ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಸಂಪಾದಕೀಯ

ಒಂದೇ ದಿನ ವಿಧಿವಶರಾದರೂ ಇವರು ಅಷ್ಟು ಪ್ರಚಾರ ಗಿಟ್ಟಿಸಿಕೊಳ್ಳಲೇ ಇಲ್ಲ!ಕಲೆ ಎಂಬುದು ಚುಂಬಕ ಶಕ್ತಿ ಇದ್ದಂತೆ. ಕಲೆ ಎಲ್ಲರಿಗೂ ಒಲಿಯುವುದಿಲ್ಲ. ಕಲಾದೇವತೆ ಒಲಿದದ್ದೇ ಆದಲ್ಲಿ ಆ ಪ್ರತಿಭೆ ಹೊಂದಿದ ವ್ಯಕ್ತಿ ತುಸು ತನ್ನ ಶ್ರಮವಹಿಸಿದ್ದೇ ಆದಲ್ಲಿ ಉತ್ತುಂಗಕ್ಕೇರುವುದರಲ್ಲಿ ಸಂದೇಹವೇ ಇಲ್ಲ. ಆದರೆ ಕಲೆಯನ್ನು ಯಾವ ರೀತಿಯಾಗಿ ಬಳಸಿಕೊಳ್ಳಲಾಗುತ್ತಿದೆ ಎಂಬುದರ ಮೇಲೆ "ವ್ಯಕ್ತಿಯ ಗೌರವ ಮರ್ಯಾದೆ"ಗಳು ದೊರಕುತ್ತವೆ.

ಇಲ್ಲಿ ನಾವು ಒಂದು ಅಂಶವನ್ನು ಗಮನಿಸೋಣ. ಓರ್ವ ವರ್ಣಚಿತ್ರ ಕಲಾವಿದ ಹಾಗೂ ಓರ್ವ ಶಿಲ್ಪಕಲಾವಿದ ಉದಾಹರಣೆಯೊಂದಿಗೆ ಈ ಅಂಶವನ್ನು ಪ್ರಸ್ತುತ ಪಡಿಸಲಿಷ್ಟಪಡುತ್ತೇನೆ. ಈ ಸಾಧಕರಿಬ್ಬರ ನಡುವೆ ಪ್ರಾಯದಲ್ಲಿ ಹತ್ತು ವರುಷಗಳ ಕಾಲ ವ್ಯತ್ಯಾಸ . ಸಾಧನೆಗಳು ಸರಿಸುಮಾರು ಒಂದೇ ರೀತಿ. ಶ್ರಮವೂ ಹಾಗೇನೇ... ಆದರೆ ಒಬ್ಬರು ಉತ್ತಮ ಕಾರ್ಯದ ಮೂಲಕ ಕಲಾಸೇವೆಯನ್ನು ಮಾಡುತ್ತಾ ಬಂದರೆ ಮತ್ತೋರ್ವರು ಕಲೆಯನ್ನೇ ಪ್ರಚಾರದ ವಸ್ತುವನ್ನಾಗಿಸಿ ಅದರ ದುರುಪಯೋಗ ಮಾಡಿದರು ಹಾಗೂ ತನ್ಮೂಲಕವೇ ಅತ್ಯಂತ ಪ್ರಸಿದ್ಧಿ, ಪ್ರಚಾರ, ಪುರಸ್ಕಾರಗಳಿಗೆ ಭಾಜನರಾದವರು. ಹೇಗಿದೆ ನೋಡಿ ವೈಚಿತ್ರ್ಯ!

