ಮೂಡಬಿದಿರೆ ರೋಟರಿ ಹೈಸ್ಕೂಲಿನ ಸೆಕೆಂಡ್ ಆಫೀಸರ್ ಗಜಾನನ ಮರಾಠೆ, ಕಾರ್ಯನಿರ್ವಹಿಸುತ್ತಿದ್ದಾರೆ.

0 comments:

Post a Comment