ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಚಾರ
ಮಾತು ಬರುತ್ತೆ, ಮಾತು ಹೋಗುತ್ತೆ ಆದರೆ... ಹಠ ಬಿಡಿ

ಯಾರೋ ನಮಗೆ ಅವಮಾನ ಮಾಡಿರಬಹುದು. ಮೋಸ ಮಾಡಿರಬಹುದು. ಆ ಕಹಿನೆನಪುಗಳು ನಮ್ಮನ್ನು ಕಾಡುತ್ತಿರಬಹುದು. ಅಂತಹ ಘಟನೆಗಳನ್ನು ನೆನಪಿಸಿಕೊಂಡಾಗ ನಮ್ಮ ಮನಸ್ಸಿನಲ್ಲಿ ಅವರ ಬಗ್ಗೆ ದ್ವೇಷ ಹುಟ್ಟುವುದು ಸಹಜ ಕ್ರಿಯೆ. ದ್ವೇಷ ಯಾರ ಬಗ್ಗೆಯಾದರೂ ಇರಲಿ ಅದು ಎಂದೂ ಅಪಾಯಕಾರಿಯೇ. ದ್ವೇಷಾಗ್ನಿ ನಮ್ಮ ಮನಸ್ಸಿನಲ್ಲಿದ್ದರೆ ಅದು ನಮ್ಮನ್ನು, ನಮ್ಮ ಸುತ್ತಮುತ್ತಲಿನ ವಾತಾವರಣವನ್ನು ಸಹ ಸುಡುತ್ತದೆ.ಒಬ್ಬ ಸಾಮಾನ್ಯ ಮನುಷ್ಯ ಎಷ್ಟು ಭಾರ ಹೊರಬಲ್ಲ? ಅವನ ಸಾಮರ್ಥ್ಯಕ್ಕಿಂತ ಹೆಚ್ಚು ಭಾರ ಹೊರಬೇಕಾದರೆ ಬೆನ್ನು ಕುಗ್ಗುತ್ತದೆ. ಇನ್ನೂ ಹೆಚ್ಚು ಭಾರ ಬಿದ್ದರೆ ಭಾರ ಹೊರುವ ಅವನ ಕ್ಷಮತೆ ಕುಗ್ಗಿ ಭಾರದ ಕೆಳಗೆ ಸಿಲುಕಿ ಅವನ ಸಮಾಧಿಯೇ ಆಗಬಹುದು. ದ್ವೇಷ ಸಹ ಒಂದು ಭಾರ ಇದ್ದ ಹಾಗೆ. ನಮ್ಮ ಮನಸ್ಸಿನಲ್ಲಿ ಅದನ್ನು ಹೊತ್ತ್ತುಕೊಂಡು, ನಾವು ಎಲ್ಲಿ ಹೋಗುತ್ತೀವೋ ಅಲ್ಲಿ ಅದನ್ನು ಸಹ ಜೊತೆ ಜೊತೆಯಲ್ಲಿ ಕರೆದುಕೊಂಡು ಹೋಗುತ್ತೇವೆ. 100 ಕೆ.ಜಿ. ಭಾರದ ಮೂಟೆ ಹೊತ್ತ ಮನುಷ್ಯ ಹೇಗಿರುತ್ತಾನೆ. ಆತ ಭಾರ ಇಳಿಸಿದ ನಂತರ ಹೇಗಿರುತ್ತಾನೆ ಸ್ವಲ್ಪ ಗಮನಿಸಿ ನೋಡಿ. ಆತ ಆರಾಮಾಗಿ ಓಡಾಡಿಕೊಂಡು ತನ್ನನ್ನು ಬೇರೆ ಕೆಲಸ ಕಾರ್ಯಗಳಲ್ಲಿ ಆನಂದದಿಂದ ತೊಡಗಿಸಿಕೊಂಡಿರುತ್ತಾನೆ. ಭಾರ ಹೊತ್ತವನಿಂದ ಬೇರಾವ ಕೆಲಸ ಕಾರ್ಯಗಳನ್ನು ಮಾಡಲು ಸಾಧ್ಯವಿಲ್ಲ. ಭಾರವಿಲ್ಲದ ಮನಸ್ಸು ಆಕಾಶದಲ್ಲಿ ಸ್ವತಂತ್ರವಾಗಿ ಆನಂದದಿಂದ ಹಾರಾಡುತ್ತಿರುವ ಪಕ್ಷಿಯ ಹಾಗೆ. ನಾವು ಭಾರ ಕಳೆದುಕೊಳ್ಳಬೇಕಾದರೆ ಒಂದೇ ದಾರಿ - ಹಠ ಬಿಡಿಬೇಕು. ನಾವು ಯಾರನ್ನು ದ್ವೇಶಿಸುತ್ತಿರುತ್ತಿವೋ ಅವರ ಒಂದು ಪಟ್ಟಿ ಮಾಡಿ, ಮನದಾಳದಿಂದ, ನಿಸ್ವಾರ್ಥವಾಗಿ ಅವರನ್ನು ಕ್ಷಮಿಸಬೇಕಾಗುತ್ತದೆ.

ಇಂದೇ ಆದರೆ ಅವರನ್ನು ಭೇಟಿ ನೀಡಿ ಎರಡು ಆನಂದದ ಮಾತುಗಳನ್ನು ಆಡಿ. ದೂರವಿದ್ದರೆ ಕರೆ ಮಾಡಿ 5 ನಿಮಿಷ ಮನಸ್ಸು ಬಿಚ್ಚಿ ಮಾತನಾಡಿ. ತಪ್ಪು ನಿಮ್ಮದಾಗಿದ್ದರೆ ಕ್ಷಮೆ ಕೇಳಿ. ಅವರದಾಗಿದ್ದರೆ ಕ್ಷಮಿಸಿ. ಭಾರ ಮುಕ್ತರಾಗಿ. ಆಗ ನಿಮಗೆ ಏನೋ ಒಂದು ರೀತಿ ಮನಸ್ಸು ಹಗುರ ಆದ ಹಾಗೆ ಭಾಸವಾಗುತ್ತದೆ. ಆಗ ನಿಮ್ಮ ಭಾರ ಕಳೆಯಿತು ಎಂದರ್ಥ. ಒಂದು ರೀತಿಯ ಮನಃಶಾಂತಿ ದೊರಕುತ್ತದೆ. ಕಣ್ಣಲ್ಲಿ ಆನಂದಭಾಷ್ಪ ಸಹ ಉಕ್ಕಿ ಹರಿಯಬಹುದು. ನಿಮ್ಮ ಮನಸ್ಸು ಹಗುರವಾಯಿತಲ್ಲ ಅಷ್ಟೇ ಸಾಕು. ಮಾಯವಾಗಿದ್ದ ನಿಮ್ಮ ನಿದ್ದೆ ಇಂದು ನಿಮಗೆ ಕರೆಸಿ ಮಲಗಿಸುತ್ತದೆ.

- ಜಬೀವುಲ್ಲಾ ಖಾನ್

0 comments:

Post a Comment