ಕಲಾವಿದ ಎಂ.ಎಫ್ ಹುಸೇನ್ ಹಾಗೂ ಶಿಲ್ಪಗುರು ಶಿಲ್ಪಿ ಶಾಮರಾಯ ಆಚಾರ್ಯ ಇವರಿಬ್ಬರ ಉದಾಹರಣೆಗಳೇ ಇಲ್ಲಿ ಮುಖ್ಯವಾಗುವುದು. ಎಂ.ಎಫ್ ಹುಸೇನ್ ಭಾರತದ ಪಿಕಾಸೋ ಎಂಬ ಗೌರವ ಪಡೆದ ಕಲಾವಿದ. ಅವರ ಚಿತ್ರಗಳಿಗೆ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ದೊರಕಿದೆ. ಆದರೆ ಅವರ ವಿದ್ವಂಸಕ ಮನಸ್ಸಿನ ಮೂಲಕ ಕಲಾವಿದ ಎಂ.ಎಫ್ ಹುಸೇನ್ ಓರ್ವ "ದೇಶದ್ರೋಹಿ" ಎಂಬಂತೆ ಗುರುತಿಸಿಕೊಂಡಿದ್ದರು ಎಂಬುದು ಕಹಿಸತ್ಯ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನೊಂದಿಗೆ ನಗ್ನ ಹೆಣ್ಣಿನ ಚಿತ್ರವನ್ನು ವಿರಾರವಾಗಿ ಬರೆದು "ಮದರ್ ಇಂಡಿಯಾ" ಎಂಬ ನಾಮಧೇಯದೊಂದಿಗೆ ಬಿಂಭಿಸಿದ್ದು ಹುಸೇನ್ ಅವರ ಕರಾಳ ಮನಸ್ಸಿನ ವಿಕೃತ ಮನೋಭಾವಕ್ಕೆ ಒಂದು ಕಟುನಿದರ್ಶನ. ಕಾರಣ ಭಾರತ ದೇಶದಲ್ಲೇ ಹುಟ್ಟಿ ಭಾರದ ದೇಶ ಹಾಗೂ ಹಿಂದೂ ದೇವತೆಗಳನ್ನು ನಗ್ನ ಹಾಗೂ ಅಪಹಾಸ್ಯರೀತಿಯಲ್ಲಿ ಚಿತ್ರಿಸಿ ದೇಶಭಕ್ತರ ಹಾಗೂ ಬಹುಸಂಖ್ಯಾತ ಹಿಂದೂ ಬಾಂಧವರ ಭಾವನೆಗೆ ಧಕ್ಕೆ ತಂದರು. ಅಷ್ಟು ಮಾತ್ರವಲ್ಲದೆ ಹಿಂದೂ ವಿರೋಧೀಗಳ, ಭಾರತ ದೇಶದ ವಿರೋಧಿಗಳ ಮೆಚ್ಚುಗೆಗೆ ಪಾತ್ರರಾದರು. ಸ್ವ ಇಚ್ಛೆಯಿಂದ ದೇಶ ತೊರೆದು ವಿದೇಶದಲ್ಲಿ ತಮ್ಮ ಪೌರತ್ವವನ್ನು ಪಡಕೊಂಡರು. ಹುಸೇನ್ ಅವರ ಚಿತ್ರಗಳು ವಿಭಿನ್ನವಾಗಿದ್ದವು. ಅವರು ಚಿತ್ರಿಸುವ ಚಿತ್ರಗಳಲ್ಲಿ ದೇಶ ಹಾಗೂ ಹಿಂದೂ ದೇವತೆಗಳನ್ನು ಬಿಂಭಿಸುವ ರೀತಿ ಅತ್ಯಂತ ಕೆಟ್ಟದಾಗಿತ್ತು. ಆ ಕಾರಣಕ್ಕಾಗಿ ಅವರು ತೀವ್ರ ಪ್ರತಿಭಟನೆಗಳನ್ನು ಎದುರಿಸುವಂತಾಯಿತು. ಇದನ್ನು ಪ್ರಚಾರದ ತಂತ್ರವನ್ನಾಗಿಸಿದ ಹುಸೇನ್ ತಮ್ಮ ಚಾಳಿ ಮುಂದುವರಿಸಿದರು.ಹಾಗೂ ಆ ರೀತಿಯಲ್ಲಿಯೇ ಅತ್ಯಂತ ಹೆಚ್ಚಿನ ಪ್ರಚಾರ ಗಿಟ್ಟಿಸಿಕೊಂಡು ಪ್ರಸಿದ್ಧಿ ಪಡೆಯತೊಡಗಿದರು.

ಹುಸೇನ್ ಅವರು 40ರ ದಶಕದಲ್ಲಿ ಹಿಂದಿ ಚಲನಚಿತ್ರಗಳಿಗೆ ಹೋರ್ಡಿಂಗ್ ಬರೆಯುವ ಮೂಲಕ ಕಲಾಜಗತ್ತಿಗೆ ಪ್ರವೇಶಿಸಿ ತಮ್ಮ ವೈಶಿಷ್ಟ್ಯಪೂರ್ಣ ರೇಖೆಗಳೊಂದಿಗೆ ಬಹುಬೇಗ ಪ್ರಸಿದ್ಧಿಗೆ ಪಾತ್ರರಾದರು. ಅಷ್ಟೇ ಅಲ್ಲದೆ ದೇಶದ ಅತ್ಯುತ್ತಮ ಕಲಾವಿದ ಎಂದು ಗುರುತಿಸಿಕೊಳ್ಳುವ ಮೂಲಕ ಹೆಚ್ಚಿನ ಬೆಲೆಗೆ ಇವರ ಕಲಾಕೃತಿಗಳು ಮಾರಾಟವಾಗತೊಡಗಿದವು. ಬರಿಗಾಲ ಕಲಾವಿದರಾದ ಹುಸೇನ್ ಭಾರತ, ಅಂತಾರಾಷ್ಟ್ರಗಳಲ್ಲಿ ತಮ್ಮ ಕಲಾಪ್ರತಿಭೆಯನ್ನು ಸಾದರ ಪಡಿಸಿಕೊಂಡವರು. ಇದು ಓರ್ವ ಕಲಾವಿದನ ಸಾಧನೆಯ ಪರಿಚಯವಾದರೆ...;

1926ರಲ್ಲಿ ಜನಿಸಿದ ಕೆ.ಶಾಮರಾಯ ಆಚಾರ್ಯರು ಕರ್ನಾಟಕ ರಾಜ್ಯದ ಕಾರ್ಕಳದವರು. ಇವರೊಬ್ಬ ಶ್ರೇಷ್ಟ ಶಿಲ್ಪಿ. ಅತ್ಯಂತ ಸರಳ ವ್ಯಕ್ತಿ, ಸಾಧಕ. ಯಾವುದೇ ರೀತಿಯಲ್ಲೂ ಕಲೆಯನ್ನು ದುರುಪಯೋಗ ಪಡಿಸದೆ ಕಲೆಯನ್ನು ಆರಾಧಿಸಿಕೊಂಡು ಬಂದವರು. ಶಿಲ್ಪಕಲೆಯೇ ತನ್ನ ಉಸಿರು ಎಂದು ನಂಬಿದವರು. ವಿವಿಧ ದೇಗುಲಗಳ ವಾಸ್ತುಶಿಲ್ಪವನ್ನು ದೇಶದಾದ್ಯಂತ ನಿರ್ವಹಿಸಿ ಕೀರ್ತಿ ತಂದವರು. ಇವರು ದೇವರನ್ನು ಉತ್ತಮ ರೀತಿಯಲ್ಲಿ ಬಿಂಭಿಸಿದ್ದರು. ತಮ್ಮ ಶಿಲ್ಪಗಳಲ್ಲಿ ದೈವೀ ಕಳೆಯನ್ನು ಮೂಡಿಸುವಲ್ಲಿ ಪ್ರಭಾವಪಡೆದವರು. ಇವರು ಕೆತ್ತಿದ ಎತ್ತರೆತ್ತರದ ದೈವೀ ಶಿಲ್ಪಗಳು ನವದೆಹಲಿ,ಮುಂಬೈ ಸೇರಿದಂತೆ ಭಾರತದ ವಿವಿಧ ರಾಜ್ಯಗಳಲ್ಲಷ್ಟೇ ಅಲ್ಲದೆ, ಲಂಡನ್, ಜಪಾನ್ ಮೊದಲಾದ ವಿದೇಶಗಳಲ್ಲಿ ಇಂದಿಗೂ ಪೂಜೆಗೊಳ್ಳುತ್ತಿವೆ. ಇವರು ಪ್ರಚಾರ ಬಯಸಿಲ್ಲ.ಬದಲಾಗಿ ಕಲೆಯನ್ನು ಆರಾಧಿಸಿದರು. ಆ ಕಾರಣಕ್ಕೆ ಒಂದಷ್ಟು ಪ್ರಶಸ್ತಿಗಳು ಅರಸಿ ಬಂದವು. ಆದರೆ ಎಂ.ಎಫ್ ಹುಸೇನರಂತೆ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡಿಲ್ಲ. ಕಾರಣ ಇವರ ಶ್ರಮ ಕೇಲವ ಕಲೆಗೆ ಮುಡಿಪಾಗಿತ್ತು. ಕಲಾಸೇವೆಗೆ ಮುಡಿಪಾಗಿತ್ತು. ಕಲೆಯನ್ನು ಪೂಜ್ಯತಾ ದೃಷ್ಠಿಯಿಂದ ಕಾಣುತ್ತಾ ಬಂದಿದ್ದರು.

ಈ ಈರ್ವರು ಕಲಾವಿಧರೂ ನಿಧನರಾಗಿದ್ದು ಒಂದೇ ದಿನ. ಇವರಿಬ್ಬರ ಮರಣ ವಾರ್ತೆಗಳು ಮಾಧ್ಯಮಗಳಲ್ಲಿ ಪ್ರಕಟಗೊಂಡವು. ಎಂ.ಎಫ್ ಹುಸೇನ್ ಪತ್ರಿಕೆಗಳಲ್ಲಿ ಮುಖಪುಟ ಸುದ್ದಿಯನ್ನು ಗಿಟ್ಟಿಸಿಕೊಂಡಿತು. ಸುದ್ದಿವಾಹಿನಿಗಳಲ್ಲಿ ಬ್ರೇಕಿಂಗ್ ನ್ಯೂಸ್ ಆಗಿ ಭಿತ್ತರಗೊಂಡವು. ಪ್ಯಾನಲ್ ಡಿಸ್ಕರ್ಷನ್ ಗೆ ವೇದಿಕೆ ಒದಗಿಸಿಕೊಟ್ಟಿತು. ದಿನಪೂರ್ತಿ ವಿಶೇಷ ಕಾರ್ಯಕ್ರಮಗಳು ಅವರ ಹೆಸರಿನಲ್ಲಿ ಪ್ರಸಾರಗೊಳ್ಳುತ್ತಲೇ ಇದ್ದವು. ಆದರೆ ಅಷ್ಟೇ ಸಾಧನೆ ಮಾಡಿದ, ಹಿಂದೂ ದೇವತೆಗಳ ಮೂರ್ತಿಗಳನ್ನು ಕೆತ್ತಿ, ಆ ಮೂರ್ತಿಗಳು ವಿವಿಧ ದೇಗುಲಗಳಲ್ಲಿ ಪೂಜೆಗೊಳ್ಳುತ್ತಾ ನಂಬಿದ ಭಕ್ತರ ಇಷ್ಟಾರ್ಥ ನೆರವೇರಿಸುತ್ತಾ ಬರುವಂತೆ ಮಾಡಿದ ಶಿಲ್ಪಿ ಶಾಮರಾಯ ಆಚಾರ್ಯರ ನಿಧನದ ಸುದ್ದಿ ಪತ್ರಿಕೆಗಳಲ್ಲಿ ಒಳಪುಟಕ್ಕಷ್ಟೇ ಸೀಮಿತವಾದವು. ಯಾವ ಮಾಧ್ಯಮಗಳಲ್ಲೂ ಬ್ರೇಕಿಂಗ್ ನ್ಯೂಸ್ ಆಗಲೇ ಇಲ್ಲ. ದಿನಪೂರ್ತಿ ಕಾರ್ಯಕ್ರಮವೂ ಭಿತ್ತರವಾಗಿಲ್ಲ.
ದೇವತೆಗಳ ಚಿತ್ರಗಳನ್ನು ನಗ್ನವಾಗಿ ಚಿತ್ರಿಸಿ, ಬಹುಸಂಖ್ಯಾತರ ಭಾವನೆಗಳಿಗೆ ಧಕ್ಕೆ ತಂದದ್ದೇ ಆದಲ್ಲಿ ಅವರಿಗೊಂದು ಮನ್ನಣೆ ನೀಡಲಾಗುತ್ತದೆ ಎಂಬುದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಅಗತ್ಯವಿಲ್ಲವಷ್ಟೇ...!

ಹರೀಶ್ ಕೆ.ಆದೂರು.

4 comments:

Anonymous said...

According to Congress and some artists, MFH has just shown his arts. Those who have raised their voice against his so called bloody art works, have been given title of Fanatics.

I have seen Mrs. Shabana Azmi, Shobha Dey,and Congress chamacha Digvijay Sing (the Shakuni of modern India) and many others have praised so much this dead devil called M F Hussain. You all might have seen on national TV channels?

Anonymous said...

Have a look on this blog
http://prajaprabhutva.blogspot.com/2011/06/blog-post_13.html

Anonymous said...

In both of the artist one has got wide coverage, one git less coverage for this how can we describe the responsibility of media? So here one thing is sure media also failing to give its actual work to the society re? But unfortunately TRP is the main thing to media.

Sudarshana Karkala said...

Publish news on facebook..

Post a Comment